ಬ್ಯಾಂಕ್’ಗಳ ಕಂತು ಮರುಪಾವತಿ ಅವಧಿ ವಿಸ್ತರಣೆ..!

ಬ್ಯಾಂಕ್’ಗಳ ಕಂತು ಮರುಪಾವತಿ ಅವಧಿ ವಿಸ್ತರಣೆ..!

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ, ಸಹಕಾರ ಬ್ಯಾಂಕ್‍ಗಳ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಹಾಗೂ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ (ಪಿ.ಎಲ್.ಡಿ.ಬಿ) ರೈತ ಸದಸ್ಯರ ರೂ. 3.00 ಲಕ್ಷಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ವಿತರಿಸಿರುವ ಯೋಜನೆ ಶೇ.3ರ ಬಡ್ಡಿದರದಲ್ಲಿ ರೂ. 10 ಲಕ್ಷಗಳವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಸಂಬಂಧಿತ ಸಾಲಗಳನ್ನು ವಿತರಿಸಿರುವ ಯೋಜನೆಗಳು.

ಸ್ವಸಹಾಯ ಗುಂಪಿನ ಕಾಯಕ ಯೋಜನೆಯ ಸದಸ್ಯರುಗಳು 2020ರ ಮಾರ್ಚ್ 31ರವರೆಗೆ ಪಾವತಿಸಬೇಕಾದ ಕಂತುಗಳ ಮರುಪಾವತಿ ಅವಧಿಯನ್ನು 2020ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ರೈತ ಸದಸ್ಯರುಗಳು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕರು  ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ವೈರಸ್ ಸೋಂಕಿನ ಪರಿಣಾಮದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆ ಹಾಗೂ ಕರ್ನಾಟಕ ಪಾನ್ ಬ್ರೋಕರ್ಸ್ ಅಧಿನಿಯಮ 1961 ಹಾಗೂ 1982ರ ಚೀಟಿ ನಿಧಿ ಕಾಯ್ದೆಯಡಿಯಲ್ಲಿ ನೀಡಿರುವ ಸಾಲ/ ಕಂತುಗಳ ವಸೂಲಿಯ ಬಗ್ಗೆ ಕಿರುಕುಳ/ತೊಂದರೆ ನೀಡಬಾರದೆಂದು ಹಾಗೂ ಹೆಚ್ಚಿನ ಬಡ್ಡಿದರವನ್ನು ವಸೂಲು ಮಾಡಬಾರದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!