ಆರೋಗ್ಯಕರ ಗೋಧಿ ಖಾದ್ಯಗಳು ಸಿದ್ಧಗೋಧಿ ಮಾತ್ರ ನಮಗೆ ಆರೋಗ್ಯಕೊಡಬಲ್ಲದು…!

ಆರೋಗ್ಯಕರ ಗೋಧಿ ಖಾದ್ಯಗಳು ಸಿದ್ಧಗೋಧಿ ಮಾತ್ರ ನಮಗೆ ಆರೋಗ್ಯಕೊಡಬಲ್ಲದು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✒️ ಇಂದಿನ ವಿಷಯ:
ಆರೋಗ್ಯಕರ ಗೋಧಿ ಖಾದ್ಯಗಳು:

ಗೋಧಿಗೆ ಶುದ್ಧಿ ಮತ್ತು ಸಿದ್ಧಿ ಎಂಬ ಎರಡು ಸಂಸ್ಕಾರಗಳು ಇವೆ. ಈ ಎರಡು ಸಂಸ್ಕಾರಗಳ ನಂತರ ಅದನ್ನು ಸಿದ್ಧಗೋಧಿ ಎಂದು ಕರೆಯಲಾಗುತ್ತದೆ. ಅದರ ತಯಾರಿಕಾ ಸಂಸ್ಕಾರವನ್ನು ನಿನ್ನೆಯ ಸಂಚಿಕೆ ನೋಡಿ ಪಡೆಯಿರಿ.

ಈ ಸಿದ್ಧಗೋಧಿ ಮಾತ್ರ ನಮಗೆ ಆರೋಗ್ಯ ಕೊಡಬಲ್ಲದು.

ಆರೋಗ್ಯಕರ ಗೋಧಿ ಖಾದ್ಯಗಳು:
• ಸಿದ್ಧಗೋಧಿ ಪಾಯಸ
• ಸಿದ್ಧಗೋಧಿ ಅನ್ನ
• ಸಿದ್ಧಗೋಧಿ ಉಪ್ಪಿಟ್ಟು
• ಸಿದ್ಧಗೋಧಿ ಶ್ಯಾವಿಗೆ
• ಸಿದ್ಧಗೋಧಿ ಹುಡಿರೊಟ್ಟಿ(ಮಾದಲಿ)
• ಸಿದ್ಧಗೋಧಿ ಕಡುಬು
• ಸಿದ್ಧಗೋಧಿ ದೋಸೆ
• ಸಿದ್ಧಗೋಧಿ ಇಡ್ಲಿ
• ಸಿದ್ಧಗೋಧಿ ಬಾಟಿ
•••••••••••••••••••••••••••••••••


ಸಿದ್ಧಗೋಧಿ ಪಾಯಸ:
ಹುಡಿ ತೆಗೆದ ಗೋಧಿಯನ್ನು 6-7 ತಾಸು ನೀರಿನಲ್ಲಿ ನೆನೆಸಿಟ್ಟು ಬಿಳಿಯ ಹಾಲು ಬರುವಂತೆ ಒರಳಿನಲ್ಲಿ ನಿಧಾನವಾಗಿ ರುಬ್ಬಬೇಕು, ಆಗದಿದ್ದರೆ ಮಿಕ್ಸರ್‌ನಲ್ಲಿ ರುಬ್ಬಿ. ಇದು ಹರಳು ಹರಳಾಗಿರುವಂತೆ ಇರಲಿ, ನುಣ್ಣಗಾಗುವುದು ಬೇಡ.

ಅದನ್ನು ಸೋಸಿದರೆ ಬಿಳಿಯ ಹಾಲು ಬರುತ್ತದೆ, ಬಂದ ಬಿಳಿ ಹಾಲನ್ನು ಪ್ರತ್ಯೇಕವಾಗಿ ತೆಗೆದಿಡಿ.

ನಂತರ – ಗೋಧಿಯನ್ನು ಆರು ಪಟ್ಟು ನೀರಿಗೆ ಹಾಕಿ ನಿಧಾನವಾಗಿ ಮೃದುವಾಗಿ ಲೋಳೆ ಬಿಟ್ಟುಕೊಳ್ಳುವ ತನಕ ಬೇಯಿಸಿಕೊಳ್ಳಿ.

ನಂತರ – ಗೋಧಿಯ 1½ ಪ್ರಮಾಣಕ್ಕಿಂತ ತುಸು ಹೆಚ್ಚು ಸಾವಯವ ಬೆಲ್ಲವನ್ನು(ಮೆದುವಾಗುವಂತೆ ಕುಟ್ಟಿದ ಬೆಲ್ಲ) ಸೇರಿಸಿ ಸುಮಾರು 20 ನಿಮಿಷ ಮಂದ ಅಗ್ನಿಯಲ್ಲಿ ಬೇಯಿಸಿರಿ.

ನಂತರ – ಗೋಧಿಯ ಹಾಲನ್ನು ಸೇರಿಸಿ ತಿರುವುತ್ತಾ 4-5 ನಿಮಿಷ ಮೃದುವಾದ ಅಗ್ನಿಯಲ್ಲಿ ಬೇಯಿಸಿ.

ನಂತರ ಗೋಡಂಬಿ, ಗೇರುಬೀಜ, ಗಸಗಸೆ, ಖರ್ಜೂರ ಮುಂತಾದ ನಿಮ್ಮಿಷ್ಟದ ಮೇಲೋಪಚಾರ ದ್ರವ್ಯಗಳನ್ನು ಸೇರಿಸಿಕೊಳ್ಳಿ.

ಅಗ್ನಿಯಿಂದ ಇಳಿಸಿ, ಹತ್ತು ನಿಮಿಷ ಬಿಟ್ಟರೆ, ಬಳಸಲು ಸಿದ್ಧಗೋಧಿ ಪಾಯಸ ತಯಾರಾಗುತ್ತದೆ!!

ಸೇವನಾ ವಿಧಾನ:
ಈ ಸಿದ್ಧ ಗೋಧಿ ಪಾಯಸವನ್ನು ಸ್ವಲ್ಪವೇ ತಣ್ಣಗಾದ ಮೇಲೆ(ಬೆಚ್ಚಗಿರುವಂತೆ) ಸೇವಿಸಿ. ಸೇವಿಸುವಾಗ ತುಪ್ಪ, ಹಾಲು ಸೇರಿಸಿಕೊಳ್ಳಿ.

(ತುಪ್ಪ, ಹಾಲು ಸೇರಿಸದೇ ಸೇವಿಸುವುದು ಬೇಡ.)

ಹೀಗೆ ಸೇವಿಸಿದ ಸಿದ್ಧಗೋಧಿ ಪಾಯಸವು
ಪೌರುಷ ಬಲವನ್ನು ಹೆಚ್ಚಿಸುತ್ತದೆ.
ವೀರ್ಯ ವರ್ಧಕ.
ಬಲಕಾರಕ.
ಸುಲಭವಾಗಿ ಜೀರ್ಣವಾಗುತ್ತದೆ.
ಉದರಕ್ಕೆ ಬಲವನ್ನು ಕೊಡುತ್ತದೆ.
ಧಾತುಗಳನ್ನು, ವಿಶೇಷವಾಗಿ ಅಸ್ಥಿ-ಮಜ್ಜಾಗಳನ್ನು ಪೋಷಣೆ ಮಾಡುತ್ತದೆ.

ಆದರೆ, ಹೀಗೆ ಆಹಾರ ಸಿದ್ಧಿ ಮಾಡದೇ ಗೋಧಿ ನುಚ್ಚಿನಿಂದ ತಯಾರಿಸುವ ಪಾಯಸ ಅನಾರೋಗ್ಯ ತರುತ್ತದೆ!

ಮುನ್ನೆಚ್ಚರಿಕೆಗಳು:
ಮಧುಮೇಹ ಇರುವವರು, ಬೆಲ್ಲ ಕಡಿಮೆ ಮಾಡಿಕೊಂಡು ಸೇವಿಸುವುದು ಆರೋಗ್ಯಕರವಲ್ಲ. ಮೇಲಿನ ವಿಧಾನದಂತೆಯೇ ತಯಾರಿಸಿ ಪಾಯಸವನ್ನೇ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಇದರಿಂದ ಖಂಡಿತಾ ಮಧುಮೇಹ ಹೆಚ್ಚುವುದಿಲ್ಲ. ಮರುದಿನ ರಕ್ತದ ಸಕ್ಕರೆ ಅಂಶ 10-20unit ಹೆಚ್ಚಬಹುದು, ಅಪಾಯವಂತೂ ಖಂಡಿತಾ ಇಲ್ಲ.
ಆದರೆ,
ಇದರ ಹೊರತಾಗಿ ಎಣ್ಣೆ ತಿಂಡಿ ತಿನ್ನುವುದರಿಂದ ಮಧುಮೇಹ ಅಪಾಯಕರವಾಗಿ ಹೆಚ್ಚುತ್ತದೆ.

ಮಕ್ಕಳಿಗೆ ಹದಿನೈದು ದಿನಕ್ಕೊಮ್ಮೆ ಕೊಡುವುದರಿಂದ,‌ ಅವರ ಮೂಳೆಗಳು ಬಲಗೊಂಡು, ಮಾಂಸಗಳ ಶಕ್ತಿ ವರ್ಧಿಸುತ್ತದೆ ಮತ್ತು ಚೆನ್ನಾಗಿ ಆಟವಾಡುವ ಮಕ್ಕಳಲ್ಲಿ ಎತ್ತರ ಹೆಚ್ಚಲು ಸಹಾಯಕವಾಗುತ್ತದೆ.

25 ವರ್ಷ ಮೇಲ್ಪಟ್ಟ ದೊಡ್ಡವರು 30 ಅಥವಾ 45 ದಿನಗಳಿಗೊಮ್ಮೆ ಸೇವಿಸಬಹುದು.

ಶಾರೀರಿಕ ವ್ಯಾಯಾಮ ಮಾಡುವವರು ಈ ಪಾಯಸದಿಂದ ಅತ್ಯಂತ ಹೆಚ್ಚು ಲಾಭ ಗಳಿಸಬಲ್ಲರು!

ಕೂತಲ್ಲೇ ಕುಳಿತುಕೊಳ್ಳುವರಿಗೆ ಅತ್ಯಂತ ಕಡಿಮೆ ಲಾಭದಾಯಕ. ಹಗಲು ನಿದ್ದೆ ಮಾಡುವವರಿಗೆ ಅನಿಷ್ಟದಾಯಕ!

ಹಾಗೂ

ಇಂದು ಪಾಯಸ ತಿಂದು ಚೆನ್ನಾಗಿ ವ್ಯಾಯಾಮ ಮಾಡಿದರೆ ರೋಗಕಾರಕವಾಗಿದೆ. ಅದರ ಬದಲು ಹಿಂದಿನ ದಿನ ಚೆನ್ನಾಗಿ ವ್ಯಾಯಾಮ ಮಾಡಿ ಮರುದಿನ ಸಿದ್ಧಗೋಧಿ ಪಾಯಸ ಸೇವಿಸಿದರೆ ಅತ್ಯಂತ ಶ್ರೇಷ್ಠ!

ಆತ್ಮೀಯರೇ,
ಹೀಗೆ ಒಂದು ವಸ್ತುವು ತಾನಾಗಿಯೇ ಎಲ್ಲ ಲಾಭವನ್ನೂ ತಂದುಕೊಡುವುದಿಲ್ಲ, ಅದರ ಸೇವನಾ ವಿಧಾನ, ಯಾರು ಯಾರಿಗೆ ಹೇಗೆ ಲಾಭದಾಯಕ ಎಂದು ಸಾಕಷ್ಟು ಮಾನದಂಡಗಳಿರುತ್ತವೆ.

ಅದರ ಹೊರತು ಕೇವಲ ರಾಸಾಯನಿಕಗಳ ಆಧಾರದಲ್ಲಿ ಆಹಾರ ಸೇವಿಸಿದರೆ ಹೇಗೆ ಒಳಿತಾಗಬಲ್ಲದು ಅಲ್ಲವೇ?!

ಸಂಪರ್ಕಕ್ಕೆ:
9148702645
8792290274

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ_
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ*_

Admin

Leave a Reply

Your email address will not be published. Required fields are marked *

error: Content is protected !!