ಶಿಕಾರಿಪುರ: ಮಾರವಳ್ಳಿಯಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ..!

ಶಿಕಾರಿಪುರ: ಮಾರವಳ್ಳಿಯಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ..!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿ ಆರ್‌ . ಶೇಜೇಶ್ವರ . ಸಹಾಯಕ ನಿರ್ದೇಶಕರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ , ಶಿವಪ್ಪ ನಾಯಕ ಅರಮನೆ ಶಿವಮೊಗ್ಗ , ಇವರು ಕ್ಷೇತ್ರಕಾರ್ಯ ಕೈಗೊಂಡಾಗ ಈ ಗ್ರಾಮದ ಬೆಟ್ಟದ ಮೇಲೆ ಶ್ರೀ ಹುಲಿಸಿದ್ದೇಶ್ವರ ದೇವರು ಎಂದು ಸ್ಥಳೀಯರು ಕರೆಯುವ ನರಸಿಂಹ ಶಿಲ್ಪವು ಪತ್ತೆಯಾಗಿದ್ದು , ಇದು ಸುಮಾರು ಎರಡು ಅಡಿ ಎತ್ತರ , ಒಂದು ಅಡಿ ಅಗಲ ಹಾಗೂ ನಾಲ್ಕು ಅಡಿ ಸುತ್ತಳತೆಯನ್ನು ಹೊಂದಿದೆ .

ನರಸಿಂಹ ಶಿಲ್ಪದ ವಿಶೇಷ :

ಈ ಶಿಲ್ಪವನ್ನು ನೋಡಿದರೆ ಭಯ ಸೃಷ್ಟಿಸುವಂತೆ ಕಂಡುಬರುತ್ತದೆ , ಇದು ಮುಂಗಾಲುಗಳನ್ನು ಹಾಗೂ ಹಿಂಗಾಲನ್ನು ಉರಿ ಶಕ್ತಿಯುತವಾಗಿ ಕುಳಿತಿರುವುದು ಕಂಡುಬರುತ್ತದೆ .

ಎರಡೆರಡು ಕೊರೆ ಹಲ್ಲುಗಳನ್ನು ಹಾಗೂ ಕೆಳ ದವಡೆಯಲ್ಲಿ ಹಲ್ಲುಗಳನ್ನು ಹೊಂದಿರುವುದು ಸಷ್ಟವಾಗಿ ಗೋಚರವಾಗುತ್ತದೆ .

ಮಿಸೆಯನ್ನು ಹೊಂದಿದ್ದು ಕಣ್ಣುಗಳು ಹಾಗೂ ಮೂಗುಗಳು ಉಬ್ಬಿದ್ದು ಆಕರ್ಷಣೆಯಿಂದ ಕೂಡಿದೆ . ಮುಂಭಾಗದ ಕಾಲುಗಳನ್ನು ಬಿಗಿಯಾಗಿ ಉರಿದ್ದು ಕಾಲು ಬೆರಳುಗಳನ್ನು ಹೊಂದಿದೆ .

ದೇವಾಲಯ :

ಈ ಶಿಲ್ಪಕ್ಕೆ ಇತ್ತೀಚೆಗೆ ಸುಮಾರು 200 ವರ್ಷಗಳ ಹಿಂದೆ ಸ್ಥಳೀಯವಾಗಿ ಸಿಗುವ ಕಲ್ಲುಗಳಿಂದ ಚಿಕ್ಕ ದೇವಾಲಯವನ್ನು ನಿರ್ಮಾಣಮಾಡಿ ಸುತ್ತಲೂ ಸ್ಥಳೀಯವಾದ ಕಾಡುಗಲ್ಲುಗಳಿಂದ ಪೌಳಿ ನಿರ್ಮಾಣ ಮಾಡಿರುವುದು ಕಂಡುಬರುತ್ತದೆ .

ಕಾಲ :

ಈ ನರಸಿಂಹ ಶಿಲ್ಪವನ್ನು ಕ್ರಿ.ಶ. 3 ಮತ್ತು 4 ನೇ ಶತಮಾನದ ಕದಂಬರ ಕಾಲದ ಶಿಲ್ಪವೆಂದು ಹೇಳಬಹುದು. ಅಂದರೇ ಮಳವಳ್ಳಿಯ ಶಿವಸ್ಕಂದವರ್ಮನ ಶಾಸನದಲ್ಲಿ ಶ್ರೀ ನರಸಿಂಹ ಶಿಲ್ಪ ದೊರೆತಿರುವ ಸ್ಥಳದಿಂದ ಎರಡು ಕಿ.ಮೀ ಅಂತರದಲ್ಲಿ ಇರುವ ಮತ್ತಿ ಕೋಟೆಯನ್ನು ಮರಿಯಾಸ ಎಂದು ಕರೆಯಲಾಗಿದೆ ಎಂದು ಡಾ.ಜಗದೀಶ ಹಾಗೂ ಸಾಮಕ್ ಅಭಿಪ್ರಾಯಪಟ್ಟಿದ್ದಾರೆ.

ಈಗ ಇದನ್ನು ಮತ್ತಿಕಟ್ಟೆ ಎಂದು ಕರೆಯಲಾಗಿದ್ದು , ಈ ಶಿಲ್ಪವು ಅದರ ಸಮೀಪವೇ ದೊರೆತಿರುವುದರಿಂದ ಈ ಸ್ಥಳವು ಕದಂಬರ ಕಾಲವೆಂದು ತಿಳಿಯಲಾಗಿದ್ದು , ಈ ಬೆಟ್ಟವು ಅರಣ್ಯಪ್ರದೇಶವಾಗಿದ್ದರಿಂದ ಪಶ್ಚಿಮಘಟ್ಟದಲ್ಲಿ ಹುಲಿಗಳು ಹೆಚ್ಚಾಗಿ ಇರುವುದರಿಂದ ಹುಲಿ ಮುಖದ ನರಸಿಂಹ ಶಿಲ್ಪಗಳ ಆರಾಧನೆ ಕಂಡುಬಂದಿದ್ದು , ಇದು ಪ್ರಕೃತಿ ದೇವತೆಯ ಸಂರಕ್ಷಣೆ ಹಾಗೂ ಗೋವು ಹಾಗೂ ಮಾನವರ ಸಂರಕ್ಷಣೆಯ ಸಂಕೇತವೆನ್ನಬಹುದು ಎಂದು ಆರ್.ಶೇಜೇಶ್ವರ ಅಭಿಪ್ರಾಯಪಟ್ಟಿದ್ದಾರೆ .

ಈ ಶಿಲವನ್ನು ಪತ್ತೆಹಚ್ಚುವಲ್ಲಿ ಗ್ರಾಮಸ್ತರಾದ ಮಂಜಪ್ಪ ಇತರರು ಹಾಗೂ ಇದರ ಕಾಲ ಗುರುತಿಸುವಲ್ಲಿ ಸಹಕರಿಸಿದ ಡಾ . ಜಗದೀಶ , ಆ.ಸುಂದರರವರಿಗೆ ಆರ್‌ . ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ .

Admin

Leave a Reply

Your email address will not be published. Required fields are marked *

error: Content is protected !!