ಸೈಂಧವ ಲವಣ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-36..!

ಸೈಂಧವ ಲವಣ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-36..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-36

35) ಸೈಂಧವ ಲವಣ:
36) ಸೌವರ್ಚ ಲವಣ:

ಜೀವಕೋಶಗಳ ಜಲಾಂಶ(ಕಫ) ನಿರ್ವಹಣೆಯಲ್ಲಿ ಲವಣ(ಉಪ್ಪು)ಗಳ ಪಾತ್ರ ಎಷ್ಟೆಂದು ಯಾರೂ ಊಹಿಸಬಲ್ಲರು.

ಆಯುರ್ವೇದದಲ್ಲಿ ಉಲ್ಲೇಖಿಸುವ ಸೈಂಧವ ಲವಣವು ಜಗತ್ತಿನಲ್ಲೇ ಸರ್ವಶ್ರೇಷ್ಠ ಔಷಧೀಯ ಗುಣಯುಕ್ತ ಉಪ್ಪು.

• ಇದು ಹಿಮಾಲಯದ ಪಿಂಕ್ ಸಾಲ್ಟ್ / ಕಲ್ಲುಪ್ಪು ಎಂದು ಕರೆಸಿಕೊಂಡಿದೆ
• ಇದು ಬೇರೆ ಉಪ್ಪುಗಳಂತೆ ಜೀವಕೋಶಗಳನ್ನು ಒಣಗಿಸುವುದಿಲ್ಲ
• ಜಲಾಂಶವನ್ನು ಹೀರಿ ಶಕ್ತಿಹ್ರಾಸಗೊಳಿಸುವುದಿಲ್ಲ.
• ಇದು ವಿಟಮಿನ್ ಬಿ ಹೊಂದಿರುವ ಏಕೈಕ ಉಪ್ಪು
• ಕೇವಲ NaCl ಅಲ್ಲದೇ 30ಕ್ಕೂ ಹೆಚ್ಚು ಖನಿಜಗಳನ್ನು ಹೊಂದಿದೆ.
• ಜೀವಕೋಶಗಳಲ್ಲಿನ ಅನಗತ್ಯ ರಾಸಾಯನಿಕಗಳನ್ನು ಹೊರತೆಗೆಯುತ್ತದೆ, ಆದರೆ, ಅಗತ್ಯಗಳನ್ನು ಅಲ್ಲಿಯೇ ಇಡುತ್ತದೆ.

ಇರಲಿ,
ಇಂದಿನ ಈ ಸಂಕಷ್ಟದಲ್ಲಿ, ಪುಪ್ಪುಸಕ್ಕೆ ಬಲವನ್ನೀಯಲು, ಕರುಳುಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇಲ್ಲಿ ಉತ್ಪತ್ತಿಯಾಗುವ ಕಫವನ್ನು ಈ ಲವಣಗಳು ಒಡೆದು ಕರಗಿಸುವುದರಿಂದ, ಪುಪ್ಪುಸಕ್ಕೆ ಶೇಕಡಾ 90ಕ್ಕಿಂತ ಹೆಚ್ಚು ಕಫದ ಭಾರ ಕಡಿಮೆಯಾಗುತ್ತದೆ. ಕಫದ ನಿರ್ವಹಣೆಯಲ್ಲೇ ಸೋತು ಸುಸ್ತಾಗುವ, ರೋಗನಿರೋಧಕತೆಯನ್ನು ಕ್ಷಿಣಿಸಿಕೊಳ್ಳುವ ಪುಪ್ಪುಸಕ್ಕೆ ಪರೋಕ್ಷವಾಗಿ ಬಹುದೊಡ್ಡ ಉಪಕಾರ ಮಾಡಬಲ್ಲವು ಈ ಲವಣಗಳು.

ಉದಾಹರಣೆಗೆ: ಉಪ್ಪು ನೀರು ಕುಡಿದು ವಾಂತಿಯಿಂದ ಕಫವನ್ನು ಮತ್ತು ಪಿತ್ತವನ್ನೂ ಹೊರತೆಗೆಯುವ ಬಹುಜನರು ತಮ್ಮ ಪುಪ್ಪುಸಗಳು ಕಫದಿಂದ ಮುಕ್ತವಾಗಿ ಹಗುರವಾದ ಅನುಭವವನ್ನು ನಿಮ್ಮಲ್ಲಿ ಅನೇಕರೊಂದಿಗೆ ಹಂಚಿಕೊಂಡಿರುತ್ತಾರೆ.

ಅಂದರೆ ಕರುಳಿನ ಕಫವನ್ನು ಹೊರತೆಗೆದರೆ, ಶರೀರದಲ್ಲಿ ಕಫದ ಬಾಧೆ ಕಡಿಮೆಯಾಗುವುದು.

ಚೂರ್ಣದಲ್ಲಿ ಸೇರಿಸಿರುವ “ಸೈಂಧವ ಲವಣ” ಮತ್ತು “ಸೌವರ್ಚ ಲವಣ” ಗಳೆರೆಡೂ ಕಫ ಛೇದನಮಾಡುತ್ತವೆ. ತನ್ಮೂಲಕ ಪುಪ್ಪುಸಗಳಲ್ಲಿ ಸೋಂಕಿಗೆ ಆಶ್ರಯತಾಣವಾಗುವ ವಿಕೃತ ಕಫ ಇಲ್ಲದಂತಾಗಿ, ಸೋಂಕು ತಗುಲುವುದಿಲ್ಲ, ತಗುಲಿದರೂ ಉಲ್ಬಣಿಸುವುದಿಲ್ಲ.

ಗಮನಿಸಿ ನೋಡಿ- ಕರುಳುಗಳಲ್ಲಿ ಗ್ಯಾಸ್ ಇರುವವರು, ನಿತ್ಯವೂ ಬೇಧಿ ಸರಿ ಆಗದಿರುವವರು ಸೋಂಕಿನಿಂದ ವಿಪರೀತ ತೊಂದರೆ ಪಡುತ್ತಿದ್ದಾರೆ. ಗ್ಯಾಸ್, ಬೇಧಿ ತೊಂದರೆ ಇಲ್ಲದವರು ಸೋಂಕುಂಟಾದರೂ ಸಹಜವಾಗಿ ಬೇಗ ಗುಣಮುಖರಾಗುತ್ತಿದ್ದಾರೆ.

ಈ ಎರೆಡೂ ಲವಣಗಳು, ನಿತ್ಯವೂ ಮಲವನ್ನು ಒಡೆದು ಹೊರಹಾಕುತ್ತವೆ. ಗ್ಯಾಸ್ ಉಂಟಾಗದಂತೆ ತಡೆಯುತ್ತವೆ. ಇದೇ ಕಾರಣದಿಂದ ಇಲ್ಲಿ ಅವುಗಳನ್ನು ಬಳಸಿಕೊಳ್ಳಲಾಗಿದೆ.

“ಸೈಂಧವ ಲವಣ ಹಾಗೂ ಸೌವರ್ಚ ಲವಣ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://wjpr.net/admin/assets/article_issue/1480495868.pdf

ಆಸಕ್ತರು,
“ಸೈಂಧವ ಲವಣ ಹಾಗೂ ಸೌವರ್ಚ ಲವಣ” ದ ಮೇಲೆ ನಡೆದ ಇನ್ನೂ ಅನೇಕ ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ನೋಡಬಹುದು.

“ಸೈಂಧವ ಲವಣ ಹಾಗೂ ಸೌವರ್ಚ ಲವಣ” ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!