ನನ್ನ ಭಾರತ ಶ್ರೇಷ್ಠ ಭಾರತ..ಭಾಷೆ ಮತ್ತು ವ್ಯಾಕರಣ..!

ನನ್ನ ಭಾರತ ಶ್ರೇಷ್ಠ ಭಾರತ..ಭಾಷೆ ಮತ್ತು ವ್ಯಾಕರಣ..!

ಸಂಸ್ಕೃತವು ಬಹುತೇಕ ಎಲ್ಲಾ ಭಾಷೆಗಳಿಗಿಂತ ಮೂಲ ಭಾಷೆಯಾಗಿದೆ. ಆದ್ದರಿಂದ ಇದನ್ನು “ಮಾತೃಭಾಷೆ” ಎಂದು ಪರಿಗಣಿಸಲಾಗುತ್ತದೆ. ( ಇಂಡೋ – ಆರ್ಯನ್ ಭಾಷೆಗಳ ಅಡಿಯಲ್ಲಿ ಇದು ವರ್ಗೀಕರಿಸಲ್ಪಟ್ಟಿದೆ). ಸಂಸ್ಕೃತವು ಪ್ರಪಂಚದ 1,652 ಭಾಷೆಗಳೆಗೆ ಆಧಾರಸ್ತಂಭವಾಗಿದೆ. ಗ್ರೀಕ್, ಅರೇಬಿಕ್, ಪರ್ಷಿಯನ್ ಮತ್ತು ಆಂಗ್ಲ ಭಾಷೆಯ ಬೆಳವಣಿಗೆಯಲ್ಲೊ ಸಂಸ್ಕೃತದ ಕೊಡುಗೆ ಅಪಾರವಾಗಿದೆ.


ಲಿಪಿಯ ವಿಚಾರಕ್ಕೆ ಬಂದಾಗ ಥೈಲಾಂಡ್, ಲಾವೋಸ್ ಮತ್ತು ಕಾಂಬೋಡಿಯಾಗಳಲ್ಲಿ ದಕ್ಷಿಣ ಭಾರತದ ಭಾಷೆಯಾದ ‘ಪಲ್ಲವ’ ಲಿಪಿಯನ್ನು ಅಳವಡಿಸಿಕೊಂಡಿದೆ. ಉದಾಹರಣೆಗೆ ಇಂಡೋನೇಷ್ಯಾದ ಪ್ರಚಲಿತವಿರುವ ಭಾಷೆಯು ‘ಬಹಸ ಇಂಡೋನೇಷ್ಯಾ’ ಎಂದು ಕರೆಯಲ್ಪಡುತ್ತದೆ. ಇದರಲ್ಲಿ ‘ಬಹಸ’ ಎನ್ನುವ ಪದವನ್ನು ‘ಭಾಷಾ’ ಎಂಬ ಪದದಿಂದ ಅಳವಡಿಸಿಕೊಳ್ಳಾಲಾಗಿದೆ. ಇಲ್ಲಿಯ ವೈಮಾನಿಕ ಸೇವೆಯನ್ನು ‘ಗರುಡ ಏ ಏರ್ಲೈನ್ಸ್’ ಎಂದು ಕರೆಯಲಾಗುತ್ತದೆ.

ವ್ಯಾಕರಣ

. ಕ್ರಿ.ಪೂ. 5ನೇ ಶತನಾನದಲ್ಲಿ ಪಾಣಿನಿಯು ಧ್ವನಿಶಾಸ್ತ್ರ, ಧ್ವನಿವಿಜ್ಞಾನ, ರೂಪವಿಜ್ಞಾನ ಕ್ಷೇತ್ರಗಳಲ್ಲಿ ಹಲವು ಆವಿಷ್ಕಾರಗಳನ್ನು ಮಾಡಿದರು.


20ನೇ ಶತಮಾನದ ಮಧ್ಯಭಾಗದವರೆಗೂ ಪಾಶ್ಚಾತ್ಯ ಸಿದ್ದಾಂತಕ್ಕಿಂತಲೂ ಪಾಣಿನಿಯ ರೂಪ ವಿಜ್ಞಾನದ ವಿಶ್ಲೇಷಣೆಯೇ ಹೆಚ್ಚು ಮಹತ್ವದ್ದಾಗಿದೆ.
ಪಾಣಿನಿಯನ್ನು ‘ಭಾಷಾವಿಜ್ಞಾನದ ಪಿತಾಮಹ’ ಎಂದು ಕರೆಯಲಾಗಿದೆ. ಅವರ ಸಂಸ್ಕ್ರತ ವ್ಯಾಕರಣವು ಪ್ರಪಂಚದ ಎಲ್ಲಾ ಭಾಷೆಗಳಿಗಿಂತಲೂ ಪರಿಪೂರ್ಣವಾಗಿದ್ದು ಸುಸಜ್ಜಿತವಾದ ನೆಲೆಗಟ್ಟನ್ನು ಹೊಂದಿದೆ.ತೀರಾ ಮೊದಲಿನ ಭಾರತೀಯ ವ್ಯಾಕರಣಜ್ಞರ ಕೃತಿಗಳು ನಾಶವಾಗಿವೆ.

ಉದಾಹರಣೆಗೆ ಸಾಕತಾಯಣನ(ಸುಮಾರು ಕ್ರಿ.ಪೂ. 8ನೇ ಶತಮಾನ) ಕೃತಿಯು ದೊರೆತಿಲ್ಲ.
•. ಪಾಣಿನಿಯು ವ್ಯಾಕರಣ ಶಾಸ್ತ್ರದ ಕುರಿತು “ಅಷ್ಟಾಧ್ಯಾಯಿ” ಎಂಬ ಗ್ರಂಥವನ್ನು ರಚಿಸಿದ್ದಾನೆ.


•. ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕೃತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವೆಂದು ಉಲ್ಲೇಖವಿದೆ. ಕಾಶಕೃತ್ಸ್ನ ವ್ಯಾಕರಣದಲ್ಲಿ ಮೂರು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟ, ಕಾಶಕೃತ್ಸ್ನ ವ್ಯಾಕರಣ, ಕಾತಂತ್ರವ್ಯಾಕರಣಕ್ಕೆ ಮೂಲವಾಗಿದ್ದಂತೆ. ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯ ಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ.


•. ‘ಅಷ್ಟಾಧ್ಯಾಯಿ ಗ್ರಂಥದಲ್ಲಿ 3,981 ಸೂತ್ರಗಳಿವೆ. ಈ ಎಲ್ಲ ಸೂತ್ರಗಳೂ ಒಂದೊಂದರಲ್ಲಿಯೂ ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ಈ ವ್ಯಾಕರಣ ಗ್ರಂಥಕ್ಕೆ ಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ‌ಅಷ್ಟಕ, ಪಾಣಿನಿಯ ವೃತ್ತಿ ಸೂತ್ರ, ಅಕಾಲಕ ವ್ಯಾಕರಣ, ಶಾಲತುರೀಯತಂತ್ರ ಎಂಬುದು ಈ ಅಷ್ಟಾಧ್ಯಾಯಿಯ ಇತರ ಹೆಸರುಗಳು. ಈ ಗ್ರಂಥದಲ್ಲಿ ಸಂಸ್ಕೃತದ ವ್ಯಾಕರಣ ಸೂತ್ರಗಳನ್ನು ಮತ್ತು ವ್ಯಾಖ್ಯಾನಗಳನ್ನು ಪಾಣಿನಿಯು ನೀಡುತ್ತಾನೆ.

ಸಂಗ್ರಹ : ಶ್ರೀ ಪ್ರಭಂಜನ
        ರಾಜ್ಯ ಸಂಯೋಜಕರು
        ವಿವೇಕ ಶಿಕ್ಷಣ ವಾಹಿನಿ

ನನ್ನಭಾರತಶ್ರೇಷ್ಠ_ಭಾರತ

Admin

Leave a Reply

Your email address will not be published. Required fields are marked *

error: Content is protected !!