ವಸಡಿನ ಊತ ಮತ್ತು ಸಡಿಲ ವಸಡು…!

ವಸಡಿನ ಊತ ಮತ್ತು ಸಡಿಲ ವಸಡು…!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
       ಸ್ವಾಸ್ಥ್ಯ ಸರ್ವರದ್ದೂ ಆಗಲಿ
                🍃

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
✨ವಸಡಿನ ಊತ ಮತ್ತು ಸಡಿಲ ವಸಡು✨

🔺 ವಸಡು ಎಂಬುದು ಹಲ್ಲುಗಳನ್ನು ಗಟ್ಟಿಯಾಗಿ ಆರೋಗ್ಯಯುತವಾಗಿ ಇಡಲು ಇರುವ ಬಿಗಿಯಾದ ಟಿಶ್ಯು.

▪️ಊತ ಎಂಬುದು ಜೀವಕೋಶಗಳ ದೌರ್ಬಲ್ಯ.

ಹೀಗೆ ದುರ್ಬಲಗೊಂಡ ಜೀವಕೋಶಗಳು ತಮ್ಮ ಕರ್ತವ್ಯ ನಿರ್ವಹಿಸುವುದು ಅಸಾಧ್ಯ.
★ ಉದಾಹರಣೆಗೆ- ಗ್ಯಾಸ್ಟ್ರೈಟೀಸ್ ಎಂದರೆ ಉದರದ ಊತ, ಅದು ಉದರದ ಜೀವಕೋಶಗಳ ದೌರ್ಬಲ್ಯವಾಗಿದೆ, ಹೀಗೆ ದುರ್ಬಲಗೊಂಡ ಉದರದಿಂದ ತನ್ನ ಕೆಲಸವಾದ ಆಹಾರವನ್ನು ಹೀರಿಕೊಳ್ಳಲು ಅಸಾಧ್ಯವಾಗುತ್ತದೆ. ಹಾಗಾಗಿ ಅದು ತಲೆನೋವು, ವಾಂತಿ ಮುಖಾಂತರ ವ್ಯಕ್ತವಾಗಿ ತಿಂದದ್ದನ್ನೆಲ್ಲಾ ಹೊರಹಾಕುತ್ತದೆ.

ವಸಡಿನ ಆದ್ಯ ಕರ್ತವ್ಯ ಹಲ್ಲುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು ಮತ್ತು ಅವುಗಳಿಗೆ ಗಾಳಿ-ನೀರು-ಆಹಾರವನ್ನು ಒದಗಿಸಿ ಸದೃಢವಾಗಿ ಪೋಷಣೆ ಮಾಡುವುದಾಗಿದೆ.
ಆದರೆ ಊತಗೊಂಡ ವಸಡು ಈ ಕೆಲಸ ಮಾಡಲು ಅಸಮರ್ಥವಾಗುತ್ತದೆ ಆದ್ದರಿಂದ ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ.

ಅಲ್ಲದೇ, ಊತಗೊಂಡ ವಸಡು ಸಡಿಲವಾಗುತ್ತದೆ, ಈ ಸಡಿಲತೆಯ ಅವಸ್ಥೆಯಲ್ಲಿ ಹಲ್ಲುಗಳು ಗಟ್ಟಿಯಾದ ಪದಾರ್ಥಗಳನ್ನು ಕಚ್ಚಿ ಪುಡಿಮಾಡಲು ಆಗುವುದಿಲ್ಲ.

💫 ಈ ರೀತಿ ಹಲ್ಲುಗಳು ಅಲುಗಾಡಲು ಪ್ರಾರಂಭಿಸಿ ಚಿಕಿತ್ಸೆಗೆಂದು ನಮ್ಮ ಆಯುರ್ವೇದ ಆಸ್ಪತ್ರೆಗೆ ಬಂದ ಅನೇಕರು, ಅಲುಗಾಡುತ್ತಿದ್ದ ತಮ್ಮ ಹಲ್ಲುಗಳನ್ನು ಉಳಿಸಿಕೊಂಡರು. ವಿಶೇಷ ಎಂದರೆ ಅದರಲ್ಲಿ 70+ ವರ್ಷದ ವೃದ್ಧರೂ ಸೇರಿದ್ದರು!!!

🔺 ವಸಡು ಊತವಾಗಲು ಮತ್ತು ಸಡಿಲವಾಗಲು ಕಾರಣಗಳೇನು?

❄️ಪಿತ್ತ ಎಂದು ಕರೆಸಿಕೊಳ್ಳುವ ನಮ್ಮ ಶರೀರದ ಹೀಟ್ ಇದಕ್ಕೆ ಕಾರಣ❄️

ಇಂದು ಎಲ್ಲರ ಶರೀರವೂ ಹೀಟ್ ಅಲ್ಲವೇ?
ಆಹಾರದೊಳಗಿರುವ ಮಾನವ ಶರೀರಕ್ಕೆ ಅನಗತ್ಯವಾದ ಅನೇಕ ಪೋಷಕಾಂಶಗಳನ್ನು, ಕ್ಯಾಲರಿ ಶಕ್ತಿಯ ಆಧಾರದಿಂದ ಅಳೆದು, ಅಂಕಿ ಅಂಶಗಳನ್ನು ಸಿದ್ಧಪಡಿಸಿದ ಆಹಾರವನ್ನು ವೈಜ್ಞಾನಿಕ ಎಂದು ಬೆಂಬಲಿಸಿ ಒಳಿತು-ಕೆಡುಕುಗಳ ಪರಿಣಾಮಗಳನ್ನು ಎಣಿಸದೇ ನಿತ್ಯವೂ ತಿನ್ನುವ ಕಾರಣ ಹೀಟ್ ಉತ್ಪತ್ತಿಯಾಗುತ್ತದೆ ಮತ್ತು ಅದು ಉದರ, ಕರುಳು, ವಸಡುಗಳನ್ನು ಮುಲಾಜಿಲ್ಲದೇ ಸಡಿಲಗೊಳಿಸುತ್ತದೆ.
ಇವುಗಳನ್ನೇ,


▪️ಉದರ ಊದಿಕೊಂಡರೆ “ಗ್ಯಾಸ್ಟ್ರೈಟೀಸ್ “
▪️ ಕರುಳು ಊದಿಕೊಂಡರೆ
“ಕೊಲೈಟೀಸ್”
ಅದೇ,
▪️ ವಸಡು ಊದಿಕೊಂಡರೆ “ಜಿಂಜಿವೈಟೀಸ್”
ಎಂದು ತಿಳಿಯದ ಭಾಷೆಯಲ್ಲಿ ಕರೆದು ತಾತ್ಕಾಲಿಕ ಪರಿಹಾರ ಎಷ್ಟೋ ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡಿದ್ದೇವೆ!

ಇತ್ತೀಚಿನ ದಿನಗಳಲ್ಲಿ ಮಧ್ಯಮ ವಯಸ್ಕರನ್ನೂ ಸೇರಿ ಹೆಚ್ಚಿನ ಜನ ಮೆದುವಾದ ಮಾಂಸ, ಸೀಡ್ ಲೆಸ್ ಹಣ್ಣು, ಮೆದುವಾದ / ಎಣ್ಣೆ ಸಕ್ಕರೆ ಬಳಸಿ ಮೆದುಗೊಳಿಸಿದ ಫೈಬರ್ ಲೆಸ್ ಆಹಾರ ಪದಾರ್ಥಗಳನ್ನು ಬಳಸಲು ಇಚ್ಛಿಸುತ್ತಾರೆ!!!
ಕಬ್ಬನ್ನು ಕಚ್ಚಿ ತಿನ್ನುತ್ತಿದ್ದ ನಮ್ಮ ಎಳೆತನದ ಸೊಗಡನ್ನು ಇಂದು ಹಳ್ಳಿಗಳಲ್ಲೂ ಕಾಣುತ್ತಿಲ್ಲದಿರುವುದು ಶೋಚನೀಯ!!

ವಸಡಿನ ಆರೋಗ್ಯ ಕಡೆಗಣಿಸಿ ದಂತಗಳನ್ನು ರಕ್ಷಣೆಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದಂತೂ ಸ್ಪಷ್ಟ💯

            •••••••••

🔺 ಬಿಗಿಯಾದ ವಸಡು ನಮ್ಮದಾಗಲು ಏನುಮಾಡಬೇಕು?
• ಒಗರು ಮತ್ತು ಕಹಿ ದ್ರವ್ಯಗಳಿಂದ ಮಾತ್ರ ವಸಡುಗಳನ್ನು ಸ್ವಚ್ಛಗೊಳಿಸಬೇಕು.

• ಹಿಂದಿನ ದಿನಗಳಲ್ಲಿ ಬೇವಿನ ಕಡ್ಡಿ, ಹೊಂಗೆ ಕಡ್ಡಿ ಮುಂತಾದವುಗಳನ್ನು ಕಚ್ಚಿ, ಬಂದ ರಸದಿಂದ ಹಲ್ಲುಜ್ಜುತ್ತಿದ್ದರು, ಇದ್ದಿಲು ಉಪ್ಪನ್ನೂ ಬಳಸುತ್ತಿದ್ದರು. ಇಂತಹ ವಿಧಾನಗಳಿಂದ ವಸಡಿನ ಆರೋಗ್ಯ ಸದೃಢವಾಗಿತ್ತು.

👁ದುರಾದೃಷ್ಟವಶಾತ್, ಅವುಗಳನ್ನೆಲ್ಲಾ ಜರಿದು ಟೂತ್‌ಪೇಸ್ಟ್ ಗೆ ಬದಲಾಯಿಸಿಕೊಳ್ಳಲು ಸಲಹೆ ಕೊಟ್ಟ ಜನರೇ ಇಂದು ಅಳುಕಿಲ್ಲದೇ ಉಪ್ಪು, ಇದ್ದಿಲು ಬಳಸಿರೆಂದು ನಿತ್ಯವೂ ಹೇಳಲು ಕೋಟಿ ಹಣ ಖರ್ಚುಮಾಡಿ ಜಾಹಿರಾತನ್ನು ನೀಡುತ್ತಿದ್ದಾರೆ👁

👉 ಒಗರು ಮತ್ತು ಕಹಿ ಪದಾರ್ಥಗಳ, ಉಪ್ಪು ಇದ್ದಿಲುಗಳ ವೈಜ್ಞಾನಿಕ ಕಾರ್ಮುಕತಾ ವಿವರಣೆಯನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!