ಶಿಕಾರಿಪುರ: ಅಖಿಲ ಭಾರತೀಯ ವೀರಶೈವ ಮಹಾಸಭಾ ವತಿಯಿಂದ ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭ…!

ಶಿಕಾರಿಪುರ: ಅಖಿಲ ಭಾರತೀಯ ವೀರಶೈವ ಮಹಾಸಭಾ ವತಿಯಿಂದ ಉಚಿತ ಅಂಬ್ಯುಲೆನ್ಸ್ ಸೇವೆ ಆರಂಭ…!

ಶಿಕಾರಿಪುರ :ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿಕಾರಿಪುರ ತಾ.ಘಟಕದಿಂದ ತಾಲ್ಲೂಕಿನ ಕೋವಿಡ್ ಸೋಂಕಿತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಮೃತದೇಹವನ್ನು ರುದ್ರಭೂಮಿಗೆ ಸಾಗಿಸಲು ಉಚಿತ ಅಂಬ್ಯುಲೆನ್ಸ ವ್ಯವಸ್ಥೆ ಮಾಡಲಾಗಿದೆ.

ಬುಧವಾರ ಬೆಳಗ್ಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ
ಉಚಿತ ಅಂಬ್ಯುಲೆನ್ಸ್ 24×7 ಸೇವೆಗೆ ಮಾನ್ಯ ಸಂಸದರಾದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.

ವಿರಕ್ತಮಠದ ಶ್ರೀ ಮ.ನಿ.ಪ್ರ.ಚನ್ನಬಸವಸ್ವಾಮೀಜಿ ಇವರ ದಿವ್ಯಸಾನಿಧ್ಯ ವಹಿಸಿದ್ದರು.

ಸಾರ್ವಜನಿಕರು ಉಚಿತ ಅಂಬ್ಯುಲೆನ್ಸನ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮಹಾಸಭಾ ತಾ.ಘಟಕದ ಅಧ್ಯಕ್ಷರಾದ ಈರೇಶ್.ಎನ್.ವಿ, ಚನ್ನವೀರಪ್ಪ, ಬಿ.ಡಿ.ಭೂಕಾಂತ್, ಶಶಿಧರ್ ಚುರ್ಚಿಗುಂಡಿ, ರುದ್ರಮುನಿ, ಕೊಟ್ರೇಶ್ವರಪ್ಪ, ರಮೇಶ್, ಗಿರೀಶ್ ಧಾರವಾಡದ, ವೀರಣ್ಣಗೌಡ, ಕುಮಾರಸ್ವಾಮಿ, ಚನ್ನೇಶಪ್ಪ, ಶಿವಪ್ಪಯ್ಯ, ನಾಗರಾಜಸ್ವಾಮಿ, ಅಶೋಕಪ್ಪ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!