ಶಿವಮೊಗ್ಗ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕ್ರಿಕೇಟ್ ಆಡಿದ ಇಬ್ಬರು ಯುವಕ ಮೇಲೆ ಕೇಸ್ ದಾಖಲು..!

ಶಿವಮೊಗ್ಗ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕ್ರಿಕೇಟ್ ಆಡಿದ ಇಬ್ಬರು ಯುವಕ ಮೇಲೆ ಕೇಸ್ ದಾಖಲು..!

ಶಿವಮೊಗ್ಗ: ಹೋಂ ಕ್ವಾರಂಟೈನ್ ಆದೇಶ ಉಲ್ಲಂಘಿಸಿ ಹೊರಗಡೆ ಸುತ್ತಾಡಿ ಕ್ರಿಕೆಟ್ ಆಡಿದ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶದಿಂದ ಬಂದು ಹೋಂ ಕ್ವಾರಂಟೈನ್ ನಲ್ಲಿರದೆ ಹೊರಗಡೆ ಓಡಾಡಿದ ಇಬ್ಬರ ಅಬುದಾಬಿಯಿಂದ ಸ್ವ-ಗ್ರಾಮ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ಹಿಂದಿರುಗಿದ್ದ ಇಬ್ಬರು ಯುವಕರು ಮಹಮ್ಮದ್‌ ಸುಯಬ್‌ ಖಾನ್ ಬಿನ್ ಮಸ್ತಾನ್ ಖಾನ್ 30 ವರ್ಷ  ಹಾಗೂ  ಮಹಮ್ಮದ್‌ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್ 28 ವರ್ಷ ಇವರ ಮೇಲೆ ಪ್ರಕರಣ ದಾಖಲಾಗಿದೆ.

ಇವರು ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದು ಸುತ್ತಾಡಿ ಮತ್ತು ಕ್ರಿಕೇಟ್‌ ಆಡಿದ್ದರು.ತಾಲೂಕು ಆರೋಗ್ಯಾಧಿಕಾರಿ ಜಗದೀಶ್‌ ಹಾಗೂ ತೀರ್ಥಹಳ್ಳಿ ಸಿಪಿಐ ಗಣೇಶಪ್ಪ ಅವರು ಹೋಂ ಕ್ವಾರಂಟೈನ್ ನಲ್ಲಿರುವವರನ್ನು ಚೆಕ್ ಮಾಡುವಾಗಬೀ ಇಬ್ಬರು ಮನೆಯಿಂದ ಹೊರಬಂದು ಸುತ್ತಾಡಿದ್ದಲ್ಲದೆ ಕ್ರಿಕೆಟ್ ಆಡಿರುವುದು ತಿಳಿದುಬಂದಿತ್ತು.

ಕರೋನಾ ಪೀಡಿತ ದೇಶಗಳಿಂದ ಬಂದು ಹೊರಗಡೆ ಓಡಾಡಿದ ಇಬ್ಬರ ಪಾಲಕರಾದ ಮಸ್ತಾನ್‌ ಖಾನ್‌ ಅಲಿಯಾಸ್ ಬಾಬಾ ಜಾನ್‌ 65 ವರ್ಷ  ಹಾಗೂ ಖತೀಜಾ ಬೀ 56  ವರ್ಷ ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇವರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 38/2020 ಕಲಂ 188, 269, 270, 271 ಐಪಿಸಿ ರೀತ್ಯಾ ಪ್ರಕರಣ  ದಾಖಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!