ಮಲೆನಾಡಿನ ಯುವ ಉದ್ಯಮಿ ನಿವೇದನ್ ಹೊಸ ಪ್ರಯೋಗ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಕೆ..!

ಮಲೆನಾಡಿನ ಯುವ ಉದ್ಯಮಿ ನಿವೇದನ್ ಹೊಸ ಪ್ರಯೋಗ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಕೆ..!

ಮಲೆನಾಡಿನಲ್ಲಿ ಅದರಲ್ಲೂ ಶಿವಮೊಗ್ಗ ಜಿಲ್ಲೆ ಅತೀ ಹೆಚ್ಚು ಅಡಿಕೆ ಬೆಳೆಯುವ ಬೆಳೆಗಾರಿದ್ದು ಅಡಿಕೆಯನ್ನು ಅನೇಕ ವಿವಿಧ ಪಧಾರ್ಥಗಳಿಗೆ ಬಳಸುತ್ತಾರೆ ಅದರೆ ಶಿವಮೊಗ್ಗದ ಯುವ ಉದ್ಯಮಿ ನಿವೇದನ್ ಸೆಂಪೆ ಹೊಸ ಪ್ರಯೋಗವನ್ನು ಮಾಡಿದ್ದಾರೆ ಈ ಅಡಿಕೆ ಟೀ ಪುಡಿ ಚಹಾ, ಜ್ಯೂಸ್, ವಾಹನಗಳಲ್ಲಿ ಬಳಕೆ ಮಾಡುವ ಫರ್ಫ್ಯೂಮ್ ಮೊದಲಾದವುಗಳನ್ನು ಮಲೆನಾಡಿನ ಜನರ ಜೀವನಾಡಿ ಅಡಿಕೆಯಿಂದಲೇ ತಯಾರು ಮಾಡುವ ಮೂಲಕ ಜನರಲ್ಲಿ ಹೆಸರಾಗಿದ್ದಾರೆ.

ಅಡಿಕೆಯಿಂದ ಅರೇಕಾ ಟೀ ಅಭಿವೃದ್ಧಿಪಡಿಸಿದ ನಿವೇದನ್ ನೆಂಪೆ ಅವರು ಅಡಕೆಯಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಅಭಿವೃದ್ಧಿಪಡಿಸಿದ್ದಾರೆ ಕೊರೊನಾ ಸಂಕಷ್ಟದ ಕಾಲದಲ್ಲಿ ಅಡಿಕೆಯಿಂದ ಅರೇಕಾ ಸ್ಯಾನಿಟೈಸರ್‌ ಅಭಿವೃದ್ಧಿಪಡಿಸಿರುವ ಅವರು ಅದನ್ನು ಗ್ರಾಮೀಣ ಯುವ ಉದ್ಯಮಿಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ಹೊಂದಿದ್ದಾರೆ.

ಸರಕಾರದ ಮಾನದಂಡದ ಪ್ರಕಾರ ಹ್ಯಾಂಡ್‌ ಸ್ಯಾನಿಟೈಸರ್‌ನಲ್ಲಿ ಶೇ.70ರಷ್ಟು ಆಲ್ಕೋಹಾಲ್‌ ಅಂಶ ಇರಬೇಕು. ಇದರ ಜತೆಗೆ ಅಡಿಕೆಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್‌ ಪದಾರ್ಥ, ಗ್ಯಾಲಿಕ್‌ ಆ್ಯಸಿಡ್‌, ಟ್ಯಾನಿಚ್‌ ಸೇರಿದಂತೆ ಇತರೆ ಅಂಶಗಳನ್ನು ಬಳಸಿಕೊಂಡು ಹ್ಯಾಂಡ್‌ ಸ್ಯಾನಿಟೈಸರ್‌ ತಯಾರು ಮಾಡಲಾಗಿದೆ.

ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ಯುವ ಉದ್ಯಮಿ ನಿವೇದನ್ ಸೆಂಪೆ ಇಡೀ ದೇಶವೇ ಕರೋನ ಹಾವಳಿಯಿಂದ ತತ್ತರಿಸಿದ್ದು ಬೆಂಗಳೂರು ಸೇರಿದಂತೆ ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ ಸಾವಿರಾರು ಯುವಕರು ನಗರಗಳನ್ನು ಬಿಟ್ಟು ಹಳ್ಳಿ ಸೇರಿಕೊಂಡಿದ್ದಾರೆ ಈ ಯುವಕರಿಗೆ ಕೆಲಸಗಳಿಲ್ಲ ಅದರಿಂದ ಅಡಿಕೆ ಮಲೆನಾಡಿನಲ್ಲಿ ಸುಲುಭವಾಗಿ ಸಿಗುವ ವಸ್ತು ಇದನ್ನು ಬಳಸಿಕೊಂಡು ಉತ್ಪಾದನೆ ಮಾಡಲು ಯಾರದರೂ ಯುವಕರು ಮುಂದಾದರೇ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಎಲ್ಲಾ ರೀತಿಯಲ್ಲೂ ಪ್ರೋತ್ಸಹಿಸುತ್ತೇವೆ ಎಂದರು.

ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ಹಾಗೂ ಗ್ರಾಮೀಣ ಯುವಕರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗವನ್ನು ಒದಗಿಸುವುದಾಗಿದೆ ನಿವೇದನ್ ತಿಳಿಸಿದರು.

ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಠಿ:

ಒಟ್ಟಿನಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಸ್ವ ಉದ್ಯೋಗ ಸೃಷ್ಠಿಸುವಲ್ಲಿ ಹಾಗೂ ಕರೋನದಿಂದ ಪಾರಗಲು ಸ್ವಾನಿಟೈಸರ್ ಉತ್ಪಾದನೆ ಹಾಗೂ ಅಡಿಕೆ ಬೆಳೆಗಾರರಿಗೂ ಉಪಯೋಗವಾಗುವ ನಿಟ್ಟಿನಲ್ಲಿ ನಿವೇಧನ್ ಅವರ ಆಲೋಚನೆ ವಿಶಿಷ್ಠವಾಗಿದ್ದು ಸರ್ಕಾರದ ಮಟ್ಟದಲ್ಲಿ ಇದಕ್ಕೆ ಪ್ರೋತ್ಸಹ ದೊರೆತರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಿವೇದನ್ ಸಾಧಿಸುವುದರಲ್ಲಿ ಅಚ್ಚರಿ ಇಲ್ಲ.

Admin

Leave a Reply

Your email address will not be published. Required fields are marked *

error: Content is protected !!