ಶಿವಮೊಗ್ಗ: ನಿನ್ನೆ ಕುಕ್ಕರ್ ಇಂದು ಪಲಾವ್, ಚಿಕ್ಕನ್ ಮಟ್ಟನ್ ಮತದಾರರ ಸೇಳೆಯಲು ಆಮೀಷಾ ಅಧಿಕಾರಿಗಳ ದಾಳಿ..!

ಶಿವಮೊಗ್ಗ: ನಿನ್ನೆ ಕುಕ್ಕರ್ ಇಂದು ಪಲಾವ್, ಚಿಕ್ಕನ್ ಮಟ್ಟನ್ ಮತದಾರರ ಸೇಳೆಯಲು ಆಮೀಷಾ ಅಧಿಕಾರಿಗಳ ದಾಳಿ..!

ನಿನ್ನೆ ಮತದಾನಕ್ಕಾಗಿ ಕುಕ್ಕರ್ ಸಂಗ್ರಹಿಸಿದ ಬೆನ್ನಲ್ಲೇ ಇಂದು ತಮ್ಮ ಕಡೆ ಮತಚಲಾಯಿಸಿದ ಮತದಾರರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ.

ಮತದಾನ ನಡೆಯುತ್ತಿರುವ ವೇಳೆ ತಮ್ಮನ್ನ ಬೆಂಬಲಿಸಿ ಮತಚಲಾಯಿಸಿದವರಿಗೆ ಫಲಾವ್ ಮತ್ತು ನಾನ್ ವೆಜ್ ಊಟಕ್ಕೆ ಸಿದ್ದಮಾಡಿಕೊಂಡಿರುವ ಸ್ಥಳದ ಮೇಲೆ ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸಿ ಊಟಕ್ಕೆ ಬಳಸಿದ ಪಾತ್ರೆ ಮತ್ತು ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಚುನವಣೆಗೆ 150 ಕ್ಕೂ ಹೆಚ್ಚು ಜನರಿಗೆ ಫಲಾವ್ ಸಿದ್ದಪಡಿಸಲಾಗಿತ್ತು. ಮಾಂಸಹಾರಿ ಊಟಕ್ಕೆ ಸಿದ್ದಪಡಿಸಲಾಗಿತ್ತು.

ಮಾದರಿ ನೀತಿ ಸಂಹಿತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಹೊಸಹಳ್ಳಿ ತೋಟವೊಂದರಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಪಾತ್ರೆ ಹಾಗೂ ಇತರೆ ಸಾಮಾಗ್ರಿಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.‌ಆದರೆ ಚುನವಣೆ ಅಭ್ಯರ್ಥಿಗಳ ಹೆಸರು ಇನ್ನೂ ತಿಳಿದುಬರಬೇಕಿದೆ.

ದಾಳಿಯಲ್ಲಿ ಚುನಾವಣೆ ಅಧಿಕಾರಿಗಳಾದ ಚಂದ್ರಪ್ಪ, ಇಒ ಡಾ.ಕಲ್ಲಪ್ಪ ಭಾಗವಹಿಸಿದ್ದರು.

Admin

Leave a Reply

Your email address will not be published. Required fields are marked *

error: Content is protected !!