ಶಿಕಾರಿಪುರ : ಶಿಕಾರಿಪುರ ಜಿಲ್ಲೆ ಘೋಷಣೆ ಕುರಿತು ಯಾವುದೇ ಚಿಂತನೆ ಇಲ್ಲ ಸಿಎಂ..!

ಶಿಕಾರಿಪುರ ಪಟ್ಟಣ ತಮ್ಮ ಸ್ವಗೃಹದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಶಿಕಾರಿಪುರ ಜಿಲ್ಲೆ ಮಾಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ ರಾಜ್ಯದಲ್ಲಿ ಬರಗಾಲ ಹಾಗೂ ಸದಸ್ಯ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರ ಮಾಡಿಲ್ಲ ಎಂದರು
ಸಚಿವ ಸಂಪುಟ ವಿಸ್ತರಣೆ ಅಗಿದ್ದು, ನಾಳೆ ಬೆಳಿಗ್ಗೆ ಖಾತೆ ಹಂಚಿಕೆ ಮಾಡುತ್ತೇನೆ ನಿನ್ನೆ ಶನಿವಾರ, ಇಂದು ಭಾನುವಾರ ಆದ್ದರಿಂದ ಖಾತೆ ಹಂಚಿಕೆ ಮಾಡಿಲ್ಲ ಎಂದರು.
ಉಮೇಶ್ ಕತ್ತಿ ಅವರಿಗೆ ಮೊದಲನೇ ಪಟ್ಟಿಯಲ್ಲೇ ಸಚಿವ ಸ್ಥಾನ ನೀಡಬೇಕಿತ್ತು ಆದರೆ ಅನಿವಾರ್ಯ ಕಾರಣದಿಂದ ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಸಂಪುಟ ವಿಸ್ತರಣೆ ಬಳಿಕ ಕತ್ತಿ ನಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು ನಾನು ಅವರೊಂದಿಗೆ ಮಾತನಾಡಿ ದ್ದೇನೆ. ಮುಂದಿನ ದಿನದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.

ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಸಚಿವ ಸ್ಥಾನದ ಅಪೇಕ್ಷಿತರಿದ್ದಾರೆ ಅನಿರ್ವಾಯ ಸ್ಥಿತಿ ಇದೆ ಎಂದು ಎಲ್ಲರಿಗೂ ಮನವರಿಕೆ ಮಾಡಿದ್ದೇನೆ ಮೂಲ ಬಿಜೆಪಿಗರಿಗೆ ಹಾಗೂ ವಲಸೆ ಬಿಜೆಪಿಗರ ನಡುವೆ ಸಚಿವ ಸ್ಥಾನದ ಬಗ್ಗೆ ಗೊಂದಲವಿಲ್ಲ. ಇದು ಮಾಧ್ಯಮ ಸೃಷ್ಟಿ ಎಂದರು.
ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂಬ ಹೊರಟ್ಟಿ ಹೇಳಿಕೆ ವಿಚಾರ ಮಾತನಾಡಿದ ಅವರು ಸಿದ್ದರಾಮಯ್ಯ, ಕುಮಾರಸ್ವಾಮಿ, ಹೊರಟ್ಟಿ ಅವರು ರಾಜಕೀಯ ಕಾರಣಕ್ಕಾಗಿ ಹೇಳಿಕೆ ಕೊಡುತ್ತಿರುತ್ತಾರೆ ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ರಾಜ್ಯ ಅಭಿವೃದ್ಧಿಗೆ ಕಡೆ ಏನಿದ್ದರು ರಾಜ್ಯದ ಅಭಿವೃದ್ಧಿಗೆ ಕಡೆ ಎಂದರು.

ಬಜೆಟ್ ಸಿದ್ದತೆ ನಡೆಯುತ್ತಿದ್ದು ರಾಜ್ಯದ ಸರ್ವೋತ್ತೋಮಖ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಲಾಗುವುದು ಎಂದರು ಮಂನಗ ಕಾಯಿಲೆ ಕುರಿತು ಲ್ಯಾಬ್ ಸ್ಥಾಪನೆ ಸಾಗರ ತಾಲೂಕಿನಲ್ಲಿ ಜಾಗವನ್ನು ನಿಗದಿ ಮಾಡಲಾಗಿದ್ದು ಅಲ್ಲಿಯೇ ಸ್ಥಾಪನೆಯಾಗುತ್ತದೆ ಶಿವಮೊಗ್ಗದ ಜಿಲ್ಲೆ ಸಾಕಷ್ಟು ಹಣವನ್ನು ಕೊಟ್ಟಾಗಿದ್ದು ವಿಮಾನ ನಿಲ್ದಾಣ ರೈಲ್ವೆ, ಎಲ್ಲಾ ರೀತಿಯ ಅನುಧಾನ ನೀಡಲಾಗಿದೆ ಇನ್ನೂ ಬಜೆಟ್ ನಲ್ಲಿ ಯಾವುದೇ ವಿಷೇಶವಾಗಿ ಜಿಲ್ಲೆಗೆ ಕೊಡುವಂತದಿಲ್ಲ ಎಂದರು
News by: Raghu Shikar-7411515737