ಶಿಕಾರಿಪುರ ವಿನೂತನ ಯೂಟ್ಯೂಬ್ ಲೈವ್ ಮದುವೆ ಮಾದರಿಯಾದ ಪುರಸಭೆ ಸದಸ್ಯ ಉಳ್ಳಿ ದರ್ಶನ್…!

ಶಿಕಾರಿಪುರ ವಿನೂತನ ಯೂಟ್ಯೂಬ್ ಲೈವ್ ಮದುವೆ ಮಾದರಿಯಾದ ಪುರಸಭೆ ಸದಸ್ಯ ಉಳ್ಳಿ ದರ್ಶನ್…!

ಶಿವಮೊಗ್ಗ :ಮದುವೆ‌ ಎಂದರೇ ಸಾಕು ಸಂಭ್ರಮವೋ‌ ಸಂಭ್ರಮ ಅದರಲ್ಲೂ ರಾಜಕಾರಣಿಗಳ‌ ಮದುವೆ ಎಂದರೇ ಅತ್ಯಂತ ವಿಜೃಂಭಣೆಯಿಂದ ಕೂಡಿರುತ್ತದೆ ಅದರೆ ಈ ಕರೋನ ಸಮಯದಲ್ಲಿ ಸರಳ‌ ಮದುವೆಯಾಗುವ ಮೂಲಕ ಶಿಕಾರಿಪುರ ಪುರಸಭೆ ಸದಸ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಯೂರ್ ಉಳ್ಳಿ‌ ದರ್ಶನ್ ಇತರರಿಗೂ ಮಾದರಿಯಾಗಿದ್ದಾರೆ.

ಶಿಕಾರಿಪುರದ ತಾಲೂಕು ಯುವ ಕಾಂಗ್ರೆಸ್ ನ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ಹಾಗೂ ಪ್ರತಿಮಾರವರ ಜೊತೆ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಶಿಕಾರಿಪುರದ ತಮ್ಮ ಸ್ವಗೃಹ ಶಿವರಾಗ ಮದುವೆಯಾಗಿದ್ದು ಮದುವೆ ಕೋವಿಡ್-19 ಹಿನ್ನಲೆಯಲ್ಲಿ ಸರಳ ಹಾಗೂ ಸಾಮಾಜಿಕ ಅಂತರ ಕಂಡುಕೊಳ್ಳುವ ಮೂಲಕ ಮದುವೆ ನಡೆದಿರುವುದು ಬಹಳ ವಿಶೇಷವಾಗಿತ್ತು.

ಯೂಟ್ಯೂಬ್ ಲೈವ್ ಮದುವೆ..!

ಕರೋನ‌ ಹಿನ್ನಲೆಯಲ್ಲಿ ಸರ್ಕಾರ ಆದೇಶದಂತೆ ಸರಳ ವಿವಾಹ ನಡೆದಿದ್ದು ಇನ್ನೂ ಲಾಕ್ ಡೌನ್ ಇರುವುದರಿಂದ ಮದುವೆ ಆಗಮಿಸಲಾದೆ ಇರುವ ಸ್ನೇಹಿತರು ಸಂಬಂಧಿಕರು ಮದುವೆಯನ್ನು ಕಣ್ತುಂಬಿಕೊಳ್ಳಲು ದರ್ಶನ್ ವಿಷೇಶ ವ್ಯವಸ್ಥೆ ಕಲ್ಪಿಸಿದ್ದು ಮದುವಯ ಸಂಪೂರ್ಣ ಯೂಟ್ಯೂಬ್ ಲೂವ್ ಮಾಡಿದ್ದು ಆಗಮಿಸಲಾಗಿದೆ ಇರುವವರು ವಿಡಿಯೋ ಮೂಲಕ ಮದುವೆ ಚಿತ್ರಣ ಕಣ್ತುಂಬಿಕೊಂಡಿದ್ದಾರೆ.

ಅದಕ್ಕಾಗಿ ಆಮಂತ್ರಣ ನೀಡುವಾಗಲೆ ದರ್ಶನ್ ಯೂಟ್ಯೂಬ್ ಲೈವ್ ಲಿಂಕ್ ಅನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದರು.

ಮದುವೆಯನ್ನು ಇಂದಿನ ಡಿಜಿಟಲ್ ಯುಗದಲ್ಲಿ ಈ ರೀತಿಯೂ ಮಾಡಬಹುದು ಎಂಬುದಕ್ಕೆ ಉಳ್ಳಿ ದರ್ಶನ್ ಅವರ ಮದುವೆ ಸಾಕ್ಷಿಯಾಗಿದ್ದು ಸಾರ್ವಜನಿಕರ ಮೆಚ್ಚಿಗೆಗೆ ಕಾರಣವಾಗಿದೆ.

ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನಕುಮಾರ್ ಅವರು ನವ ದಂಪತಿಗಳಿಗೆ ಆರ್ಶಿವದಿಸಿ ಮನೆಯ ಆವರಣದಲ್ಲಿ ವಧುವರರ ಕೈಯಲ್ಲಿ ಸಸಿ ನೆಡಿಸುವ ಮೂಲಕ‌ ಪರಿಸರ ಕಾಳಜಿ ತೊರಿದ್ದಾರೆ.

News by: Raghu Shikari.

Admin

Leave a Reply

Your email address will not be published. Required fields are marked *

error: Content is protected !!