ಕಂಟಕ ಕಳೆಯುವ “ಕಂಟಕಿ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-20..!

ಕಂಟಕ ಕಳೆಯುವ “ಕಂಟಕಿ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-20..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-20

19)ಕಂಟಕ ಕಳೆಯುವ “ಕಂಟಕಿ ಕರಂಜ/ಲತಾಕರಂಜ” (Caesalpinia bonducella)

“ಕಂಟಕಿ ಕರಂಜ” “ಕುಬೇರಾಕ್ಷ”
ಎಂಬ ಪರ್ಯಾಯ ನಾಮಗಳನ್ನು ಹೊಂದಿರುವ “ಲತಾ(ಬಳ್ಳಿ)ಕರಂಜ”ವನ್ನು ವಿಶೇಷವಾಗಿ ವಿಷಮಜ್ವರಹರಾಗಿ ಬಳಸಲಾಗುತ್ತದೆ.

ಲತಾಕರಂಜವು-
ಶೋಥಹರ(ಸೋಂಕಿನಿಂದ ಉಂಟಾದ ಊತ),
ವಿಷಮಜ್ವರಹರ (ಮಲೇರಿಯಲ್ ಫಿವರ್ )
ಮತ್ತು
ವ್ರಣರೋಪಕ(ಸೋಂಕಿನಿಂದ ಉಂಟಾದ ಗಾಯವನ್ನು ಗುಣಪಡಿಸುವುದು) ಗುಣಗಳನ್ನು ಹೊಂದಿದೆ.

CCRAS (Central Council for Research in Ayurvedic Science) ಅವರು ಬಹು ಹಿಂದೆಯೇ ಸಿದ್ಧಪಡಿಸಿರುವ ಮಲೇರಿಯಾ ಜ್ವರನಿವಾರಕ ಚೂರ್ಣವಾದ “ಆಯುಷ್-64” ನಲ್ಲಿ “ಲತಾಕರಂಜ”ವು ಪ್ರಧಾನ ಔಷಧಿ ಘಟಕವಾಗಿದೆ.

1968 ರಲ್ಲಿ ನಡೆದ ಸಂಶೋಧನೆಯಂತೆ ಈ ಬೀಜದ ಸತ್ವವು ಅಂಟಿವೈರಲ್ ಅಥವಾ ವೈರಸ್ ನಾಶಕ ಗುಣವನ್ನು ಹೊಂದಿದೆ ಎಂದು ತಿಳಿದುಬರುತ್ತದೆ.

“ಲತಾಕರಂಜ” ಬೀಜದ ಚೂರ್ಣ 222.23 ಮಿಲಿಗ್ರಾಮ್
ಮತ್ತು
“ಅತಿವಿಷ” ಚೂರ್ಣ 27.77ಮಿಲಿಗ್ರಾಂ

ಒಟ್ಟು 250ಮಿಲಿಗ್ರಾಂ ಮಿಶ್ರಣಕ್ಕೆ ಸಮಪ್ರಮಾಣದ ಅಂದರೆ 250 ಮಿಲಿಗ್ರಾಮ್ ಬೆಲ್ಲ ಅಥವಾ ಸಕ್ಕರೆಯೊಂದಿಗೆ ಬೆರೆಸಿ ಕೊಡುವುದರಿಂದ ವಿಶಮಜ್ವರಹರವಾಗಿ ಕೆಲಸ ಮಾಡುವುದು.

ಅಥರ್ವ ಸಂಸ್ಥೆ ಸಿದ್ಧಪಡಿಸಿದ “ಲತಾಕರಂಜ”ವನ್ನು ಹೊಂದಿರುವ ರೋಗನಿರೋಧಕ ಶಕ್ತಿವರ್ಧಕ ಚೂರ್ಣದಿಂದ ತಯಾರಿಸಿದ ಕಷಾಯಕ್ಕೆ ಸ್ವಲ್ಪ ಪ್ರಮಾಣದಲ್ಲಿ(ಸುಮಾರು 1 ಗ್ರಾಮ್)ಸೇರಿಸುವ ಬೆಲ್ಲವು ಜ್ವರನಿವಾರಣೆಯಲ್ಲಿ ಔಷಧಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಹಾಗಾಗಿ,
“ನಾವು ಈ ಕಷಾಯಕ್ಕೆ ಸ್ವಲ್ಪ ಬೆಲ್ಲ ಸೇರಿಸುವುದನ್ನು ಶಿಫಾರಸ್ಸು ಮಾಡಿದ್ದೇವೆ.”

ಲತಾಕರಂಜವನ್ನು ಬಳಸುವ ಅನ್ಯ ಅವಸ್ಥೆಗಳು:
• ಸೋಂಕಿನಿಂದ ಉಂಟಾಗುವ ಊತ, ವ್ರಣ(ಗಾಯ)
• ಯಕೃತ್-ಪ್ಲೀಹ ರೋಗ
• ಪ್ರಮೇಹ / ಮಧುಮೇಹ
• ವಿಷಮ ಜ್ವರ
• ಚರ್ಮದ ರೋಗಗಳು

ಇಂದು ನಾವು ಎದುರಿಸುತ್ತಿರುವ ಸೋಂಕು, ಅದರಿಂದ ಉಂಟಾಗುವ ಊತ ಮತ್ತು ಗಾಯಗಳನ್ನು ಗುಣಪಡಿಸಲು “ಲತಾಕರಂಜ”ವು ಸಿದ್ಧೌಷಧವಾಗಿದ್ದರೂ ಆಯುರ್ವೇದ ಬಳಕೆಯನ್ನು ಮಾಡದಿರುವುದು ಜಾಣತನವೇ?

“ಲತಾಕರಂಜ”ವನ್ನು ಬಳಸಿ ತಯಾರಿಸುವ ಆಯುರ್ವೇದದ ಕೆಲವು ಔಷಧಿಗಳು:
• ವಿಷಮಜ್ವರಘ್ನ ವಟಿ
• ಕುಬೇರಾಕ್ಷಾದಿ ವಟಿ

“ಲತಾಕರಂಜ” ಗಿಡಮೂಲಿಕೆಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!