ಬಾಲರಾಮನ ಹಣೆಯನ್ನು ಚುಂಬಿಸಿದ ಸೂರ್ಯರಶ್ಮಿ, ಅಯೋಧ್ಯೆಯಲ್ಲಿ ಮೊಳಗಿದ ಶಂಖನಾದ..!

ಬಾಲರಾಮನ ಹಣೆಯನ್ನು ಚುಂಬಿಸಿದ ಸೂರ್ಯರಶ್ಮಿ, ಅಯೋಧ್ಯೆಯಲ್ಲಿ ಮೊಳಗಿದ ಶಂಖನಾದ..!

ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲು ರಾಮ‌ನವಮಿ ಆಚರಿಸಲಾಗುತ್ತಿದೆ. ಎಲ್ಲ ಭಕ್ತರು ಇಂದು ರಾಮನ ಭಕ್ತಿಯ ಭಾವದಲ್ಲಿ ಮುಳುಗಿದ್ದಾರೆ. ರಾಮಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.

ದೇವಾಲಯಗಳಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗುತ್ತಿವೆ. ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇದರ ನಡುವೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹಕ್ಕೂ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಶ್ರೀರಾಮ ನವಮಿಯ ದಿನದಂದೇ ಅಯೋಧ್ಯೆಯಲ್ಲಿ ಪವಾಡವೊಂದು ನಡೆದಿದೆ. ಬಾಲರಾಮನ 51 ಇಂಚು ಎತ್ತರದ ಪ್ರತಿಮೆಗೆ ಸೂರ್ಯನ ಕಿರಣಗಳು ತಾಗಿವೆ. ಸೂರ್ಯನ ಕಿರಣಗಳು ನೇರವಾಗಿ ಬಾಲರಾಮನ ಹಣೆಯ ಮೇಲೆ ಬಿದ್ದವು.

ಸುಮಾರು 6 ನಿಮಿಷಗಳ ಕಾಲ ಸೂರ್ಯನು ಬಾಲರಾಮನ ಹಣೆಗೆ ಮುತ್ತಿಟ್ಟನು. ಇದರ ಪ್ರತಿಬಿಂಬದಿಂದಾಗಿ ಬಾಲರಾಮನ ವಿಗ್ರಹ ನೀಲಿ ಬಣ್ಣಕ್ಕೆ ತಿರುಗಿತು ಮತ್ತು ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿತು. ಇದನ್ನು ಕಣ್ಣಾರೆ ಕಂಡ ಭಕ್ತರು ಮತ್ತಷ್ಟು ಭಕ್ತಿಭಾವ ಮೆರೆದಿದ್ದಾರೆ.

ಶ್ರೀರಾಮ ನವಮಿಯ ದಿನದಂದು ಮಾತ್ರ ಈ ದೃಶ್ಯ ಕಾಣಸಿಗುತ್ತದೆ. ಇದನ್ನು ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕ ಎನ್ನುತ್ತಾರೆ. ಸೂರ್ಯನ ಕಿರಣಗಳು ರಾಮಲಲ್ಲಾ ಅವರ ಹಣೆಗೆ ತಾಗುವಂತೆ ಆಧುನಿಕ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!