ಲಾಕ್ಡೌನ್ ಸಮಯದಲ್ಲಿ ಸಮುದಾಯದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು : ಸಂಸದ ಬಿ.ವೈ.ರಾಘವೇಂದ್ರ..!

ಲಾಕ್ಡೌನ್ ಸಮಯದಲ್ಲಿ ಸಮುದಾಯದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು : ಸಂಸದ ಬಿ.ವೈ.ರಾಘವೇಂದ್ರ..!

ಶಿಕಾರಿಪುರ: ಪಟ್ಟಣದಲ್ಲಿ ಶನಿವಾರ ಬಡವರಿಗೆ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಕೊರೊನಾ ವೈರಸ್ ಅಮೇರಿಕಾ, ಯುರೋಪ್ ಸೇರಿ ವಿಶ್ವದ ಬೇರೆ ದೇಶದಲ್ಲಿ ಬೀರಿರುವ ದುಷ್ಪರಿಣಾಮಕ್ಕೆ ಹೋಲಿಸಿದಲ್ಲಿ ನಾವು ಸ್ವಲ್ಪ ಸುರಕ್ಷಿತವಾಗಿದ್ದೇವೆ.

ಎಲ್ಲರೂ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೆ ಇದ್ದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ. ಅನಾವಶ್ಯಕವಾಗಿ ಊರು ಸುತ್ತುವ ಕೆಲವರಿಗೆ ಮನೆಯವರೆ ಬುದ್ದಿ ಹೇಳಬೇಕು ಎಂದರು.

ಲಾಕ್‌ಡೌನ್‌ನಿಂದಾಗಿ ಹೋಟೆಲ್ ಬಂದ್ ಆಗಿದ್ದು ಹಾಲು ಸಾಕಷ್ಟು ಪ್ರಮಾಣದಲ್ಲಿ ಉಳಿಯುತ್ತಿದೆ, ಹಾಲು ಖರೀದಿ ನಿಲ್ಲಿಸಿದರೆ ರೈತರಿಗೆ ತೊಂದರೆ ಆಗುತ್ತದೆ ಅದಕ್ಕಾಗಿ ಸರಕಾರ ಲಾಕ್‌ಡೌನ್ ಸಮಯದಲ್ಲಿ ಮಾತ್ರ ಬಡವರಿಗೆ ಉಚಿತ ಹಾಲು ವಿತರಿಸುತ್ತಿದೆ.

ರೈತರ ಉತ್ಪನ್ನ ಮಾರುಕಟ್ಟೆಗೆ ಕೊಂಡ್ಯೊಯಲು ಅವಕಾಶ ಕಲ್ಪಿಸಿದೆ, ಕೃಷಿಸಾಲ ಮೂರು ತಿಂಗಳ ನಂತರ ಕಟ್ಟುವುದಕ್ಕೆ ಅವಕಾಶ ಕಲ್ಪಿಸಿ ಬಡ್ಡಿ ಸರಕಾರವೆ ಪಾವತಿಸುತ್ತಿದೆ ಹೀಗೆ ಹಲವು ಯೋಜನೆ ನೀಡಿರುವ ಮುಖ್ಯಮಂತ್ರಿ ಬಿಎಸ್‌ವೈ ನಿತ್ಯ ಅಧಿಕಾರಿಗಳ ಸಭೆ ನಡೆಸಿ ಲಾಕ್‌ಡೌನ್ ಜಾರಿ ಕುರಿತು ಪರಿಶೀಲನೆ ನಡೆಸುವು ಮೂಲಕ ಅವಿರತ ಶ್ರಮಿಸುತ್ತಿದ್ದಾರೆ ಎಲ್ಲರೂ ಈ ಕರ‍್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಕೆಎಂಎಫ್ ನಿರ್ದೇಶಕರಾದ ಶಿವಶಂಕರಪ್ಪ ಜಂಬೂರು, ಸಿದ್ಧಲಿಂಗಪ್ಪ ನಿಂಬೆಗೊಂದಿ, ವ್ಯವಸ್ಥಾಪಕ ಲೋಹಿತೇಶ್ವರ, ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ, ತಹಸೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ರಾಜ್‌ಕುಮಾರ್, ಟಿ.ಎಸ್.ಮೋಹನ್, ಎಂ.ಬಿ.ಚನ್ನವೀರಪ್ಪ ಮತ್ತಿತರರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!