ಶಿಕಾರಿಪುರ : ಪ್ರೌಢಶಾಲೆ ತರಗತಿಗಳು ಆರಂಭ ಕೋವಿಡ್ ನಿಯಮ ಪಾಲಿಸದ ಶಾಲೆಗಳು…!

ಶಿಕಾರಿಪುರ: ರಾಜ್ಯ ಸರ್ಕಾರ ಆದೇಶದ ಪ್ರಕಾರ ಶಿಕ್ಷಣ ಇಲಾಖೆ ಪ್ರೌಢಶಾಲಾ ತರಗತಿಗಳನ್ನು ಆರಂಭಿಸಲಾಗಿದ್ದು ಸೋಮವಾರದಿಂದ ಶಿಕಾರಿಪುರ ತಾಲೂಕಿನ ಬಹುತೇಕ ಶಾಲೆಗಳು ತೆರೆಯಾಗಿದೆ.

ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು ತರಗತಿಗಳನ್ನು ಶಿಕ್ಷಣ ಇಲಾಖೆ ಸ್ಯಾನಿಟೈಸರ್ ಮಾಡಿ ಪೂರ್ವ ಸಿದ್ದತೆ ಮಾಡಿಕೊಂಡಿತ್ತು.

ಅದರೆ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಇರಲಿಲ್ಲ ಇನ್ನೂ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಆಗಮಿಸುತ್ತಿದ್ದು ತರಗತಿಗಳಿಲ್ಲಿ ಅಂತರವನ್ನು ಕಾಯ್ದುಕೊಳ್ಳದೇ ಮಾಸ್ಕ್ ಹಾಕದೇ ತರಗತಿಗಳಲ್ಲಿ ಕುಳಿತಿರುವ ದೃಶ್ಯ ಕಂಡು ಬಂದಿತು.

ಕರೋನ ಮೂರನೇ ಅಲೆಯ ಆತಂಕದ ನಡುವೆಯೂ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಿದ್ದು ಮುಂಜಾಗ್ರತೆ ವಹಿಸುವಲ್ಲಿ ಶಾಲಾ ಆಡಳಿತ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೊರಿದೆ.
Newa by : Shikari-7411515737