ಶಿವಮೊಗ್ಗದ ನಾಲ್ವರಲ್ಲಿ ಬ್ರಿಟನ್ ಕೊರೋನಾ ಪತ್ತೆ: ಆರೋಗ್ಯ ಸಚಿವ ಡಾ.ಸುಧಾಕರ್…!

ಶಿವಮೊಗ್ಗದ ನಾಲ್ವರಲ್ಲಿ ಬ್ರಿಟನ್ ಕೊರೋನಾ ಪತ್ತೆ: ಆರೋಗ್ಯ ಸಚಿವ ಡಾ.ಸುಧಾಕರ್…!

ಶಿವಮೊಗ್ಗ ನಗರಕ್ಕೆ ಬ್ರಿಟನ್’ನಿಂದ ಆಗಮಿಸಿದ ನಾಲ್ವರಲ್ಲಿ ಬ್ರಿಟನ್ ಕೊರೋನಾ ಅಥವಾ ರೂಪಾಂತರಿ ಕೊರೋನಾ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು, ಐಸಿಎಂಆರ್ ಈ ವರದಿ/ಪಟ್ಟಿ ನೀಡಿದ್ದು, ಅದರಂತೆ ಬ್ರಿಟನ್’ನಿಂದ ಡಿ.22ರಂದು ನಗರಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರಿ ಕೊರೋನಾ ದೃಢಪಟ್ಟಿದೆ ಎಂದಿದ್ದಾರೆ.

ಇವರುಗಳು ನಗರಕ್ಕೆ ಆಗಮಿಸಿದ ದಿನವೇ ಇವರನ್ನು ಐಸೋಲೇಶನ್’ನಲ್ಲಿ ಇರಿಸಲಾಗಿದ್ದ ಕಾರಣ ಹೆಚ್ಚಿನ ಜನರ ಸಂಪರ್ಕ ಆಗಿಲ್ಲ. ಆದರೂ ಏಳು ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಅವರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ.

ಏಳು ಮಂದಿ ಪ್ರಾಥಮಿಕ ಸಂಪರ್ಕಿತರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಆದರೆ, ಅವರಲ್ಲಿ ಪತ್ತೆಯಾಗಿರುವ ವೈರಸ್ ರೂಪಾಂತರಿ ಕೋರೋನಾ ಸೋಂಕೆ ಅಥವಾ ಹಿಂದಿನ ಕೊರೋನಾ ಸೋಂಕೇ ಎನ್ನುವುದು ಇನ್ನೂ ಪರೀಕ್ಷೆಯಿಂದ ತಿಳಿದುಬರಬೇಕಿದೆ.

ಯಾರಲ್ಲೂ ದೊಡ್ಡ ಮಟ್ಟದಲ್ಲಿ ರೋಗ ಲಕ್ಷಣಗಳಿಲ್ಲ ಎಂದಿದ್ದಾರೆ.
ಎಲ್ಲರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!