ಶಿಕಾರಿಪುರ :ಯುವಕರು ಸದೃಢರಾದರೆ ನಮ್ಮ ದೇಶ ಸದೃಢವಾಗುತ್ತದೆ : ಸಂಸದ ರಾಘವೇಂದ್ರ..!
ಶಿಕಾಶಿಕಾರಿಪುರ: ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ, 75 ನೇ ವರ್ಷದ ಸ್ವಾತಂತ್ರ್ಯದ ಸಂಭ್ರಮದಲ್ಲಿ ನಮ್ಮ ಯುವ ಶಕ್ತಿ ರಾಷ್ಟ್ರ ಶಕ್ತಿಯಾಗಲಿ ಎಂದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಈ ಸುಸಜ್ಜಿತ ವ್ಯಾಯಾಮ ಶಾಲೆಯನ್ನು ಉದ್ಘಾಟನೆ ನಡೆಸಿ ಮಾತನಾಡಿದ ಅವರು ನಮ್ಮ ನಗರದ ಯುವಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ದೇಹವನ್ನು ಬಲಿಷ್ಠಗೊಳಿಸಿಕೊಳ್ಳುವುದರ ಜೊತಗೆ ದೇಶವು ಬಲಿಷ್ಠವಾಗಲಿದೆ ಎಂದರು.
ಶಿಕಾರಿಪುರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಪಿಪಿಪಿ ಮತ್ತು ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಎವಿಎಸ್ ಮಲ್ಟಿ ಜಿಮ್ ಆರಂಭವಾಗಿರುವುದು ಯುವಕರಿಗೆ ಪೋಲಿಸ್ ಇಲಾಖೆ ಸೇನೆ ಇನ್ನೂ ಹಲವಾರು ಸರ್ಕಾರಿ ಕೆಲಸಕ್ಕೆ ಪೂರ್ವ ತರಬೇತಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಜುಡೋ ಕ್ರೀಡಾಪಟು ಅವಿನಾಶ್ ವಾಚ್ಯನಾಯ್ಕ್. ರಾಮಾನಾಯ್ಕ್ ಬಿಜೆಪಿ ಮುಖಂಡರಾದ ಹಾಲಪ್ಪ. ಮೋಹನ್, ಬೆಣ್ಣೆ ದೇವೇಂದ್ರಪ್ಪ.ಪಲಾಕ್ಷಪ್ಪ,ಲಕ್ಷ್ಮಣ್, ಯುವ ಸಬಲೀಕರಣ ಇಲಾಖೆಯ ಮಂಜುನಾಥ್. ಪುರಸಭೆ ಅಧ್ಯಕ್ಷ ಲಕ್ಷ್ಮಿ ಮಾಲಿಂಗಪ್ಪ ಮತ್ತಿತರರು ಇದ್ದರು.
News By: Raghu Shikari-7411515737