ಶಿಕಾರಿಪುರ : ರಾಜ್ಯಕ್ಕೆ ರ‍್ಯಾಂಕ್ ಪಡೆದ ಕುಮದ್ವತಿ ಕಾಲೇಜಿನ ಪವನ್

ಶಿಕಾರಿಪುರ : ರಾಜ್ಯಕ್ಕೆ ರ‍್ಯಾಂಕ್ ಪಡೆದ ಕುಮದ್ವತಿ ಕಾಲೇಜಿನ ಪವನ್

ಶಿಕಾರಿಪುರ: ಕುಮದ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪವನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಪವನ್ ಕುಮದ್ವತಿ ಬಿಇಡಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್. ಮಂಜುನಾಥ್ ಹಾಗೂ ಗೃಹಿಣಿ ಅನಿತಾ ಅವರ ಪುತ್ರನಾದ ಪವನ್ ಸಾಧನೆ ಜಿಲ್ಲೆಯೇ ಹೆಮ್ಮೆ ಪಡುವಂತಹದ್ದಾಗಿದೆ.

ಈ ಕುರಿತಂತೆ ಸ್ವತಃ ಮಾತನಾಡಿದ ಪವನ್, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ತಂದೆ ತಾಯಿಯರ ಸಹಕಾರ ಹಾಗೂ ನಿರಂತರ ಶ್ರಮ ನನ್ನ ಇಂದಿನ ಫಲಿತಾಂಶದ ಹಿಂದಿದೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ ಎಂದ ಪವನ್, ಮುಂದೆ ಚಾರ್ಟಡ್ ಅಕೌಂಟೆಂಟ್(ಸಿಎ) ಆಗುವ ಬಯಕೆ ನನಗಿದೆ. ಹೀಗಾಗಿ, ಪದವಿಯೊಂದಿಗೆ ಅದಕ್ಕೂ ಸಹ ಅಧ್ಯಯನ, ತರಬೇತಿಯನ್ನು ಈಗಿನಿಂದಲೇ ಆರಂಭಿಸುತ್ತೇನೆ ಎಂದಿದ್ದಾರೆ.

ಈ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಜಿಲ್ಲೆಗೆ ಹೆಮ್ಮೆ ತಂದ ವಿದ್ಯಾರ್ಥಿ ಪವನ್, ಆತನ ಪೋಷಕರು ಹಾಗೂ ಕುಮದ್ವತಿ ಕಾಂಪೋಸಿಟ್

ಕಾಲೇಜನ್ನು ಕಲ್ಪ ಮೀಡಿಯಾ ಹೌಸ್ ಮನದುಂಬಿ ಅಭಿನಂದಿಸುತ್ತದೆ.

Admin

Leave a Reply

Your email address will not be published. Required fields are marked *

error: Content is protected !!