ಶಿವಮೊಗ್ಗ :ಕುಮಾರಸ್ವಾಮಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ :ರೇಣುಕಚಾರ್ಯ..!

ಶಿವಮೊಗ್ಗ :ಕುಮಾರಸ್ವಾಮಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ :ರೇಣುಕಚಾರ್ಯ..!

ಶಿವಮೊಗ್ಗ : ಅಧಿಕಾರ ಕಳೆದುಕೊಂಡ ಮೇಲೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ  ಸರ್ಕಾರ ಉಳಿಯೋದಿಲ್ಲ ಬಿಜೆಪಿ ಸರ್ಕಾರ ಹೆಚ್ಚುದಿನ ಇರಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡದರು.

ಜಿಲ್ಲೆಯ ಶಿಕಾರಿಪುರ ಪಟ್ಟಣ ಸಿಎಂ ಬಿ.ಎಸ್ ವೈಸ್ವಗೃಹದಲ್ಲಿ ಮಾತನಾಡಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇ಼ಣುಕಾಚಾರ್ಯ  ಅಧಿಕಾರ ಹೋಗಿದಕ್ಕೆ ಹೆಚ್ ಡಿ ಕುಮಾರಸ್ವಾಮಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತೀರ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಮೇಲೆ ಅವರ ಮನಸ್ಥಿತಿ ಸರಿಯಿಲ್ಲ ಹುಚ್ಚು ಹುಚ್ಚಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ಹೇಳಲು ಇಷ್ಟಪಡುತ್ತೇನೆ ನೀವು ಹಗಲು ಕನಸು ಕಾಣಬೇಡಿ. ಸರ್ಕಾರ ಪತನ ಅಗಲ್ಲ ಯಡಿಯೂರಪ್ಪ ಕಲ್ಲುಬಂಡೆಯ ರೀತಿ. ಮುಂದಿನ ಮೂರವರೆ ವರ್ಷ ಇದೇ ಸರ್ಕಾರವಿರುತ್ತೇ ಮಾತ್ರವಲ್ಲದೇ, 2023ಕ್ಕೆ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುತ್ತೇ. ಇದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದರು.

ಕುಮಾರಸ್ವಾಮಿ ಅವರು ಬಿಎಸ್ವೈ ಆಶೀರ್ವಾದದಿಂದ ಹಿಂದೆ ಮುಖ್ಯಮಂತ್ರಿಯಾಗಿದ್ದರು ಮತ್ತೇ 37 ಸೀಟ್ ತಗೋಂಡು ಈ ಬಾರಿ ಮುಖ್ಯಮಂತ್ರಿಯಾಗಿದ್ರೀ ಕನಸಲ್ಲಿ ರಾಜಬಂದ ಹಾಗೇ ಸಿಎಂ ಅಗಿದ್ರೀ.. ಈಗ ನೀವು ಅಡ್ರೇಸ್ ನಲ್ಲಿ ಇದ್ದೀರಾ…?

ಯಡಿಯೂರಪ್ಪ, ಬಿಜೆಪಿಗೆ ಬೈಯ್ಯುವುದೇ ಅವರ ಮನಸ್ಥಿತಿ ಯಾಗಿದೆ  ಮಾಜಿ ಸಿಎಂ ಇಬ್ಬರಿಗೂ ಮಾತಿನ ಛಾಟಿ ಬಿಸಿದರು.

ನಾನು ಯಾವುದೇ ಹೇಳಿಕೆ ನೀಡಿದರು ಮಾಧ್ಯಮದವರು ವಿವಾದ ಸೃಷ್ಠಿ ಮಾಡುತ್ತೀರಾ ನಾನು ರಾಜ್ಯಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರಣ ನಾನು ಸಚಿವ ಸ್ಥಾನ ಆಕಾಂಕ್ಷೆ ಅಂತ ನಿಮ್ಮ ಮುಂದೆ ಹೇಳಿದರೆ ಪ್ರಯೋಜನ ಇಲ್ಲ ಬಿ.ಎಸ್ ವೈ ನಮ್ಮ ತಂದೆ ಇದ್ದಂತೆ ನಾವು ಅವರ ಮಕ್ಕಳಂತೆ ಎಂದರು.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬುದು ಜಿಲ್ಲೆಯ ಜನರ ಆಕಾಂಕ್ಷೆ ಇದೆ ಇದಕ್ಕೆ ನಾನು ಯಾವುದೇ ಒತ್ತಡ ಬೇಡಿಕೆ ನೀಡುವುದಿಲ್ಲ 15 ಜನ ಶಾಸಕರು ನಮ್ಮ ಪಕ್ಷ ಅಧಿಕಾರಕ್ಕೆ ಕಾರಣರಾಗಿದ್ಧಾರೆ ಅದರಲ್ಲಿ 10 ಜನಕ್ಕೆ ಈಗಾಗಲೇ ಸಚಿವ ಸ್ಥಾನ ನೀಡಲಾಗಿದೆ ಸಿಎಂ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವೇಲ್ಲ ಬದ್ದರಿದ್ದೇವೆ ಎಂದುರು.

News by: Raghu Shiari-7411515737

Admin

Leave a Reply

Your email address will not be published. Required fields are marked *

error: Content is protected !!