ಶಿಕಾರಿಪುರ : ದೇಶದಲ್ಲಿ ಕೃಷಿಯ ನಂತರ ಹೆಚ್ಚಿನ ಉದ್ಯೋಗ ನೀಡುತ್ತಿರುವುದು ಕೈಗಾರಿಕೆಗಳು :ಸಂಸದ ಬಿ ವೈ ರಾಘವೇಂದ್ರ..!

ಶಿಕಾರಿಪುರ : ಶಿಕಾರಿಪುರ ಪಟ್ಟಣದ ಶಾಯಿ ಗಾರ್ಮೆಂಟ್ಸ್ ನಲ್ಲಿ ಎ. ಹೆಚ್.ಪಿ ಅಪ್ಪರೆಲ್ಸ್ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಿಟ್ ವಿತರಿಸಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು
ಶಾಹಿ ಗಾರ್ಮೇಂಟ್ಸ್ ನಿಂದ ಕುಟುಂಬ ನಿರ್ವಹಣೆ ಜೊತೆಗೆ ಗ್ರಾಮೀಣ ಭಾಗದಲ್ಲಿ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ.

ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಯ ನಂತರ ಕೈಗಾರಿಕೆಯಲ್ಲಿಯೇ ಹೆಚ್ಚಿನ ಉದ್ಯೋಗ ಸೃಷ್ಠಿಯಾಗಿದೆ
ನಮ್ಮೂರಿನ ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಸಿಗಬೇಕು ಆಗ ಮಾತ್ರ ಪ್ರಧಾನಿ ಮೋದಿಯವರ ಕನಸಿನಂತೆ ಮಹಿಳಾ ಸಬಲೀಕರಣ ಆಗತ್ತದೆ ಎಂದರು.

ಜಿಲ್ಲೆಯಲ್ಲಿ ಎಲ್ಲಾ ತಾಲೂಕ್ ಕೇಂದ್ರಗಳಲ್ಲಿ ಶಾಹಿ ಕೈಗಾರಿಕಾ ಘಟಕಗಳನ್ನು ಸ್ಥಾಪನೆ ಮಾಡುಬೇಕು ಇದರಿಂದ ಮಹಿಳೆಯರು ಹೆಚ್ಚು ಉದ್ಯೋಗವನ್ನು ಪಡೆದು ಅರ್ಥಿಕವಾಗಿ ಸಭಲರಾಗುತ್ತರೆ.

ಕುಟುಂಬದ ನಿರ್ವಹಣೆ ಜೊತೆ ಮಹಿಳೆ ಒಂದು ಕುಟುಂಬದ ಅರ್ಥಿಕ ನಿರ್ವಹಣೆಯಲ್ಲಿ ಮಹತ್ವ ಪಾತ್ರವನ್ನು ನಿರ್ವಹಿಸುತ್ತಾರೆ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತೇಜಸ್ವಿನಿ ರಾಘವೇಂದ್ರ,ಸಂಸ್ಥೆಯ ಶಾಹಿ ಮುಖ್ಯಸ್ಥರು ಚಿತ್ರಶೇಖರ್. ಲೋಕೇಶ್. ಜೀವಿತ್ ಇದ್ದರು.
News by: Raghu Shikari-7411515737
.