ವಿಡಂಗ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-32..!

ವಿಡಂಗ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-32..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-32

31) ವಿಡಂಗ ( Embelia ribes):

ಆಯುರ್ವೇದದಲ್ಲಿ ಕ್ರಿಮಿಹರವೆಂದೇ ಬಳಸಲಾಗುತ್ತಿರುವ “ವಿಡಂಗ ಅಥವಾ ವಾಯುವಿಡಂಗ”ವು ಇನ್ನೂ ಅನೇಕ ಅಮೃತೋಪಮ ಗುಣಗಳನ್ನು ಹೊಂದಿದೆ.

ವಿಡಂಗವು ಪ್ರಧಾನವಾಗಿ –
• ಅನಗತ್ಯ ಸಿಹಿ/ಕಫ ಮತ್ತು ಮೇದಸ್ ಅನ್ನು ಶರೀರದ ಎಲ್ಲಾ ಭಾಗದಿಂದಲೂ ತಗೆದುಹಾಕುತ್ತದೆ.

• 2011 ರಲ್ಲಿ ನಡೆದ ಸಂಶೋಧನೆಯಂತೆ ಫಂಗಲ್ ನಿವಾರಕ ಎಂದು ಗುರುತಿಸಿಕೊಂಡಿದೆ.

• ಮೆದುಳಿನ ನರಕೋಶಗಳನ್ನು ಸಂರಕ್ಷಿಸುತ್ತದೆ ಮತ್ತು ಆಕ್ಷೇಪಕ ಅಥವಾ ಕಂಪವಾತವನ್ನು ತಡೆಯುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬರುತ್ತದೆ.

• ಮಧುಮೇಹದಲ್ಲಿ ಉಂಟಾಗುವ ಉಪದ್ರವಗಳಾದ ನರ, ರಕ್ತನಾಳ, ಹೃದಯ, ಮೂತ್ರಪಿಂಡಗಳನ್ನು ಸಂರಕ್ಷಿಸುತ್ತದೆ ಎಂದು ಕಾಣಸಿಗುತ್ತದೆ.

ಮೇಲಿನ ಎಲ್ಲಾ ಸಂಶೋಧನೆಗಳು ಪ್ರತ್ಯೇಕ ಉಪಯೋಗಗಳಾಗಿ ಕಂಡರೂ ಆ ಎಲ್ಲಾ ರೋಗ ಅಥವಾ ಅವಸ್ಥೆಗಳ ಮೂಲಕಾರಣವೇ ಶರೀರದಲ್ಲಿ ಸಂಚಯವಾಗುವ “ಅನಗತ್ಯ, ಉಪಯೋಗಕ್ಕೆ ಬಾರದ, ತೊಂದರೆ ಕೊಡುವ ಸಿಹಿ ಅಥವಾ ಕಫ ಮತ್ತು ಮೇದಸ್” ಗಳಾಗಿವೆ.

ಯಾವುದೇ ಸೋಂಕು/ಕ್ರಿಮಿ ತಾನು ತಳಊರಿ ಬೆಳೆಯಲು ಎಲ್ಲಾ ಸಹಕಾರವನ್ನು ಒದಗಿಸುವುದು ನಮ್ಮ ಶರೀರದಲ್ಲಿ ಸಂಚಯವಾಗಿರುವ ಈ ಅನಗತ್ಯ ಸಿಹಿ/ಕಫ/ಮೇದವೇ ಆಗಿದೆ. ಇಂತಹ ಮೂಲ ಕಾರಣವನ್ನು ಶರೀರದ ಮೂಲೆ ಮೂಲೆಯಿಂದಲೂ ಕರಗಿಸಿ ಹೊರಹಾಕುವ ಶಕ್ತಿಯಿರುವ “ವಿಡಂಗ ಅಥವಾ ವಾಯು ವಿಡಂಗ” ವನ್ನು ಇಂದಿನ ವೈರಾಣುವಿನ ಅವಸ್ಥೆಯಲ್ಲಿ ಬಳಸಲು ಯೋಚಿಸಿಲ್ಲದಿರುವು ನಿಜಕ್ಕೂ ಅತ್ಯಾಶ್ಚರ್ಯವಾಗಿದೆ.

“ವಿಡಂಗ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.ncbi.nlm.nih.gov/pmc/articles/PMC4147489/

“ವಿಡಂಗ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!