ಮಧುಮೇಹದಲ್ಲಿ ಚಪಾತಿ ತಿನ್ನಬಾರದ ವಸ್ತುವೇ?!!!

ಮಧುಮೇಹದಲ್ಲಿ ಚಪಾತಿ ತಿನ್ನಬಾರದ ವಸ್ತುವೇ?!!!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-13

ಮಧುಮೇಹದಲ್ಲಿ ಚಪಾತಿ ಬೇಡ ಎಂಬ ವಿಷಯದ ಮೇಲೆ ಹಲವಾರು ಪ್ರಶ್ನೆಗಳು ಬಂದಿವೆ.
ಚಪಾತಿಯನ್ನು ನೂರಾರು ವರ್ಷಗಳಿಂದ ಉಪಯೋಗಿಸುತ್ತಿದ್ದರೂ, ಇತ್ತೀಚೆಗೆ ಮಧುಮೇಹಿಗಳ ಸಂಖ್ಯೆ
ಹೆಚ್ಚುತ್ತಿದೆ.

ಹಾಗಾಗಿ ಚಪಾತಿಯನ್ನು ದೂರುವುದೇಕೆ?!…

ಹೀಗೆ ನಿಮ್ಮಲ್ಲೂ ಪ್ರಶ್ನೆಗಳ ರಾಶಿಗಳೇ ಇರಬಹುದು. ಉತ್ತರ ಇಲ್ಲಿದೆ…

ಗೋಧಿ ಸವಿರಾರು ವರ್ಷಗಳಿಂದ ಉಪಯೋಗಿಸುವ ಖಾದ್ಯ, ಆದರೆ,
ಇತ್ತೀಚೆಗೆ ಪ್ರಾಂತ್ಯ, ಜನರ ಪ್ರಕೃತಿ, ಜೀವನ ಶೈಲಿ ಎಲ್ಲಾ ಬದಿಗಿಟ್ಟು ಗೋಧಿಯನ್ನು ಸೇವಿಸುತ್ತಿದ್ದಾರೆ.
ಮತ್ತು
ತಯಾರಿಕಾ ವಿಧಾನವನ್ನು ಶೀಘ್ರ ಹಾಗೂ ತಮಗೆ ಬೇಕಾದಂತೆ ಸುಲಭಗೊಳಿಸಿಕೊಂಡೂ ಬಳಸುತ್ತಿದ್ದಾರೆ.

ಇವು ಮಧುಮೇಹ ಉತ್ಪತ್ತಿಯಲ್ಲಿ ಒಂದು ಪ್ರಮುಖ ಅಂಶವಾಗಿ ಕಂಡುಬರುತ್ತಿವೆ.

ಗೋಧಿಯಲ್ಲಿ ಗ್ಲುಟಿನ್ ಎಂಬ ರಾಸಾಯನಿಕ ಇದೆ, ಇದು ಪ್ಯಾಂಕ್ರಿಯಾಸ್ ಜೀವಕಣಗಳನ್ನು ನೇರ ಹಾನಿಗೊಳಿಸುತ್ತದೆ. ಮತ್ತೆ ಇತರ ಜೀವಕೋಶಗಳು ತಮ್ಮ ನೀರನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಗೋಧಿಯ ಜಿಗುಟುತನಕ್ಕೆ ಇದೇ ಕಾರಣ, ಮೈದಾದಲ್ಲಂತೂ ಇದು ಹೇರಳವಾಗಿ ಇರುತ್ತದೆ.

ಗ್ಲುಟಿನ್ ಅನ್ನು ಕರಗಿಸಿ ಪ್ರತ್ಯೇಕಗೊಳಿಸುವ ಮತ್ತು ನಿಷ್ಕ್ರಿಯಗೊಳಿಸುವ ವಿಧಾನಗಳಿಂದ ದೂರ ಸರಿದು ಗೋಧಿಯನ್ನು ಸೇವಿಸುತ್ತಿರುವುದೇ ಇಂದಿನ ಅನಾಹುತಕ್ಕೆ ಕಾರಣ.

ಗೋಧಿಯನ್ನು ಸಾಕಷ್ಟು ನೀರಿನೊಳಗೆ ಬೇಯಿಸಿದರೆ ಗ್ಲುಟಿನ್ ಬೇರ್ಪಡುತ್ತದೆ, ಹಾಗಾಗಿ ಬೇಯಿಸಿದ ಗೋಧಿಯನ್ನು ತಿನ್ನಬಹುದು.

ಇತ್ತೀಚಿಗೆ Back to nature ಹೆಸರಿನಲ್ಲಿ- ಹಿಂದೆ ಭಾರತದಲ್ಲಿ ಚಪಾತಿ ತಯಾರಿಸುತ್ತಿದ್ದ Sourdough bread ವಿಧಾನವನ್ನು ಬಳಸುವ ಯುವಕರು ಇಂದು ಹೆಚ್ಚುತ್ತಿರುವುದು, ಈ ನಿಟ್ಟಿನಲ್ಲಿ ಆರೋಗ್ಯಕರ ಬೆಳವಣಿಗೆ. ನಮಗೆ ಚಪಾತಿಯೇ ಬೇಕೆಂದರೆ, ಪುರಾತನ ವಿಧಾನವನ್ನು ಬಳಸಿ ತಯಾರಿಸಬೇಕು.

ಯಾವುದು ಆ ವಿಧಾನ? ಮತ್ತು ಅದರ ಲಾಭವೇನು.?

ಪೂರ್ಣ ಗೋಧಿಯಿಂದ ತಯಾರಿಸಿದ ಹಿಟ್ಟನ್ನು ನೆನೆಸಿ ಮುಚ್ಚಿಟ್ಟುಬಿಟ್ಟು ಹುಳಿ ಬರಿಸುತ್ತಿದ್ದರು. ಅದು ಪ್ರತಿ ಮನೆಯಲ್ಲೂ ಯಾವಾಗಲೂ ಒಂದು ಮುಚ್ಚಿದ ಡಬ್ಬದಲ್ಲಿ ಇರುತ್ತಿತ್ತು ಮತ್ತು ಅದರಿಂದ ಸ್ವಲ್ಪ ತೆಗೆದು ಹೊಸ ಗೋಧಿ ಹಿಟ್ಟಿನೊಂದಿಗೆ ಕಲಸಿ ಮತ್ತೆ ಒಂದೆರೆಡು ತಾಸು ಬಿಡುತ್ತಿದ್ದರು, ಆಗ ನೈಸರ್ಗಿಕವಾಗಿ fermentation ಆಗುತ್ತಿತ್ತು. ಅದನ್ನು ಬಳಸಿ ಚಪಾತಿ, ಫುಲ್ಕಾ, ಪರೋಟ ಮುಂತಾದ ಖಾದ್ಯಗಳನ್ನು ತಯರಿಸಿ ಬಳಸುವುದು ರೂಢಿಯಲ್ಲಿತ್ತು.

ಮತ್ತೆ ಇದು ತಂಪು ಪ್ರಾಂತ್ಯಕ್ಕೆ ಹೆಚ್ಚು ಒಗ್ಗುತ್ತಿತ್ತು, ಅಂದರೆ ಎಲ್ಲಿ ಮೈನಸ್ ತಾಪಮಾನ( Minus temperature) ಇರುತ್ತದೋ ಅಲ್ಲಿಗೆ ಗೋಧಿ fermented ರೂಪದಲ್ಲಿ ಒಗ್ಗುತ್ತದೆ.

ಉಳಿದ ಅರೆಬಿಸಿಲು, ಬಿಸಿಲು ಪ್ರಾಂತ್ಯಗಳಿಗೆ ಹೆಚ್ಚು ನೀರಿನಲ್ಲಿ ಮೆದುವಾಗಿ ಬೇಯಿಸಿದ ಗೋಧಿ ಖಾದ್ಯಗಳು ಯಾವಾಗಲೋ ಒಮ್ಮೆ ಬಳಸುವುದು ಸೂಕ್ತ.

ವೈಜ್ಞಾನಿಕ ಹಿನ್ನೆಲೆ ಏನು?

ನಮ್ಮ ಕರುಳಿನಲ್ಲಿ ಗೋಧಿ ಜೀರ್ಣವಾಗಲು ಪ್ರಮುಖ ಎರೆಡು ಅವಸ್ಥೆಗಳಿವೆ.

1) ಹೆಚ್ಚು ನೀರನ್ನು ಬಳಸಿ ಗ್ಲುಟಿನ್ ಅನ್ನು ಬೇರ್ಪಡಿಸಿ ಹೊರಹಾಕಿ ಜೀವಕೋಶಗಳ ಹಾನಿ ತಪ್ಪಿಸುತ್ತದೆ.
ಉದಾಹರಣೆ: ಚಪಾತಿ ಮತ್ತು ಸ್ವಲ್ಪನೀರಿರುವ ಉಪ್ಮಾ ತಿಂದಾಗ ಬಾಯಾರಿಸುತ್ತದೆ.

2) ಕಿಣ್ವೀಕರಣ(fermentation) ಗೊಳ್ಳುವಿಕೆ. ಇದರಿಂದ ಗ್ಲುಟಿನ್ ನಿಷ್ಕ್ರಿಯವಾಗುತ್ತದೆ. ಒಂದುವೇಳೆ ಗೋಧಿಯ ಚಪಾತಿಯನ್ನು ತಿಂದರೆ ಶರೀರ ಸ್ವತಃ fermentation ಮಾಡಿಕೊಂಡು ಜೀರ್ಣಿಸುತ್ತದೆ. ಉದಾಹರಣೆ: ಚಪಾತಿ ತಿಂದ ನಂತರ ಹೊಟ್ಟೆ ಉಬ್ಬರವಾಗುತ್ತದೆ.

ನಿರಂತರ ಸೇವನೆ ಎಷ್ಟು ತೊಂದರೆ ಎಂದರೆ, ಆಯುರ್ವೇದದ ಪ್ರಕಾರ ಇದನ್ನು ಶುಕ್ತಪಾಕ ಅಥವಾ ಹಳಸುವಿಕೆ ಎನ್ನುತ್ತಾರೆ. ಇದು ರಕ್ತದ ಸಕ್ಕರೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ತನ್ಮೂಲಕ fermentationನಲ್ಲಿ ಬಿಡುಗಡೆಗೊಳ್ಳುವ ಶಕ್ತಿರೂಪದ ಉಷ್ಣತೆ(exothermic nature)ಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ ಮತ್ತು ತಂಪಾಗಿಸುತ್ತದೆ.

ನಿರಂತರ ಅಲ್ಪ ಜಲಯುಕ್ತ ಗೋಧಿ ಸೇವನೆಯು ನಮ್ಮ ರಕ್ತದ ಸಕ್ಕರೆ ಅಂಶವನ್ನು ವರ್ಧಿಸುತ್ತದೆ

ಇನ್ನೂ ಹೆಚ್ಚಿನ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬಹುದು.

ಪ್ರೀತಿಯ ಬಂಧುಗಳೇ,

ಆಯುರ್ವೇದ ಸಲಹೆ:
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!