ಇಂತಹ ಕೃತ್ಯ ತಡೆಯಲು ಎನ್ ಕೌಂಟರ್ ಕಾನೂನು ಜಾರಿಯಾಗಬೇಕು : ಸಚಿವ ಸಂತೋಷ್ ಲಾಡ್

ಇಂತಹ ಕೃತ್ಯ ತಡೆಯಲು ಎನ್ ಕೌಂಟರ್ ಕಾನೂನು ಜಾರಿಯಾಗಬೇಕು : ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು ಈ ಕೊಲೆಯನ್ನು ನಾನು ಖಂಡಿಸುತ್ತೇನೆ ಈ ರೀತಿಯ ಪ್ರಕರಣದಲ್ಲಿ ಎನ್ ಕೌಂಟರ್ ಕಾನೂನು ಜಾರಿ ಆಗಬೇಕು ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

ಹುಬ್ಬಳ್ಳಿ ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿದ ಕುಟುಂಬದವರಿಗೆ ಸಾಂತ್ವನ ನೀಡಿದರು‌.

ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳುವುದಿಲ್ಲ.‌ ಆದರೆ ಮುಂದೆ ಇದಕ್ಕೆ ಒಂದು ಎನಕೌಂಟರ್ ಕಾನೂನು ಬರಲೇಬೇಕು ಎಂದರು.

ಡ್ರಗ್ಸ್ ಮಾಫೀಯಾ ಬಹಳ ದಿನದಿಂದ ಇದೆ. ಡ್ರಗ್ಸ್ ಬೇರೆ ಬೇರೆ ಕಡೆಯಿಂದ ಬರುತ್ತದೆ. ಇದು ಕೇವಲ ರಾಜ್ಯದ ಸಮಸ್ಯೆಯಲ್ಲ. ಎಲ್ಲಿ ಸರಬರಾಜು ಆಗುತ್ತದೆ ಅದನ್ನ ತಡೆಯಬೇಕು. ಈಗ ಆಗಿರುವ ಘಟನೆಗೆ ಅದಕ್ಕೂ ಹೋಲಿಕೆ ಬೇಡ ಎಂದರು.

ಎನ್ ಕೌಂಟರ್ ಕಾನೂನು ಮಾಡಿದರೆ ಈ ರೀತಿ ಮಾಡುವವರನ್ನು ಹೊಡೆದು ಉರುಳಿಸಬಹುದು.
ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಸರ್ಕಾರಗಳ ಅವಧಿಯಲ್ಲಿ ಘಟನೆಗಳ ಸಂಖ್ಯೆಗಳನ್ನು ಕೊಡಬಲ್ಲೆ, ಆದರೆ ಅದಕ್ಕೆ ಉತ್ತರಿಸುವ ಪರಿಸ್ಥಿತಿ
ಕೆಲವರು ಇದನ್ನ ರಾಜಕೀಯ ಮಾಡಲು ಹೊರಟಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!