ಶಿವಮೊಗ್ಗ :ಚಲಿಸುತ್ತಿದ ರೈಲಿನಿಂದ ತುಂಗಾ ನದಿಗೆ ಹಾರಿದ ಯುವತಿ..!

ಶಿವಮೊಗ್ಗ :ಚಲಿಸುತ್ತಿದ ರೈಲಿನಿಂದ ತುಂಗಾ ನದಿಗೆ ಹಾರಿದ ಯುವತಿ..!

ಶಿವಮೊಗ್ಗ: ಚಲಿಸುತ್ತಿರುವ ರೈಲಿನಿಂದ ತುಂಗಾ ನದಿಗೆ ಯುವತಿಯೋರ್ವಳು ಹಾರಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಜನಶತಾಬ್ದಿ ರೈಲಿನಿಂದ ಯುವತಿಯೋರ್ವಳು ತುಂಗ ನದಿಗೆ ಬಿದ್ದಿರುವ ಘಟನೆ ನಿನ್ನೆ ರಾತ್ರಿ 10-45 ಕ್ಕೆ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿನಲ್ಲಿ ಯುವತಿ ಸಹನಾ(24) ತನ್ನ ತಂದೆ ತಾಯಿ ಜೊತೆ ಪ್ರಯಾಣಿಸುತ್ತಿದ್ದಳು.

ರೈಲು ಶಿವಮೊಗ್ಗದ ತುಂಗ ಸೇತುವೆ ಮೇಲೆ ಬರುತ್ತಿದ್ದ ವೇಳೆಗೆ ಸಹನಾ ನದಿಗೆ ಬಿದ್ದಿದ್ದಾಳೆ.

ಯುವತಿ ಗಾಡಿಕೊಪ್ಪದ ನಿವಾಸಿಯಾಗಿದ್ದು ಯುವತಿ ನದಿಗೆ ಹಾರಿದ್ದಾಳೋ ಅಥವಾ ರೈಲಿನಲ್ಲಿ ಕಾಲು ಜಾರಿ ಬಿದ್ದಿದ್ದಾಳೋ ಎಂಬುದರ ಬಗ್ಗೆ ಮಾಹಿತಿ ತಿಳಿದುಬರಬೇಕಿದೆ.

ತಕ್ಷಣವೇ ಅವರ ತಂದೆ ತಾಯಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ರೈಲ್ವೆ ಪೊಲೀಸನವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ನದಿಯಲ್ಲಿ ನೀರಿನ ಪ್ರಮಾಣ ನಿರೀಕ್ಷೆಯಷ್ಟು ಇಲ್ಲವಾದುದರಿಂದ ಬೋಟ್ ಮೂಲಕ ಹೋಗುವುದು ಅಗ್ನಿಶಾಮಕದಳದವರಿಗೆ ಕಷ್ಟವಾಗಿದೆ ಬೋಟ್ ಗಳ ಮೂಲಕ‌ ಕಾರ್ಯಚರಣೆ ನಡೆಸಲಾಗುತ್ತಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!