ಶಿಕಾರಿಪುರ: ಕುರುಬರ ಎಸ್ಟಿ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯನವರು ಗೊಂದಲ ಸೃಷ್ಠಿಸುವುದು ಬೇಡ: ಸಚಿವ ಕೆ.ಎಸ್ ಈಶ್ವರಪ್ಪ..!

ಶಿಕಾರಿಪುರ: ಕುರುಬರ ಎಸ್ಟಿ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯನವರು ಗೊಂದಲ ಸೃಷ್ಠಿಸುವುದು ಬೇಡ: ಸಚಿವ ಕೆ.ಎಸ್ ಈಶ್ವರಪ್ಪ..!

ಶಿಕಾರಿಪುರ; ರಾಜ್ಯದ್ಯಂತ ಸಂಘಟಿತಗೊಳ್ಳುತ್ತಿರುವ ಕುರುಬ ಎಸ್ಟಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ ನನ್ನಗೆ ಆಹ್ವಾನ ನೀಡಿಲ್ಲ ಎಂದು ಹೇಳುಕೊಂಡು ಈ ಹೋರಾಟದ ವಿಚಾರದಲ್ಲಿ ಗೊಂದಲ ಮೂಡಿಸುವುದು ಬೇಡ ಎಂದರು.

ಪಟ್ಟಣದಲ್ಲಿ ಗುರುವಾರ ಕನಕ ಗುರುಪೀಠ, ಕುರುಬ ಸಮಾಜ ಆಯೋಜಿಸಿದ್ದ ಕುರುಬ ಜನಾಂಗಕ್ಕೆ ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಕುರುಬ ಎಸ್ಟಿ ಮೀಸಲಾತಿ ಹೋರಾಟ ಕುರುಬ ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು ಯಾವುದೇ ರಾಜಕೀಯ ಪಕ್ಷಗಳ ಹಿತಶಕ್ತಿ ಇಲ್ಲ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಭಾಗವಹಿಸಿದ್ದಾರೆ ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ ಈ ವಿಚಾರದಲ್ಲಿ ಗೊಂದಲ ಬೇಡ ಎಂದರು.

ಮುಖ್ಯಮಂತ್ರಿ ಬಿಎಸ್‌ವೈ ನಮ್ಮ ಸಮುದಾಯದ ಎಸ್‌ಟಿ ಮೀಸಲಾತಿ ಬೇಡಿಕೆಗೆ ಸ್ಪಂದಿಸುತ್ತಾರೆ ಅದಕ್ಕೆ ಅವರಿಗೆ 60ಲಕ್ಷ ಕುರುಬರ ಬೆಂಬಲವೂ ಇರುತ್ತದೆ ಎಂದರಲ್ಲದೆ ಸರಕಾರ ಅವದಿಪೂರ್ಣ ಆಗುವವರೆಗೂ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ ಯಾವುದೆ ಅನುಮಾನ ಬೇಡ ಎಂದರು.

ಕನಕದಾಸರು ಯಾವುದೆ ಒಂದು ಸಮುದಾಯಕ್ಕೆ ಸೀಮಿತವಲ್ಲ ಅವರನ್ನು ಪ್ರತಿವರ್ಷ ನೆನಪಿಸುವಂತೆ ಮಾಡುವುದಕ್ಕಾಗಿ ಸರಕಾರಿ ಕರ‍್ಯಕ್ರಮ ರೂಪಿಸಿ, ರಜೆ ಘೋಷಣೆ ಮಾಡಿದ ಬಿಎಸ್‌ವೈ ಸ್ಮರಣೀಯರು, ಸಮುದಾಯದ ಹಿತಕ್ಕಾಗಿ ಹೋರಾಟ ರೂಪಿಸಿದ ಕಾಗಿನೆಲೆ, ಹೊಸದುರ್ಗ ಶ್ರೀಗಳು ಸಮಾಜಕ್ಕೆ ಎರಡು ಕಣ್ಣಿದ್ದಂತೆ ಅವರು ತೋರಿದ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಇದೆ ಮೊದಲ ಬಾರಿಗೆ ನಮ್ಮ ಸಮುದಾಯದ ಜನರು ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ ಆಗ ನಮ್ಮ ಬೇಡಿಕೆ ಎಲ್ಲ ಜನರಿಗೂ ತಿಳಿಯುತ್ತದೆ ಆಗ ಮೋದಿ, ಅಮಿಶಾ ಅವರೂ ಕುರುಬರ ಸಮಸ್ಯೆ ಏನು ಎಂದು ಕೇಳುತ್ತಾರಲ್ಲದೆ ಬೇಡಿಕೆ ಈಡೇರಿಸುತ್ತಾರೆ, ಎಸ್ಟಿ ಸೌಲಭ್ಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಸಮುದಾಯದ ಕಟ್ಟಕಡೆಯ ಬಡ ಕುರುಬನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭವಿಷ್ಯಕ್ಕಾಗಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾತ್ರವಲ್ಲ ಸಂಸತ್ ಎದುರು ಸತ್ಯಾಗ್ರಹ ಮಾಡುವುದಕ್ಕೂ ಕನಕ ಗುರುಪೀಠ ಸಿದ್ಧವಿದೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಇದೆ ಆದರೆ ಇನ್ನುಳಿದ ಕಡೆ ಅದು ಸಿಗಬೇಕು, 1976ರಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲಾಗಿದೆ ಆದರೂ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದೇವೆ. 2013ರಲ್ಲೂ ಕೋರ್ಟ್ ತೀರ್ಪಿನಿಂದ ಶೈಕ್ಷಣಿಕ ಸೌಲಭ್ಯ ನೀಡಿದ್ದನ್ನೂ ವಾಪಸ್ ಪಡೆಯಲಾಗಿದೆ. ಸುಮ್ಮನೆ ಕೂತರೆ ಸೌಲಭ್ಯ ಸಿಗುವುದಿಲ್ಲ ಅದಕ್ಕಾಗಿ ಹೋರಾಟ ಆರಂಭಿಸಲಾಗಿದೆ. ಪಾದಯಾತ್ರೆ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿ ಎಸ್‌ಟಿ ಮೀಸಲಾತಿ ಪಡೆಯೋಣ ಎಂದರು.

ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬರನ್ನು ರಾಜಕೀಯವಾಗಿ ಬಳಸಿಕೊಂಡ ಪಕ್ಷಗಳು ನಮಗೆ ಎಸ್ಟಿ ಹಕ್ಕು ನೀಡಿಲ್ಲ, ಕುರುಬ ಸಮುದಾಯದ ಬಹಳಷ್ಟು ಜನರಿಗೆ ಶಿಕ್ಷಣ, ಭೂಮಿ ಇಲ್ಲದಾಗಿದೆ ಅದನ್ನು ನೀಡುವುದಕ್ಕೆ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರದ ಸಚಿವರಿಗೆ ಮನವಿ ನೀಡಲಾಗಿದೆ, ಬಾಗಲಕೋಟೆ, ಸಿಂಧನೂರು, ದಾವಣಗೆರೆ, ಶಿಕಾರಿಪುರದಲ್ಲಿ ಸಮಾವೇಶ ಮಾಡುವ ಮೂಲಕ ನಮ್ಮ ಸಮುದಾಯದ ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಪಾದಯಾತ್ರೆ, ಫೆ.7ರಂದು ನಡೆಯುವ ಬೆಂಗಳೂರು ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಅದಕ್ಕೆ ಎಲ್ಲರೂ ಕೈಜೋಡಿಸಿ ಎಂದರು.

ಹೋರಾಟದ ಆರಂಭ:

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನಿತ್ಯ ಮುಂಜಾನೆಯೆ ಎದ್ದು ಪೂಜಾದಿ ಕರ‍್ಯ ಪೂರ್ಣಗೊಳಿಸುವ ಪರಿಪಾಠದವರು ಆದರೆ ಅದೊಂದು ದಿನ 11ಗಂಟೆಯಾದರೂ ಮಲಗಿದ್ದರು ಅದಕ್ಕಾಗಿ ಗೊಂದಲಗೊಂಡು ಬೆಳ್ಳೊಡಿಗೆ ಹೋದಾಗ ಮಧ್ಯಾಹ್ನ 2 ಆಗಿತ್ತು ಆದರೂ ಮಲಗಿದ್ದರು ಕೋಣೆಯೊಳಗೆ ಹೋಗಿ ಎಬ್ಬಿಸಿ ಕೇಳಿದಾಗ ದುಃಖಗೊಂಡಿದ್ದ ಅವರು ವ್ಯಕ್ತಿಯೊಬ್ಬರು ಕಳುಹಿಸಿದ ವಾಟ್ಸಪ್ ಸಂದೇಶ ತೋರಿಸಿದರು.

ಸ್ವಾಮೀಜಿಗಳು ಸಮುದಾಯಕ್ಕೆ ಏನೂ ಮಾಡಲ್ಲ, ಕರ‍್ಯಕ್ರಮ ರೂಪಿಸಲ್ಲ, ಎಸ್ಟಿ ಸೌಲಭ್ಯ ಗೊಂದಲಕ್ಕೆ ಏನು ಮಾಡಿದ್ದಾರೆ’ ಎನ್ನುವ ಸಂದೇಶ ಮನಸ್ಸಿಗೆ ಬೇಸರ ಮೂಡಿಸಿದೆ ಎನ್ನುವ ಉತ್ತರ ಬಂತು ಅದನ್ನು ಮರೆಸಿ ಸಂಜೆ 5ಕ್ಕೆ ಪೂಜೆ ಪ್ರಸಾದ ಮಾಡಿಸಿದ ನಂತರ ಹೋರಾಟ ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಸಮಾಜದ ಮುಖಂಡ ಮುಕುಟಪ್ಪ ಮಾತನಾಡಿ, ಕುರಿಗಳು ಕುರುಬ ಹೇಳಿದ ಕಡೆ ಹೋಗುತ್ತವೆ ಅವನು ಹೇಳಲಿಲ್ಲ ಎಂದರೆ ಸತ್ತರೂ ಪರವಾಗಿಲ್ಲ ಅಲ್ಲಿಯೇ ನಿಲ್ಲುತ್ತವೆ ಅಂತಹ ಸ್ವಭಾಗ ಕುರುಬರದ್ದೂ ಅಂದರೆ ಸಮುದಾಯ ಒಗ್ಗಟ್ಟಾಗಿದೆ ಅವರಿಗೆ ಮಾರ್ಗದರ್ಶನ ಮಾಡಬೇಕಾದ ನಾಯಕರು ಸರಿಯಾಗಿರ ಕಾರಣಕ್ಕೆ ನಮಗಿನ್ನೂ ಸೌಲಭ್ಯ ಸಿಕ್ಕಿಲ್ಲ, ಇದೀಗ ಶ್ರೀಮಠದ ಸ್ವಾಮೀಜಿ ನೇತೃತ್ವವಹಿಸಿದ್ದು ಹೋರಾಟ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರುಗಳಾದ ಕೆ.ಇ.ಕಾಂತೇಶ್, ಮಾಜಿ ಸಚಿವ ರೇವಣ್ಣ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜೆಡಿಎಸ್ ಮುಖಂಡ ಶ್ರೀಕಾಂತ್ ಮುಖಂಡರುಗಳಾದ ನಗರದ ಮಹಾದೇವಪ್ಪ, ಲಕ್ಷ್ಮಿ ಮ ಮಹಾಲಿಂಗಪ್ಪ, ರೇಣುಕಾ ಹನುಮಂತಪ್ಪ, ಗೋಣಿ ಮಾಲತೇಶ್, ಮೈಲಾರಪ್ಪ, ಸೋಮಶೇಖರ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ, ಸೌಮ್ಯ ಪ್ರಶಾಂತ್, ಆನೇಕಲ್ ದೊಡ್ಡಯ್ಯ ಮತ್ತಿತರರು ಇದ್ದರು.

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!