ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್ ವೈ ಸಮಾನ ರಾಜಕಾರಣಿ ಯಾರಿದ್ದಾರೆ ತೊರಿಸಿ:ಹಾರತಾಳು ಹಾಲಪ್ಪ ಸವಾಲ್..!

ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್ ವೈ ಸಮಾನ ರಾಜಕಾರಣಿ ಯಾರಿದ್ದಾರೆ ತೊರಿಸಿ:ಹಾರತಾಳು ಹಾಲಪ್ಪ ಸವಾಲ್..!

ಶಿವಮೊಗ್ಗ : ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಮಾನ ರಾಜಕಾರಣಿ ಯಾರಿದ್ದಾರೆ ತೊರಿಸಲಿ‌ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡುವವರಿಗೆ ಎಂಐಎಸ್ ಎಲ್ ಅಧ್ಯಕ್ಷ ಸಾಗರ ಶಾಸಕ ಹಾರತಾಳು ಹಾಲಪ್ಪ ಪರೋಕ್ಷ ಸವಾಲ್ ಎಸೆದರು.

ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ‌ ಬೆಂಬಲಿತ ನೂತನ ಸದಸ್ಯರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭವದಲ್ಲಿ ಮಾತನಾಡಿದರು.

ಬಿ.ಎಸ್ ಯಡಿಯೂರಪ್ಪನವರು ಸಿಎಂ ಆದಗಿನಿಂದಲೂ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿದೆ.

ಅದರೆ ಬಿ.ಎಸ್ ವೈ ನಂತ ಸಮರ್ಥ ನಾಯಕರು ನಮ್ಮ ಪಕ್ಷದಲ್ಲಿ ಯಾರಿದ್ದಾರೆ ತಿಳಿಸಿ ಎಂದರು‌.

ದಕ್ಷಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಹಾ ನಾಯಕ ಬಿ.ಎಸ್ ವೈ ಪಕ್ಷಕ್ಕಾಗಿ ಜೀವವನ್ನು ಪಣಕ್ಕೆ ಇಟ್ಟು ಹೋರಾಡಿದ್ಧಾರೆ.

ಅದರೆ ವಿರೋಧ ಪಕ್ಷ ನಮ್ಮ ಪಕ್ಷದ ಕೆಲವರು ಸೇರಿದಂತೆ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಕೇಳಿ ನಮಗೆ ಬೇಸರವಾಗಿತ್ತು ಇಂದಿನ ಪತ್ರಿಕೆಗಳನ್ನು ನೊಡಿ ಸಮಾಧಾನವಾಗಿ ಎಲ್ಲಾ ಬಾಯಿ ಮುಚ್ಚಿದಂತಗಿದೆ ಎಂದರು.

ಎಲ್ಲಾ ರೀತಿಯ ಊಹಾಪೋಹಗಳಿಗೂ ಹೈಕಮೆಂಡ್ ತೆರೆ ಎಳೆದಿದೆ ಬಿ ಎಸ್ ವೈ ಅವರೆ ಅವಧಿ ಮುಗಿಯುವವರೆಗೂ ಮುಂದುವರಿಯಲ್ಲಿದ್ದಾರೆ ಎಂದರು.

ಗೋ ಹತ್ಯೆ ನಿಷೇಧ ಪರಿಣಾಮ ಗೋ ತಾಯಿಯ ಆರ್ಶಿವಾದದಿಂದ ಅವರ ಸ್ಥಾನ ಭದ್ರವಾಗಿದೆ ಇನ್ನೂ ಎರಡವರೆ ವರ್ಷ ಮುಖ್ಯಮಂತ್ರಿ ಆಗಿ ಇರುತ್ತರೆ ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡುತ್ತಾರೆ ಎಂದರು.


Admin

Leave a Reply

Your email address will not be published. Required fields are marked *

error: Content is protected !!