ವ್ಯಾಕ್ಸಿನ್ ಪಡೆದ ನಂತರ ಅಪಾಯ ಬರುತ್ತಿರುವುದೇಕೆ? ಹೇಗೆ ತಡೆಯಬಹುದು..?

ವ್ಯಾಕ್ಸಿನ್ ಪಡೆದ ನಂತರ ಅಪಾಯ ಬರುತ್ತಿರುವುದೇಕೆ? ಹೇಗೆ ತಡೆಯಬಹುದು..?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ವ್ಯಾಕ್ಸಿನ್ ಪಡೆದ ನಂತರ ಅಪಾಯ ಬರುತ್ತಿರುವುದೇಕೆ? ಹೇಗೆ ತಡೆಯಬಹುದು?

ರಕ್ಷಣೆಗೆಂದೇ ಪಡೆಯುತ್ತಿರುವ ವ್ಯಾಕ್ಸಿನ್, ನಮ್ಮನ್ನು ಮೆತ್ತಗಾಗಿಸುತ್ತಿರುವುದೇಕೆ.? ಸುತ್ತ ಮುತ್ತಲಿನ ಜನರನ್ನು ನೋಡಿದ್ದೀರಿ, ತೊಂದರೆ ಪಟ್ಟು ಒದ್ದಾಡುತ್ತಿರುವುದು, ಕೆಲವರು ಪ್ರಾಣ ಕಳೆದುಕೊಂಡುದುದನ್ನು ನೋಡಿದ್ದೀರಿ.
ಇದು ವ್ಯಾಕ್ಸಿನ್ ನಿಂದ ಆಗುತ್ತಿರುವ ತೊಂದರೆಯೇ? ಅಥವಾ ಮತ್ತೇನಾದರೂ ಕಾರಣವೇ? ನೋಡೋಣ.

ವ್ಯಾಕ್ಸಿನ್ ತೆಗೆದುಕೊಳ್ಳಲು ಇರಬೇಕಾದ ದೇಹಸ್ಥಿತಿ:
ವ್ಯಾಕ್ಸಿನ್ ತಗೆದುಕೊಳ್ಳುವ ಮುನ್ನ
• ಕನಿಷ್ಟ 20-30ದಿನ ನೆಗಡಿ, ಶೀತ, ಜ್ವರ ಬಂದಿರಬಾರದು.
• ಕುಪೋಷಣೆ ಅಥವಾ ದುರ್ಬಲತೆ ಇರಬಾರದು.
• ಆರೋಗ್ಯವಂತ ಸದೃಢ ದೇಹಕ್ಕೆ ಮಾತ್ರ ವ್ಯಾಕ್ಸಿನ್ ಸೂಕ್ತ.
• ಎಣ್ಣೆ ತಿಂಡಿಗಳು, ಅತಿಯಾದ ಆಹಾರ ಅಥವಾ ಸಿಹಿ ಪದಾರ್ಥಗಳಿಂದ ಅಜೀರ್ಣ ಆಗಿರಲೇಬಾರದು.

ಏಕೆ?
ವ್ಯಾಕ್ಸಿನ್ ಚುಚ್ಚಿಸಿಕೊಂಡ ನಂತರ, ಶರೀರ ಆ್ಯಂಟಿಬಾಡಿ ಉತ್ಪತ್ತಿಯಲ್ಲಿ ತೊಡಗುತ್ತದೆ.

ಎಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂದರೆ ನಮ್ಮ ಮಜ್ಜೆ(ಬೋನ್ ಮ್ಯಾರೋ) ಯಿಂದ ಶಕ್ತಿಯನ್ನು ಹೀರಿ ರೋಗನಿರೋಧಕ ವ್ಯವಸ್ಥೆ ಬಲಪಡಿಸಿಕೊಳ್ಳುತ್ತದೆ.

ಶರೀರ ಯಾವುದೋ ಕಾರಣದಿಂದ ದುರ್ಬಲವಾಗಿದ್ದ ಸಂದರ್ಭದಲ್ಲಿ ತೆಗೆದುಕೊಳ್ಳುವ ವ್ಯಾಕ್ಸಿನ್ ನಮ್ಮನ್ನು ಅತ್ಯಂತ ದುರ್ಬಲಗೊಳಿಸಿ ಶೀತ, ಕೆಮ್ಮು, ಜ್ವರ ಉತ್ಪತ್ತಿ ಮಾಡುತ್ತದೆ.

ವ್ಯಾಕ್ಸಿನ್ ನಂತರ ಏನು ಮಾಡಬಾರದು?
ಇದು ಅತ್ಯಂತ ‌ಪ್ರಮುಖ ವಿಚಾರವಾಗಿದೆ.
ಮೇಲಿನ ಯಾವುದೇ ಸಂದರ್ಭದಲ್ಲಿ ವ್ಯಾಕ್ಸಿನ್ ಪಡೆದವರು ,
ಜ್ವರ
ಶೀತ
ನಿಶ್ಯಕ್ತಿ
ಇವುಗಳಿಂದ ಬಳಲುವುದು ಸತ್ಯ.

ಆಗ‌ ಕನಿಷ್ಟ 21ದಿನ ಚನ್ನಾಗಿ ವಿಶ್ರಾಂತಿ ಪಡೆಯಬೇಕು.
ಜ್ವರ ಬಂದರೆ, ಪ್ಯಾರಾಸಿಟಮೋಲ್ ಮಾತ್ರೆ ಗಿಂತ ಅಮೃತಾರಿಷ್ಟ ಸೇವಿಸಬೇಕು, ಇಲ್ಲದಿದ್ದರೆ ಜ್ವರ ನಿಯಂತ್ರಕ ಮಾತ್ರೆಯಿಂದ ಒಳಗಿನ ವ್ಯವಸ್ಥೆ ಧಕ್ಕೆ ಮಾಡಿಕೊಂಡು ಅದು ಸೋಂಕಿನಂತೆ ವರ್ತಿಸಲು ಆರಂಭಿಸುತ್ತದೆ.

ಪರೀಕ್ಷೆ ಮಾಡಿಸಿದರೆ ಕೊವಿಡ್ ಪಾಸಿಟಿವ್ ಬಂದೇ ಬರುತ್ತದೆ.

ಇದನ್ನು ಕೋವಿಡ್ ಪಾಸಿಟಿವ್ ಎಂದು ಭ್ರಮಿಸಿ ಆಂಟಿವೈರಲ್ , ಸ್ಟಿರಾಯ್ಡ್, ಆಕ್ಸಿಜನ್ ಮುಂತಾದ ಚಿಕಿತ್ಸೆಗೆ ಹೋದರೆ ಅಪಾಯ ತಂದುಕೊಳ್ಳುವುದಂತೂ ಸತ್ಯ.

ಈ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ನಿಮ್ಮ ಸುತ್ತಮುತ್ತಲಿನ ಈ ತರಹದ ಘಟನೆಗಳಿಗೆ ಹೋಲಿಸಿ ನೋಡಿ.

ಏನಾಗುತ್ತದೆ?
ಮೊದಲೇ ಹೇಳಿದಂತೆ ವ್ಯಾಕ್ಸಿನ್ ನಿಂದಾಗಿ ನಮ್ಮ ಬೋನ್ ಮ್ಯಾರೋ ಅತ್ಯಂತ ಹೆಚ್ಚು ಬಳಸಲ್ಪಟ್ಟು, ಆಳದಲ್ಲಿ ದುರ್ಬಲತೆ ಇರುತ್ತದೆ. ಇಂತಹ ಸಂಧರ್ಭದಲ್ಲಿ ಸ್ಟಿರಾಯ್ಡ್ ನಂತಹ ತೀಕ್ಷ್ಣ ಔಷಧಿಗಳನ್ನು ಬಳಸಿದರೆ ಬೋನ್ ಮ್ಯಾರೋ ಮತ್ತಷ್ಟು ತೀವ್ರವಾಗಿ ದುರ್ಬಲತೆಯನ್ನು ಹೊಂದಿ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ಆಗ ಯಾವ ಔಷಧಿಗಳೂ ವೆಂಟಿಲೇಟರ್ ಗಳೂ ಮನುಷ್ಯನನ್ನು ಸೋಂಕಿನಿಂದ ಹೊರತರಲು ಅಥವಾ ಬದುಕಿಸಿಕೊಳ್ಳಲು ಕಷ್ಟಸಾಧ್ಯ ಅಥವಾ ಅಸಾಧ್ಯವಾಗಿ ಬಿಡುತ್ತದೆ.

ಅತ್ಯಂತ ಸರಳ ಪರಿಹಾರಗಳು:
ವ್ಯಾಕ್ಸಿನ್ ಗೆ ಮೊದಲು ಕನಿಷ್ಟ ಒಂದು ತಿಂಗಳು ಯಾವುದಾದರೂ ಕಾರಣಕ್ಕೆ ಜ್ವರ ಬಂದಿದೆಯೇ ? ಹಾಗಿದ್ದರೆ, ವ್ಯಾಕ್ಸಿನೇಷನ್ ಅನ್ನು ಸಧ್ಯಕ್ಕೆ ಮುಂದೂಡುವುದು ಒಳಿತು.

ಶರೀರ ತೀವ್ರವಾಗಿ ದುರ್ಬಲಗೊಂಡಲ್ಲಿ ಸರಿಯಾದ ಪ್ರಮಾಣದಲ್ಲಿ ಜೀರ್ಣವಾಗಿ ಶಕ್ತಿಕೊಡುವ ಆಹಾರಗಳನ್ನು ಸೇವಿಸಿ , ನಿತ್ಯ ವ್ಯಾಯಾಮಗಳಿಂದ ಶರೀರವನ್ನು ಬಲಗೊಳಿಸಿಕೊಂಡು ವ್ಯಾಕ್ಸಿನ್ ಗೆ ಹೋಗುವುದು ಉತ್ತಮ.

ವ್ಯಾಕ್ಸಿನ್ ತೆಗೆದುಕೊಂಡು ನಂತರ

• ಶೀತ ಜ್ವರಾದಿಗಳು ಬಂದರೆ Viropyrine, Ayurlung, Viropyrine syrup , Trikatu powder, Praseema powder, Amurtarishta , Trishun tablet ಇಂತಹ ಸೂಕ್ತ ಆಯುರ್ವೇದ ಔಷಧಗಳನ್ನು ಸೇವಿಸಿ.
• ಅತ್ಯಂತ ಸರಳವಾಗಿ ಜೀರ್ಣವಾಗುವ ಆಹಾರಗಳನ್ನು ಮಾತ್ರ ಸೇವಿಸಿ
ಮತ್ತು
• ವಿಶೇಷವಾಗಿ 21 ದಿನಗಳ ಕಾಲ ಕುಟುಂಬಸ್ಥರಿಂದ ಪ್ರತ್ಯೇಕವಾಗಿಯೂ ಮತ್ತು ವಿಶ್ರಾಂತವಾಗಿಯೂ ಇರುವುದು ಮುಖ್ಯ.

ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಯಾರೂ ತೊಂದರೆಗೊಳಗಾಗದೇ ಈ ಸಂಕಷ್ಟದಿಂದ ಹೊರಬರಲು ಸಾಧ್ಯ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!