ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದೆ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ..!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದೆ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ..!

ಶಿಕಾರಿಪುರ :ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಶಿಕಾರಿಪುರದ ಕಾಂಗ್ರೆಸ್ ಪುಡಾರಿಗಳ ಆರ್ಭಟ ಸ್ವಲ್ಪ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದೆ. ಆ ಬಳಿಕ ಕಾಂಗ್ರೆಸ್ ಪಕ್ಷದ ಟೈರ್ ಪಂಕ್ಚರ್ ಆಗಿ, ಪುಡಾರಿಗಳ ಪುಂಗಿ ಊದುವುದು ನಿಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶಿಕಾರಿಪುರ ಪಟ್ಟಣದ ಮಾರಿಕಾಂಬಾ ಬಯಲು ರಂಗಮಂದಿರದಲ್ಲಿ ತಾಲೂಕ್ ಬಿಜೆಪಿ  ಆಯೋಜಿಸಿದ್ದ ನೂತನ ರಾಜ್ಯಾಧ್ಯಕ್ಷರು ಹಾಗೂ ವಿರೋಧಪಕ್ಷ ನಾಯಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೂ, ರಾಜ್ಯ ಸರಕಾರ ಮಲಗಿದೆ ಎಂದು ಟೀಕಿಸಿದರು.

ಅಧಿವೇಶನದಲ್ಲಿ ಸರಕಾರದ ಕಿವಿ ಹಿಂಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಬರಗಾಲದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನ ಬಿಜೆಪಿ ರಾಜ್ಯಾಧ್ಯಕ್ಷನಾಗಿ ರಾಜ್ಯದ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಹಕರಿಸಿ ತಂದೆಯವರ ಆಶಯ ಮತ್ತು ಸೂಚನೆಯಂತೆ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ರಾಜ್ಯಾಧ್ಯಕ್ಷನಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಲಿದ್ದೇನೆ ಎಂದರು.

ಕಾಂಗ್ರೆಸ್ ಸರಕಾರ ಭ್ರಷ್ಟ, ದುಷ್ಟ ಸರಕಾರ. ರಾಜ್ಯದಲ್ಲಿ ರೈತವಿರೋಧಿ, ದಲಿತವಿರೋಧಿ ಸರಕಾರವಿದೆ. ಅದಕ್ಕೆ ತಕ್ಕ ಪಾಠ ಕಲಿಸಿ ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವಂಥದ್ದು. ಕಾರ್ಯಕರ್ತರು ನಾನೇ ರಾಘಣ್ಣ, ನಾನೇ ಯಡಿಯೂರಪ್ಪ ಎಂದು ಭಾವಿಸಿ ಮನೆಮನೆಗೆ ಭೇಟಿ ಕೊಡಿ.ಈ ಮೂಲಕ ದೊಡ್ಡ ಅಂತರದಲ್ಲಿ ಶಿಕಾರಿಪುರದಲ್ಲಿ ಹಾಗೂ ಇತರ ಕಡೆ ಪಕ್ಷದ ಗೆಲುವಿಗೆ ಸಹಕರಿಸಿ ಎಂದರು.

ಕನ್ನಡ ನಾಡಿನ ಕೋಟ್ಯಾಂತರ ಹೃದಯಗಳಲ್ಲಿ ನೆಲೆಸಿರುವ ಹೋರಾಟವನ್ನೇ ಉಸಿರಾಗಿಸಿಕೊಂಡಿರು ಯಡಿಯೂರಪ್ಪ ಅವರನ್ನು ಆಶೀರ್ವದಿಸಿದ ಶಿಕಾರಿಪುರದ ಜನರ ಪ್ರೀತಿ ಅನನ್ಯವಾದುದು. ಈ ಮಣ್ಣಿನ ಪ್ರಭಾವ ಹಾಗೂ ಜನರ ಹಾರೈಕೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೆಗಲಿಗೇರಿಸಿದೆ.

ಈ ನಿಟ್ಟಿನಲ್ಲಿ ಯಶಸ್ಸಿನ ಹೆಜ್ಜೆಗಳನ್ನಿಟ್ಟು ಕ್ಷೇತ್ರಕ್ಕೆ ಘನತೆ ತಂದು ಕೊಡುವ ಹೊಣೆ ನನ್ನ ಮೇಲಿದ್ದು ಕ್ಷೇತ್ರದ ಜನರ ಸಹಕಾರ, ಬೆಂಬಲವೇ ನನಗೆ ಶ್ರೀರಕ್ಷೆ ಎಂದರು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ವಿಜಯೇಂದ್ರ ಮತ್ತು ಆರ್.ಅಶೋಕ್ ಅವರ ಸನ್ಮಾನ ಮಾಡುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರ ಆಶೀರ್ವಾದದಿಂದ ವಿಜಯಣ್ಣ ಮತ್ತು ಅಶೋಕ್ ಅವರು ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಒಂದು ಕೊಡುಗೆ ಕೊಡಬೇಕಿದೆ ತಾಲೂಕಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ. ಇದಕ್ಕೆ ರಾಘವೇಂದ್ರರ ವಿಶೇಷ ಪರಿಶ್ರಮ ಕಾರಣ ಎಂದರು

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ,ಸಂಸದ ಬಿವೈ ರಾಘವೇಂದ್ರ ,ಶಾಸಕ ಅರಗ ಜ್ಞಾನೇಂದ್ರ, ಜಿಲ್ಲಾಧ್ಯಕ್ಷ ಮೇಘರಾಜ್, ಮಾಜಿ ಶಾಸಕರಾದ ಹರತಾಳು ಹಾಲಪ್ಪ,ಬಿಸಿ ಪಾಟೀಲ್,ಎಂಎಲ್ಸಿ ಡಿಎಸ್ ಅರುಣ್, ಮಾಜಿ‌ ಶಾಸಕ‌ ಅರುಣ್, ಎಂ.ಪಿ.ರೇಣುಕಾಚಾರ್ಯ, ತಾಲ್ಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಮುಖಂಡ ಗುರುಮೂರ್ತಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು,ಕಾರ್ಯಕರ್ತರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!