ಶಿಕಾರಿಪುರ ಕೋಳಿ ಫಾರಂನಲ್ಲಿ 200ಕ್ಕೂ ಹೆಚ್ಚು ಕೋಳಿಗಳು ಸಾವು..!

ಶಿಕಾರಿಪುರ ಕೋಳಿ ಫಾರಂನಲ್ಲಿ 200ಕ್ಕೂ ಹೆಚ್ಚು ಕೋಳಿಗಳು ಸಾವು..!

ಕರೋನ ವೈರಸ್‌ ಈಗಾಗಲೇ ಜನರನ್ನು ಬೆಚ್ಚಿಬಿಳಿಸಿದ್ದು ತಾಲೂಕಿನ ಅಂಬಾರಗೊಪ್ಪ ಗ್ರಾಮದ ಬಳಿ‌ ಇರುವ ಕೋಳಿ ಫಾರಂ ಹೊಂದರಲ್ಲಿ 200ಕ್ಕೂ ಹೆಚ್ಚು ಕೋಳಿಗಳು ಸಾವನ್ನಪಿದ್ದು ಗ್ರಾಮಸ್ಥರಿಗೆ ಆತಂಕ‌ ವ್ಯಕ್ತವಾಗಿದೆ.

ಈ ಕುರಿತು ಪಶು ವೈಧ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿ 200 ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು ಕೋಳಿಗಳನ್ನು ಪರೀಕ್ಷೆ ನಡೆಸಿದ್ದು ಯಾವುದೇ ರೋಗಗಳ ಮಾದರಿ‌ ಕಂಡುಬಂದಿಲ್ಲ.

ಎರಡು ದಿನಗಳಿಂದ ಕೋಳಿಗಳಿಗೆ ಯಾವುದೇ ಆಹಾರ ನೀಡಿಲ್ಲ ಎಂದು ಕೋಳಿ‌‌ ಫಾರಂ ಮಾಲೀಕರು ಹೇಳಿದ್ದು ಅದರಿಂದ‌ ಸಮಸ್ಯೆ ಉಂಟಾಗಿ‌ ಸಾವನ್ನಪ್ಪಿರಬಹುದು ಕೋಳಿಯನ್ನು ಮಾದರಿ‌ ಪರೀಕ್ಷೆಗೆ ಕಳುಹಿಸಿದ್ದು ಯಾವುದೇ ಆತಂಕ‌ ಪಡುವ ಅಗತ್ಯವಿಲ್ಲ ಎಂದು‌‌ ತಿಳಿಸಿದ್ದಾರೆ.

ಮಲೆನಾಡಿನ ಅನೇಕ‌ ಭಾಗಗಳಲ್ಲಿ ಮಂಗನಕಾಯಿಲೆ, ಅಕ್ಕಿ ಜ್ವರ ಕಂಡು ಬರುತ್ತಿದ್ದು ಅದರ ನಡುವೆ ಕರೋನ ಮಹಾ ಮಾರಿ‌ ಕೂಡ ಜನರ ಆತಂಕಕ್ಕೆ ಕಾರಣವಾಗಿದೆ.

ಶಿಕಾರಿಪುರ ತಾಲೂಕಿನ ತಹಶಿಲ್ದಾರ ಸೇರಿದಂತೆ ಎಲ್ಲಾ ಇಲಾಖೆ ಸಿಬ್ಬಂದಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದು ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ ಇರುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.

Admin

Leave a Reply

Your email address will not be published. Required fields are marked *

error: Content is protected !!