ಶಿವಮೊಗ್ಗ:ಮತದಾರರಿಗೆ ಹಂಚಲು ತಂದಿದ್ದ 100ಕ್ಕೂ ಹೆಚ್ಚು ಕುಕ್ಕರ್ ಗಳ ವಶ…!

ಶಿವಮೊಗ್ಗ:ಮತದಾರರಿಗೆ ಹಂಚಲು ತಂದಿದ್ದ 100ಕ್ಕೂ ಹೆಚ್ಚು ಕುಕ್ಕರ್ ಗಳ ವಶ…!

ಶಿವಮೊಗ್ಗ : ಮತದಾರರನ್ನು ಸೆಳೆಯಲು ತಂದಿದ್ದ ನೂರಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಪಡಿಸಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮದಲ್ಲಿ ನಡೆದಿದೆ.

ರಾಜ್ಯದೆಲ್ಲೆಡೆ ಮಂಗಳವಾರ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಕೆಲ ಅಭ್ಯಾರ್ಥಿಗಳು ಮತದಾರರನ್ನು ಸೇಳೆಯುವ ಉದ್ದೇಶದಿಂದ ವಿವಿಧ ಕಸರತ್ತು ನಡೆಸುತ್ತಿದ್ದಾರೆ.

ಆದರೆ ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮದಲ್ಲಿ ಅಭ್ಯಾರ್ಥಿಯೊರ್ವರ ಭಾವಚಿತ್ರ ಅಂಟಿಸಿರುವ ಕುಕ್ಕರ್ ಬಾಕ್ಸ್ ಗಳನ್ನು ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ತಾಲೂಕಿನ ಇಓ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಲೀಟರ್ ಸಾಮಾರ್ಥ್ಯದ 130 ಕುಕ್ಕರ್ ಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇಲ್ನೋಟಕ್ಕೆ ನಿದಿಗೆ ಗ್ರಾಮ ಪಂಚಾಯಿತಿಗೆ ಸ್ಫರ್ಧಿಸಿದ್ದ ಅಭ್ಯರ್ಥಿಗೆ ಸಂಬಂಧಿಸಿದ ಕುಕ್ಕರ್ ಗಳು ಎಂದು ತಿಳಿದುಬಂದಿದ್ದು ಕುಕ್ಕರ್ ನ ಬಾಕ್ಸ್ ಮೇಲೆ ಅಭ್ಯರ್ಥಿಯ ಫೋಟೋ ಮತ್ತು ಮಾಹಿತಿ ಪತ್ತೆಯಾಗಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!