ಶಿಕಾರಿಪುರ: ವ್ಯಾಪಾರ ವಹಿವಾಟು ಸಮಯ ಬದಲು ಎಷ್ಟರಿಂದ ಎಷ್ಟೋತ್ತು ಗೊತ್ತ…!
![ಶಿಕಾರಿಪುರ: ವ್ಯಾಪಾರ ವಹಿವಾಟು ಸಮಯ ಬದಲು ಎಷ್ಟರಿಂದ ಎಷ್ಟೋತ್ತು ಗೊತ್ತ…!](https://shikarinews.com/wp-content/uploads/2020/03/22skp3-scaled.jpg)
ಶಿಕಾರಿಪುರ ಲಾಕ್ ಡೌನ್ ನಿಂದ ಜನರ ಜೀವನ ಮಮೂಲಿಗೆ ಬರುತ್ತಿದ್ದು ಅದರ ಜೊತೆಗೆ ಕರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ.
ರಾಜ್ಯಾದ್ಯಂತ ಸರ್ಕಾರ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಿದ್ದು ಸಮಯದಲ್ಲೂ 7-7 ಕಾಲಾವಧಿ ನಿಗಧಿ ಪಡಿಸಿದೆ.
![](https://shikarinews.com/wp-content/uploads/2020/03/WhatsApp-Image-2020-03-24-at-18.28.42-1024x768.jpeg)
ಶಿಕಾರಿಪುರ ಪಟ್ಟಣ ತಾಲೂಕಿನಲ್ಲಿ ಬೀದಿ ಬದಿಯ ವ್ಯಾಪಾರ ಹೊರತು ಪಡಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳಿಗೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೂ ಕಾಲಾವಕಾಶ ನಿಗಧಿ ಪಡಿಸಲಾಗಿದೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ ಯಾರು ಅನವಶ್ಯಕ ಸುತ್ತಾಡುವಂತಿಲ್ಲ..
ಎಲ್ಲಾ ವ್ಯಾಪಾರಿಗಳು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಗುಂಪು ಗುಂಪು ಸೇರದಂತೆ ಸಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಬೇಕು ಎಂದು ತಾಲೂಕ್ ಆಡಳಿತ ಪುರಸಭೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.