ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ..!

ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ..!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಪಂಚಕರ್ಮ ಚಿಕಿತ್ಸೆ
(ಸರಣಿ ಲೇಖನಗಳು)

ರೋಗೋತ್ಪತ್ತಿಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ

🔺 ಇಂದಿನ ವಿಷಯ:
ವಮನ ಕರ್ಮ ದಲ್ಲಿ ಬರುವ
ಸ್ವೇದನ ಚಿಕಿತ್ಸೆ

📜 ಸ್ನೇಹ ಕ್ಲಿನ್ನಾಃ……..ದೋಷಾಃ…ಕೋಷ್ಠಂ ನೀತ್ವಾಃ ಸಮ್ಯಕ್ ಶುದ್ಧಿಭಿಃ ನಿರ್ಹರಂತೆ||
-ಅಷ್ಟಾಂಗ ಹೃದಯ, ಸೂತ್ರಸ್ಥಾನ-17

ಸ್ನೇಹಪಾನದಿಂದ ರೋಗಕಾರಕ ರಾಸಾಯನಿಕಗಳು ಸ್ನೇಹದಲ್ಲಿ ಕರಗಿಕೊಳ್ಳುತ್ತವೆ. ಇದೀಗ ಸ್ವೇದನ ಚಿಕಿತ್ಸೆ ನೋಡೋಣ:-

ಸ್ವೇದನ ಚಿಕಿತ್ಸೆ ಎಂದರೆ, ಇಡೀ ಶರೀರಕ್ಕೆ ತೈಲದಿಂದ ಅಭ್ಯಂಗ ಮಾಡಿಸಿಕೊಂಡು ಬೆವರು ಬರುವಂತೆ ಸ್ಟೀಮ್ ತೆಗೆದುಕೊಳ್ಳುವುದು. ಈ ಸ್ಟೀಮ್ ನಲ್ಲಿ 13 ವಿಧಗಳಿವೆ.
ಅದರಲ್ಲಿ ಸರ್ವ ಶರೀರಕ್ಕೂ ಬೆವರು ಬರಿಸುವಂತಹ ವಿಧಾನಗಳಲ್ಲಿ ಒಂದನ್ನು ತಜ್ಞರು ಅಗತ್ಯಕ್ಕನುಸಾರ ಅನುಸರಿಸುತ್ತಾರೆ.

ಇಂದು ಸಾಮಾನ್ಯವಾಗಿ ಬಾಡಿ ಮಸಾಜ್ ಹೆಸರಿನಲ್ಲಿ‌ ನಡೆಯುವ ಕೇಂದ್ರಗಳಿಗೂ ಪಂಚಕರ್ಮ ಎಂಬ ಹೆಸರನ್ನಿಟ್ಟಿರುತ್ತಾರೆ. ಬಹಳ ಜನ ಅದನ್ನೇ ಪಂಚಕರ್ಮ ಎಂದು ಭಾವಿಸಿ, ಈಗಾಗಲೇ ಪಂಚಕರ್ಮ ತೆಗೆದುಕೊಂಡಿದ್ದೇವೆ ಎನ್ನುವ ರೋಗಿಗಳನ್ನು ನೋಡಿದ್ದೇವೆ. ಅಂತವರು ಇತ್ತ ಸ್ವಲ್ಪ ಗಮನಿಸಿ.

ಇಲ್ಲಿ ಸ್ನೇಹಪಾನ ಮಾಡಿದ ನಂತರ ಅಭ್ಯಂಗ ಮಾಡಿಸಿಕೊಳ್ಳುವುದರಿಂದ ಏನಾಗುತ್ತದೆ ವೈಜ್ಞಾನಿಕ ವಿವರಣೆ ನೋಡೋಣ.

ಸ್ನೇಹದಲ್ಲಿ ಕರಗಿದ ಅಂಶಗಳು ಮಸಾಜ್ ಮತ್ತು ಸ್ಟೀಮ್ ನಿಂದ ದ್ರವೀಕರಣಗೊಳ್ಳುತ್ತವೆ. ಹೀಗೆ ನೀರಾಗಿ ಹರಿಯುವ ದೋಷಗಳು, ರಕ್ತದೊಂದಿಗೆ ಸರ್ವ ಶರೀರದಲ್ಲಿ ಸಂಚಾರ ಮಾಡುತ್ತವೆ.

ಪೃಥ್ವಿ ಮತ್ತು ಜಲ ಅಂಶಗಳಿಂದ(ಕಫದಿಂದ) ಆದ ರಾಸಾಯನಿಕಗಳು ಬಹು ಬೇಗ ತುಂಡುತುಂಡಾಗಿ ವಿಭಜನೆಗೊಳ್ಳುವ ಕಾರಣ ಕೇವಲ ಒಂದು ದಿನ ಮಾತ್ರ ಸ್ವೇದನ‌ ಚಿಕಿತ್ಸೆ ನಡೆಯುತ್ತದೆ. ಅದೇ ಅಗ್ನಿ ತತ್ವದಿಂದ(ಪಿತ್ತದೋಷ) ಆದ ರಾಸಾಯನಿಕಗಳಿಗೆ 3 ದಿನದ ಕಾಲ ಸ್ವೇದನ ಚಿಕಿತ್ಸೆ ಬೇಕಾಗುತ್ತದೆ.

★ ಒಟ್ಟಾರೆ ಬದಲಾವಣೆ:
ಸ್ನೇಹದಿಂದ ಮೃದುವಾದ ದೋಷಗಳು, ಅವು ಕರುಳಿನಲ್ಲಿರಲಿ, ಅಥವಾ ಆಳವಾದ ಧಾತುಗಳಲ್ಲಿರಲಿ ಸ್ವೇದನ ಚಿಕಿತ್ಸೆಯಿಂದ ಕರಗಿ ನೀರಾಗಿ ಸರ್ವ ಶರೀರದಲ್ಲಿ ಹರಿಯುತ್ತಾ ಇರುತ್ತವೆ. ಸೂಕ್ತ ಕಾಲದಲ್ಲಿ ಅಂದರೆ 1-3ದಿನಗಳು ಕಳೆದ ಮೇಲೆ, ಸೂಕ್ತ ಔಷಧ ಬಳಸಿ ಇಡೀ‌ಶರೀರವನ್ನು ಶೋಧಿಸಿಬಿಟ್ಟರೆ, ವಿಕೃತ ದೋಷಗಳು ಮಾತ್ರ ನಿರ್ಹರಣವಾಗುತ್ತವೆ ಅಥವಾ ಹೊರಬಂದುಬಿಡುತ್ತವೆ.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!