ಶಿಕಾರಿಪುರ: ಲಂಬಾಣಿ ಸಮಾಜದವರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಬಿಡುವುದಿಲ್ಲ : ಡಿ.ಕೆ ಶಿವಕುಮಾರ್..!

ಶಿಕಾರಿಪುರ: ಲಂಬಾಣಿ ಸಮಾಜದವರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಬಿಡುವುದಿಲ್ಲ : ಡಿ.ಕೆ ಶಿವಕುಮಾರ್..!

ಶಿಕಾರಿಪುರ ತಾಲೂಕಿನ ಬೇಗೂರು ತಾಂಡದಲ್ಲಿ ಗುರುವಾರ ಲಂಬಾಣಿ ಜನರೊಂದಿಗೆ ಕುಂದುಕೊರತೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಲಂಬಾಣಿ ಜನತೆಗೆ ಮೂಲಭೂತ ಸೌಕರ್ಯಗಳ ಒದಗಿ ಕುಂದುಕೊರೆತೆಗಳನ್ನು ಸರಿ ಪಡಿಸುವ ಪ್ರಯತ್ನ ಮಾಡುತ್ತೇನೆ ಒಕ್ಕಲೇಬ್ಬಿಸಲು ಯಾವುದೇ ಕಾರಣಕ್ಕೂ ನಮ್ಮ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ನಿಮ್ಮೊಂದಿಗೆ ನಾವು ಇದ್ದೇವೆ.

ಬಗರ ಹುಕುಂ ಭೂ ಮಂಜೂರಾತಿ ಬಗ್ಗೆ ರಾಷ್ಟಮಟ್ಟದ ಈ ವಿಷಯಗಳ ಕೇಂದ್ರ ಸರ್ಕಾರ ಒತ್ತಾಯ ಮಾಡುತ್ತೇವೆ.

ಕಾಗೋಡು ತಿಮ್ಮಪ್ಪ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾಡಿ ಗೇಣಿದಾರರಿಗೆ ಒದಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.

ಹೆಣ್ಣು‌ಮಕ್ಕಳ ವಿದ್ಯಾಭ್ಯಾಸ ಉದ್ಯೋಗ ಸೃಷ್ಠಿ ಪ್ರಯತ್ನ ಮಾಡುತ್ತೇನೆ ನಿಮ್ಮ ಸಮಾಜದೊಂದಿಗೆ ನನ್ನ ಬಾಲ್ಯವನ್ನು ಕಳೆದಿದ್ದೇನೆ ನಿಮ್ಮ ಆಚಾರ ವಿಚಾರ ಸಂಕಷ್ಟದ ಅರಿವಿದೆ ಎಂದರು.

ಕಾಂಗ್ರೆಸ್ ಬಿಜೆಪಿ ದಳ ಎಂದು ರಾಜಕೀಯ ಮಾಡಲು ನಾನು ಬಂದಿಲ್ಲ ನಿಮ್ಮ ಸಮಸ್ಯೆಗಳಿಗೆ ದ್ವನಿಯಾಗಿ ನಾನು ಇರುತ್ತೇನೆ‌ ಮಲೆನಾಡು ಮಳೆ, ವಾತಾವರಣ , ಜೀವನ ಶೈಲಿ ಸಂಸ್ಕೃತಿ ಸಂಪತ್ತು ಉತ್ತಮವಾಗಿದೆ.

ನೀವು ಹೇಳಿರುವ ವಿಷಯಗಳನ್ನು ನಾವು ಬರೆದುಕೊಂಡು ಮುಂದಿನ ದಿನಗಳಲ್ಲಿ ಇದಕ್ಕೆ ನಮ್ಮ ನಾಯಕರು ಮುಖಂಡರು ಮುಂದಿನ ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈ ಕುರಿತು ಪ್ರಕಟಿಸಿ ಈಡೇರಿಸುತ್ತೇವೆ ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂದರು.

ಈ‌‌ ಸಂದರ್ಭದಲ್ಲಿ ಮಾಜಿ ಸಚಿವ ರುದ್ರಪ್ಪ ಲಂಬಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ‌ ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಎಂಎಲ್ ಸಿ ಪ್ರಸನ್ನಕುಮಾರ್, ತೀನಾ‌ಶ್ರೀನಿವಾಸ್,ಮಾಜಿ ಶಾಸಕ ಪ್ರಕಾಶ್ ರಾಥೋಡ್,ಶಿವಮೂರ್ತಿ ನಾಯ್ಕ್, ಕನಿರಾಮ್ ನಾಯ್ಕ್,ಮಾಜಿ ಎಂಎಲ್‌ಸಿ ಶಾಂತವೀರಪ್ಪ ಗೌಡ, ತಾಲೂಕ್ ಅಧ್ಯಕ್ಷ‌ ಗೋಣಿ ಮಾಲತೇಶ್,‌ ಮತ್ತಿತ್ತರಿದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!