ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ.? ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ..?

ನಾವು ನಿತ್ಯವೂ ಕುಡಿವ ನೀರು ಎಷ್ಟು ಆರೋಗ್ಯಕರ.? ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ..?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ನಗರದ ಬಹುತೇಕ ಮನೆಗಳಲ್ಲಿ ಮತ್ತು ಇತ್ತೀಚಿಗೆ ಎಲ್ಲಾ ಹಳ್ಳಿಗಳಲ್ಲಿ ಕುಡಿಯುತ್ತಿರುವ ನೀರು, ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದರೂ ಶುದ್ಧ ಎಂದು ಹೇಳುವ ಕಂಪನಿಗಳ ಮಾತು ಕೇಳಿ, ಪೇಯ್ಡ್ ರಿಸರ್ಚ್ ಗಳ ರಿಪೋರ್ಟ್ ಕೇಳಿ ನಿತ್ಯವೂ ಕುಡಿಯುತ್ತಿದ್ದೇವೆ ಮತ್ತು ಅದರಿಂದ ಮಾನವನ ಆರೋಗ್ಯ ಅತ್ಯಂತ ಶೋಚನೀಯವಾಗಿ ಕುಸಿಯುತ್ತಿದೆ!!!

ಏನಿದು ಆರ್.ಒ.ವಾಟರ್?
ರಿವರ್ಸ್ ಆಸ್ಮೋಸಿಸ್ ನೀರು. ಅಂದರೆ ನೀರಿಗೆ ಇರುವ ಎಲ್ಲಾಗುಣಗಳನ್ನು ಕಳೆದುಕೊಂಡ ಆಮ್ಲೀಯ ಜಲವೇ ಆರ್.ಒ.ವಾಟರ್.

ಇಂದಿನ ಬಹುತೇಕ ಗ್ಯಾಸ್ಟ್ರೈಟೀಸ್ ಗಳಿಗೆ ಮತ್ತು ಆ್ಯಸಿಡಿಟಿಗಳಿಗೆ ಈ ಆರ್.ಒ ಜಲವೇ ಕಾರಣವಾಗಿದೆ.

ಈಗಾಗಲೇ ಉದರದಲ್ಲಿ ಅತ್ಯಂತ ಕಡಿಮೆ ಪಿ ಹೆಚ್ ಇರುವ ಆ್ಯಸಿಡ್ ಇದ್ದು ಇನ್ನಷ್ಟು ಘಾಸಿಗೊಳಿಸುತ್ತಿದೆ ಈ ಜಲ. ಮತ್ತು
ಎಲ್ಲಾ ಖನಿಜಾಂಶಗಳನ್ನು ಇಲ್ಲವಾಗಿಸಿ ಕುಡಿಯುವ ಜಲದ ಕಾರಣದಿಂದಲೇ ಇಂದು ಬಹುತೇಕರ ಮೂಳೆಗಳು ಹರೆಯದಲ್ಲೇ ಸವಕಳಿ ಕಾಣುತ್ತಿವೆ,‌ ಶರೀರ ನೇರ ನಿಲ್ಲಲು ಕಾರಣವಾದ ಅಸ್ಥಿಧಾತುವಿನ‌ಕೊರತೆಯಿಂದಾಗಿ ಯುವಕರಲ್ಲಿ ಅತಿಯಾದ ಸೊಂಟದ ತೊಂದರೆಗಳು ಕಾಣುತ್ತಿವೆ. ಯುವತಿಯರಲ್ಲಿ ಮುಟ್ಟಿನ‌ತೊಂದರೆಗಳು ಕಾಣುತ್ತಿವೆ.

ತಾಮ್ರದ ಪಾತ್ರೆಯ ಜಲ ಆರೋಗ್ಯದಾಯಕವೇ? ತಟಸ್ಥವೇ? ಅಥವಾ ಆರೋಗ್ಯಕ್ಕೆ ಮಾರಕವೇ?

ಇಂದು ನಾವು ಕುಡಿಯುತ್ತಿರುವ ತಾಮ್ರದ ಜಲ ನೇರವಾಗಿ ಮಾರಕವೆಂದೇ ಹೇಳಬಹುದು. ಬಹುತೇಕ ಉದರ, ಯಕೃತ್ ಮತ್ತು ಕಿಡ್ನಿ ತೊಂದರೆಗಳಿಗೆ ಈ ತಾಮ್ರದ ಜಲವೇ ಕಾರಣ!!

ಹಿಂದೆ ಕುಡಿಯುತ್ತಿದ್ದ ತಾಮ್ರದ ದೊಡ್ಡ ದೊಡ್ಡ ಹಂಡೆಯ ನೀರು ತಟಸ್ಥ ಅಥವಾ ಕ್ಷಾರೀಯವಾಗಿತ್ತು, ಮತ್ತು ತಾಮ್ರದ ಪಾತ್ರೆಯ ಒಳಗೆ ಕಿಲಾಯ ಎಂಬ ಹೆಸರಿನಲ್ಲಿ ಲೋಹ ಲೇಪನ ಮಾಡುತ್ತಿದ್ದರು.

ಇಂದು ಆರ್ ಒ ಜಲ, ಆಮ್ಲೀಯ ಗುಣ ಹೊಂದಿದ್ದು ಅದು ನೇರ ತಾಮ್ರಕ್ಕೆ ಸಂಪರ್ಕ ಬಂದರೆ, ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಿ ಹೆಚ್ಚಿನ ತಾಮ್ರ ಅಶುದ್ಧರೂಪದಲ್ಲಿ (ಆಯುರ್ವೆದದಲ್ಲಿ ಮಾತ್ರ ಲೋಹಗಳ ಶುದ್ಧೀಕರಣ‌ ಮತ್ತು ಭಸ್ಮೀಕರಣ‌ ಸಿದ್ಧಾಂತ ಇದೆ) ಶರೀರ ಸೇರುತ್ತದೆ.

ಇದು ಕಾಲಾಂತರದಲ್ಲಿ ದೀರ್ಘಕಾಲೀನ ಯಕೃತ್ತೊಂದರೆ (Chronic Liver Disease), ಮೂತ್ರಪಿಂಡಗಳನ್ನು(Chronic Kidney Disease) ಹಾಳು ಮಾಡುತ್ತದೆ, ಮತ್ತು ಇದು ಮರಳಿ ಸರಿಮಾಡಲಾಗದ ದೀರ್ಘಕಾಲೀನ ತೊಂದರೆಗಳಾಗಿ ದೇಹನಾಶ ಮಾಡುತ್ತವೆ.!!!

ವಿಜ್ಞಾನ ಎಂದು ನಂಬಿ ಜೀವನಕ್ಕೇ ಕುತ್ತು ತಂದುಕೊಳ್ಳುವ ಈ ವ್ಯವಸ್ಥೆ ನಮಗೆ ಬೇಕೆ?

ಮೊದಲೇ ತಾಮ್ರದ ಪಾತ್ರೆ! ಇನ್ನು ಅದರಲ್ಲಿ ಆರ್.ಒ.ನೀರು!! ಇದನ್ನು ಕುಡಿಯುವುದು ಸರ್ವಥಾ ವರ್ಜ್ಯ

ಕ್ರಿಮಿಗಳನ್ನು ಕೊಂದರೇ ನಮ್ಮ ಬದುಕು ಎಂದು ಪ್ರಧಾನವಾಗಿ ನಂಬಿರುವ ಸಿದ್ಧಾಂತದಿಂದ ಆಂತರಿಕ ಇಕೋ ವ್ಯವಸ್ಥೆ ಹಾಳಾಗಿ, metabolic diseases ಬರುತ್ತಿವೆ.

ಅತ್ಯಂತ ಸರಳವಾಗಿ ನೀರಿನ ಪರೀಕ್ಷೆ ಹೇಗೆ ಮಾಡಬೇಕು?
ಇದಕ್ಕೆ ಲ್ಯಾಬ್ ಗಳು ಬೇಕಿಲ್ಲ.

ಯೇನಾಭಿವೃಷ್ಟಂ ಅಮಲಂ ಶಾಲ್ಯಾನ್ನಂ ರಜತಸ್ಥಿತಮ್|
ಅಕ್ಲಿನ್ನಂ ಅವಿವರ್ಣಂ‌ ಚ ತತ್ ಪೇಯಂ ‌ಗಂಗಾಮ್ ಅನ್ಯಥಾ||3||
ಸಾಮುದ್ರಂ ತತ್ ನ‌ಪಾತವ್ಯಂ……….|
ವಾಗ್ಭಟ ಸೂತ್ರ ಸ್ಥಾನ, ಆಧ್ಯಾಯ-5

Yenabhi vrustham amalam shalyannam rajatha sthitam |
Aklinnam avivarnam cha tat peyam Gangaam anyatha ||3||
Samudram tam na patavyam……………|
Vagbhata Sutra sthana chapter-5

ಬೆಳ್ಳಿಯ ಪಾತ್ರಯಲ್ಲಿ ಅನ್ನವನ್ನಿಟ್ಟು, ಯಾವ ನೀರನ್ನು ಪರೀಕ್ಷಿಸ ಬೇಕಿದೆಯೋ ಅದನ್ನು ಚಿಮುಕಿಸಿ ಇಡಬೇಕು. ಮೂರು ಗಂಟೆಯಲ್ಲಿ ಅದು ಕ್ಲಿನ್ನ ಅಂದರೆ ಅಂಟು ಅಂಟಾಗದಿದ್ದರೆ ಮತ್ತು ಬಣ್ಣ ವ್ಯತ್ಯಾಸಗಾವದಿದ್ದರೆ ಆ ಜಲ ಕುಡಿಯಲು ಯೋಗ್ಯ, ಎರಡರಲ್ಲಿ ಯಾವೊಂದು ವ್ಯತ್ಯಾಸ ಆದರೂ ಅಂತಹ ಜಲ ಕುಡಿಯಲು ಅಯೋಗ್ಯ(ಸಾಮುದ್ರ ಜಲ) ಜಲ ಎಂದು ತ್ಯಜಿಸಬೇಕು.

ಯಾವ ನೀರು ಅತ್ಯಂತ ಶ್ರೇಷ್ಠ, ಈ ಕಾಲದಲ್ಲಿ ಅದನ್ನು ಕುಡಿಯಲು ಬಳಸುವುದರಿಂದ ಎಷ್ಟೆಲ್ಲಾ ರೋಗಗಳನ್ನು ತಡೆಯಬಹುದು ಎಂಬುದನ್ನು ನಾಳೆ ನೋಡೋಣ.

ಇನ್ನೂ ಹೆಚ್ಚಿನ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬಹುದು.

ಪ್ರೀತಿಯ ಬಂಧುಗಳೇ,

ಆಯುರ್ವೇದ ಸಲಹೆ:
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!