ಶಿವಮೊಗ್ಗ : ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕ್ಕೆ ಖಂಡಿಸಿ ಪತ್ರಿಭಟನೆ..!


ಸಾಗರ :ಪೊಗರುಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ನಿರ್ದೇಶಕ ನಂದಕಿಶೋರ್ಅ ವಹೇಳನ ಮಾಡಿರುವುದನ್ನು ಸಾಗರ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಖಂಡಿಸಿದೆ ಪತ್ರಿಭಟನೆ ನಡೆಸಿದರು.

ಸಾಗರದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ವಕೀಲ ರವೀಶ್ ಮಾತನಾಡಿ ಬ್ರಾಹ್ಮಣರು ಮುಗ್ಧರು, ತಿರುಗಿ ಬೀಳುವುದಿಲ್ಲ ಎಂಬ ತಪ್ಪು ಕಲ್ಪನೆ ಇದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕು.

ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ದೃಶ್ಯಗಳು ಅದರಲ್ಲೂ ಒಬ್ಬ ಬ್ರಾಹ್ಮಣನ ಭುಜದ ಮೇಲೆ ಕಾಲಿಡುವ ಒಂದು ದೃಶ್ಯ ತುಂಬಾ ಅವಹೇಳನಕಾರಿಯಾಗಿದೆ ಇದನ್ನು ನಮ್ಮ ಸಮುದಾಯದ ಎಲ್ಲರೂ ಖಂಡಿಸುತ್ತಾರೆ ಎಂದರು

ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಿ. ಕೆ. ವಿಜಯಕುಮಾರ್ ಮಾತನಾಡಿ ಬೇರೆ ಹಿಂದುಳಿದ ಅಥವಾ ಅಲ್ಪಸಂಖ್ಯಾತರ ಭಾನೆಗೆ ದಕ್ಕೆ ಬಂದರೆ ಆ ಸಮುದಾಯದ ಜನ ಇದಕ್ಕೆ ಸುಮ್ಮನೇ ಇರುತ್ತಿದ್ದರೆ.

ಈ ಸಿನಿಮಾ ದೃಶ್ಯ ಶಾಂತಿ ಕದಡುವ ಕೆಲಸ ಈ ಕೂಡಲೇ ಈ ದೃಶ್ಯ ಗಳನ್ನು ತೆಗೆದು ಹಾಕಿ ಚಲನಚಿತ್ರ ಪುನಃ ಬಿಡುಗಡೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಧರ್ ಸಾಗರ, ಸುದರ್ಶನ, ಸುರೇಶ್ ಬಾಬು, ವಿನಯ, ರಾಘವೇಂದ್ರ, ಶಶಿ, ಚಂದ್ರಶೇಖರ್, ಹರೀಶ್ ಇನ್ನಿತರ ಬ್ರಾಹ್ಮಣ ಸಮುದಾಯದವರು ಇದ್ದರು.









News by: RAGHU Shikari-7411515737