ಶಿವಮೊಗ್ಗ: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್..!

ಶಿವಮೊಗ್ಗ: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್..!

ಶಿವಮೊಗ್ಗ: ನಗರದ ಜಯನಗರ ಪೋಲಿಸ್ ಠಾಣೆ ಇಂದು ತಾತ್ಕಲಿಕ ಸೀಲ್ ಡೌನ್ ಮಾಡಲಾಗಿದೆ ಕರೋನಾ ಸೋಂಕಿಗೆ ತುತ್ತಾಗಿರುವ ಆರ್ ಎಎಸ್ ಐ ಪುತ್ರಿ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಯನಗರ ಪೊಲೀಸ್ ಠಾಣೆ ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಪೊಲೀಸಗ ಠಾಣೆಗೆ ಬ್ಯಾರಿಕೇಡ್ ಅಳವಡಿಸಿ ಸೀಲ್ ಡೌನ್‌ ಮಾಡಲಾಗಿದ್ದು ಇಡೀ ಪೊಲೀಸ್ ಠಾಣೆಗೆ ಅಗ್ನಿ ಶಾಮದ ದಳದ ವಾಹನ ಬಳಸಿ ಸ್ಯಾನಿಟೈಸನಿಂಗ್ ಮಾಡಲಾಗುತ್ತಿದೆ

ನಿನ್ನೆ ಕೆಎಸ್ ಆಪಿ ಆರ್ ಎಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರಿಗೆ ಕರೋನಾ ಸೋಂಕು ಕಾಣಿಸಿಕೊಂಡಿತ್ತು ಆರ್ ಎಎಸ್ ಐ ಹೋಂ ಕ್ವಾರಂಟೈನ್ ನಲ್ಲಿದ್ದರು. ಬಳಿಕ ಇವರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು‌.

ಇವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅವರ ಮಗಳು ಜಯನಗರ ಪೊಲೀಸ್ ಠಾಣೆಯಲ್ಲಿ ಯಲ್ಲಿ‌ ಕಾರ್ಯನಿರ್ವಹಿಸುತ್ತಿದ್ದರು‌‌ ಈ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆ ಸೀಲ್‌ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Admin

Leave a Reply

Your email address will not be published. Required fields are marked *

error: Content is protected !!