ಕರೋನಾ ಎಫೇಕ್ಟ್ ಜಿಲ್ಲೆಯಾದ್ಯಂತ 144(1) ಕಲಂ ಜಾರಿ..!

ಕರೋನಾ ಎಫೇಕ್ಟ್ ಜಿಲ್ಲೆಯಾದ್ಯಂತ 144(1) ಕಲಂ ಜಾರಿ..!

ಶಿವಮೊಗ್ಗ,: ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ನೋವೆಲ್ ಕೊರೋನಾ ವೈರಸ್ ಹರಡಿದ್ದು, ಭಾರತ ದೇಶದ ರಾಜ್ಯಗಳಲ್ಲೂ ಸೋಂಕು ಕಂಡು ಬಂದಿದ್ದು, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವೈರಸ್ ಸೊಂಕು ದೃಢಪಟ್ಟಿದ್ದು, ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮ ವಹಿಸಬೇಕಾಗಿದ್ದು,

ಹೆಚ್ಚು ಜನ ಸೇರಬಹುದಾದಂತ ಜಾಗಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನಜಂಗುಳಿ ಸೇರಬಹುದಾದ ಜಾತ್ರೆಗಳನ್ನು ಮಾರ್ಚ್ 25ರ ಸಂಜೆ 6.00 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅದೇಶಿಸಿರುತ್ತಾರೆ. ಹಾಗೂ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಅವರ ಹಂತದಲ್ಲಿಯೇ ಸರಳವಾಗಿ ಅಚರಿಸಬಹುದೆಂದು ತಿಳಿಸಿರುತ್ತಾರೆ.

ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಭೀತಿ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಕಲಂ 144(1) ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಇಂದಿನಿಂದ ಮಾರ್ಚ್ 25ರ ವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಜಾರಿಯಲ್ಲಿ ಇರುತ್ತದೆ ಸಾರ್ವಜನಿಕ ಸ್ಥಳಗಳಲ್ಲಿ 5 ಕ್ಕಿಂತ ಹೆಚ್ಚು ಜನರು ನಿಲ್ಲದಂತೆ ಸೂಚನೆ ನೀಡಲಾಗಿದೆ.

ಆದೇಶ ಉಲ್ಲಂಘಿಸಿದರೇ ಕಾನೂನು ಕ್ರಮದ ಎಚ್ಚರಿಕೆ ನೀಡಿಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!