ಶಿಕಾರಿಪುರ :ಲಾಕ್ ಡೌನ್ ನೆಪದಲ್ಲಿ ಬಡವರನ್ನು ಮರೆತ ಸರ್ಕಾರ : ಹುಲಿಗಿ ಕೃಷ್ಣ ಆರೋಪ…!

ಶಿಕಾರಿಪುರ :ಲಾಕ್ ಡೌನ್ ನೆಪದಲ್ಲಿ ಬಡವರನ್ನು ಮರೆತ ಸರ್ಕಾರ : ಹುಲಿಗಿ ಕೃಷ್ಣ ಆರೋಪ…!

ಶಿಕಾರಿಪುರ : ಜನರ ತೊಂದರೆಗಳ ಬಗ್ಗೆ ಗಮನ ಹರಿಸದೇ ಲಾಕ್ ಡೌನ್ ಜಾರಿಗೆ ತಂದು ಜನರ ಮೇಲೆ ಲಾಠಿ ಪ್ರಹಾರ ಮಾಡುವುದನ್ನು ನೋಡುತ್ತ ಕುಳಿತ ಸರ್ಕಾರವಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಗರಂ ಆಗಿದ್ದಾರೆ.

ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಮೊದಲು ಯಾವುದೇ ಆಹಾರದ ಪ್ಯಾಕೇಜ್ ಆಗಲಿ, ತುರ್ತು ಸೇವೆಯ ಸಹಾಯವಾಣಿ ಗಳನ್ನು ಬೂತ್ ಮಟ್ಟದಿಂದ, ಆರಂಭಿಸದೆ ಜನ ಉಪವಾಸ ದಿಂದಲೇ ಸಾಯುವ ದಬ್ಬಾಳಿಕೆಯ ಹಿಟ್ಲರ್ ಆಡಳಿತ ಮಾಡ ಹೊರಟಿದೆ ಎಂದು ಹರಿಹಾಯ್ದಿದ್ದಾರೆ.

ಜನರಿಗೆ ಇಂದಿರಾ ಕ್ಯಾಂಟಿನ್ ನಿಂದ ಬಡವರ ಮನೆ ಬಾಗಿಲಿಗೆ ಕಡಿಮೆ ದರದಲ್ಲಿ ಊಟ ತಿಂಡಿ ನೀಡಿ ರೋಗಿಗಳು ಫೋನ್ ಮಾಡಿದ ಕೂಡಲೇ ಆಂಬುಲೆನ್ಸ್ ಗಳು ಮನೆ ಬಾಗಿಲಿಗೆ ಬರಲಿ, ಈಗ ಯಾವುದೇ ಅಟೋ ಕೂಡ ಇರುವುದಿಲ್ಲ.

ಸರ್ಕಾರ ತಮ್ಮ ಆದಾಯ ಹೆಚ್ಚಿಸಲು ತೆರೆದೆರುವ ಬಾರ್ ಗಳು ಕೂಡ ಫೋನ್ ಮೂಲಕ ಮನೆ ಬಾಗಿಲಿಗೆ ಪೂರೈಸಲಿ. ಆಗ ಯಾರೂ ಕೂಡ ಲಾಕ್ ಡೌನ್ ನಲ್ಲಿ ಹೊರಗಡೆ ಬರುವುದಿಲ್ಲ ಎಂದಿದ್ದಾರೆ.

ಮುಖ್ಯ ಮಂತ್ರಿಗಳು, ಸರ್ಕಾರ, ಜನಪ್ರತಿನಿಧಿಗಳು, ತಮ್ಮ ತಮ್ಮ ಕ್ಷೇತ್ರದ ವಾರ್ಡ್ ಗಳಲ್ಲಿ ಸೇವೆ ಆರಂಭಿಸಲು ಆದೇಶ ಮಾಡಿ. ಜನ ಕರೋನಗಿಂತ ಹಸಿವಿನಿಂದಲೇ ಸಾವು ಕಾಣುವಂತಗಾಬಾರದು.

ಪೋಲಿಸ್ ನವರನ್ನು ಬಳಸಿಕೊಂಡು ಸರ್ವಾಧಿಕಾರ ಮಾಡಿ ಜನರನ್ನು ರಕ್ಷಿಸುವ ದೊಂಬರಾಟ ಬೇಡ.

ಎಲ್ಲಿ ಪರಿಹಾರ ನೀಡಬೇಕಾಗು ತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆ ಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ.

ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ನುಣುಚಿಕೊಂಡಿದೆ ಎಂದು ದೂರಿದ್ದಾರೆ.

ಚುನಾವಣೆಯ ಸಮಯದಲ್ಲಿ ಹೆಂಡ ಹಣ ಹಂಚುವ ಇವರು, ಈ ಸಮಯ ದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ, ಈಗ ಕಾರ್ಯ ನಿರ್ವಹಿಸಲಿ.ಜನ ಹೊರ ಹೋಗಲಾಗದ ಪರಿಸ್ಥಿತಿ.

ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನಮ್ಮ ನಿಲುವು,

ಸಹಾಯ ವಾಣಿ ಘೋಷಣೆ ಮಾಡಿ ಮನೆ ಬಾಗಿಲಿಗೆ ಅಗತ್ಯ ದಿನಸಿ, ಮೆಡಿಕಲ್ ಸೇವೆ, ಒದಗಿಸಲಿ.

ಕೇರಳ ಸರ್ಕಾರದಂತೆ 2 ಊಟ ಮನೆ ಬಾಗಿಲಿಗೆ ನೀಡುವ ಯೋಜನೆ ರೂಪಿಸಬೇಕು ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ ಎಂದು ಆರೋಪಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!