ತುಂಗಾ ಜಲಾಶಯದ ಭರ್ತಿಗೆ ಒಂದು ಅಡಿ ಬಾಕಿ ಜಲಾಶಯದಿಂದ ನೀರು ಹೊರಗೆ..!

ತುಂಗಾ ಜಲಾಶಯದ ಭರ್ತಿಗೆ ಒಂದು ಅಡಿ ಬಾಕಿ ಜಲಾಶಯದಿಂದ  ನೀರು ಹೊರಗೆ..!

ಶಿವಮೊಗ್ಗ: ಇಲ್ಲಿನ ಜೀವನದಿ ತುಂಗಾ ಜಲಾಶಯದಿಂದ ಇಂದು ಹೆಚ್ಚವರಿ ನೀರನ್ನು ಹೊರಬಿಡಲಾಯಿತು.

ತುಂಬಿದ ತುಂಗೆಯ ಅಂಗಳದಿಂದ ನೀರನ್ನು ಬಿಟ್ಟ ಸನ್ನಿವೇಶ ನಯನ ಮನೋಹರವಾಗಿತ್ತು.

ಪ್ರಸಕ್ತ 588.25 ಮೀಟರ್ ಹೊಂದಿರುವ ತುಂಗಾ ನದಿಯಲ್ಲಿ ಇಂದು 587.69 ಮೀಟರ್ ನೀರಿದ್ದು, ಜಲಾಶಯ ಭರ್ತಿಗೆ ಒಂದು ಅಡಿ ಮಾತ್ರ ಬಾಕಿಇದೆ 5546ಕ್ಯೂಸೆಕ್ಸ್ ನೀರು ಒಳ ಬರುತ್ತಿರುವುದರಿಂದ ನೀರು ಬಿಡುವ ನಿರ್ಧಾರಕ್ಕೆ ಬರಲಾಗಿದೆ ಎರಡು ಸಾವಿರ ಕ್ಯೂಸೇಸ್ ನೀರು ನದಿಗೆ ಬಿಡಲಾಗಿದೆ‌.

ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಗೆಯ ಅಂಗಳ ತುಂಬುತ್ತಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 584.೦4 ಮೀಟರ್ ನೀರಿತ್ತು. ಈ ವರ್ಷ ಆ ಪ್ರಮಾಣಕ್ಕಿಂತ ಕಡಿಮೆ ನೀರಿದ್ದರು ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಭದ್ರಾ ಮಾಹಿತಿ:
ಭದ್ರಾ ಅಣೆಕಟ್ಟೆಯಲ್ಲಿ ಇಂದು 135 ಅಡಿ ನೀರಿದ್ದು, 3145 ಕ್ಯೂಸೆಕ್ಸ್ ಒಳ ಹರಿವಿದೆ. ಹೊರ ಹರಿವು 156 ಕ್ಯೂಸೆಕ್ಸ್ ಆಗಿದ್ದು, ಇಂದಿನ ಸಾರ‍್ಥ್ಯ 23.614 ಟಿಎಂಸಿ ಆಗಿದೆ.

ಕಳೆದ ವರ್ಷ ಇದೆ ಹೊತ್ತಿಗೆ 124.2 ಅಡಿ ನೀರಿದ್ದು, ಅಂದಿನ 17.556 ಟಿಎಂಸಿ ಇತ್ತು.

ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರೆ ನಯನ ಮನೋಹರ ದೃಶ್ಯಗಳಲ್ಲಿ ಕಂಗೊಳಿಸುತ್ತಿದೆ.

Admin

Leave a Reply

Your email address will not be published. Required fields are marked *

error: Content is protected !!