ಕೇಂದ್ರ ಬಜೆಟ್ ನಲ್ಲಿ ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ₹200 ಕೋಟಿ ಘೋಷಣೆ..!

ಕೇಂದ್ರ ಬಜೆಟ್ ನಲ್ಲಿ ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ₹200 ಕೋಟಿ ಘೋಷಣೆ..!

 ಶಿವಮೊಗ್ಗ: ಶಿವಮೊಗ್ಗ-ಶಿಕಾರಿಪುರ ರಾಣೆಬೆನ್ನೂರು ನಡುವೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಗುರುವಾರ ನಿರ್ಮಲ‌ ಸೀತರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರೂ. ₹200 ಕೋಟಿ ಘೋಷಿಸಲಾಗಿದೆ.

ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೂಲಕ ಹೋಗುವ ಈ ನೂತನ ರೈಲು ಮಾರ್ಗ 103 ಕಿ.ಮೀ. ಅಂತರವಿದ್ದು 1,100 ಕೋಟಿ ಅಂದಾಜು ವೆಚ್ಚದ ಈ ಮಾರ್ಗ ನಿರ್ಮಾಣದ ಯೋಜನಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 50ರಷ್ಟು ಭರಿಸಲಿವೆ.  ಇದರಲ್ಲಿ ₹ 100 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಬಳಿಯ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೊ ನಿರ್ಮಾಣವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವೇ ನಿರ್ವಹಿಸಲಿದೆ.

ಮಲೆನಾಡಿನೊಂದಿಗೆ ಕಿತ್ತೂರು ಕರ್ನಾಟಕ ಭಾಗವನ್ನು ಸಂಪರ್ಕಿಸುವ ಈ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ 2023ರ ಗಳ ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

Admin

Leave a Reply

Your email address will not be published. Required fields are marked *

error: Content is protected !!