ಶಿಕ್ಷಣ ಸಚಿವರ ತವರು ಜಿಲ್ಲೆಯ ಶಾಲೆಯೊಂದರಲ್ಲಿ ಹಾರಲಿಲ್ಲ ರಾಷ್ಟ್ರಧ್ವಜ..!

ಶಿಕ್ಷಣ ಸಚಿವರ ತವರು ಜಿಲ್ಲೆಯ ಶಾಲೆಯೊಂದರಲ್ಲಿ ಹಾರಲಿಲ್ಲ ರಾಷ್ಟ್ರಧ್ವಜ..!

ಶಿಕಾರಿಪುರ ತಾಲೂಕಿನ ಎಳನೀರುಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕ್ಷಣ ಸಚಿವರ ತವರು ಜಿಲ್ಲೆಯಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕ್ಷೇತ್ರವಾಗಿದ ಶಿಕಾರಿಪುರ ತಾಲೂಕಿನ‌ಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅಪಮಾನವಾಗಿದೆ.

ಎಳನೀರುಕೊಪ್ಪ ಶಾಲೆಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ ಇದ್ದರು ಶಾಲಾ ಶಿಕ್ಷಕಿ ಲಲಿತಾ ಧ್ವಜರೋಹಣ ಮಾಡಿಲ್ಲ ಶಾಲೆಗೆ ಆಗಮಿಸಿಲ್ಲ ಎಂದು ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ್ ಆರೋಪಿಸಿದ್ದಾರೆ.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಅವರು ಶಿಕಾರಿ ನ್ಯೂಸ್ ನೊಂದಿಗೆ ಮಾತನಾಡಿ ಧ್ವಜಾರೋಹಣ ನಡೆಸಿದ್ದಾರೆ ಶಾಲೆಯ ಧ್ವಜದ ಕಟ್ಟೆ ಸರಿ ಇಲ್ಲದ ಕಾರಣ ಪಕ್ಕದಲ್ಲಿ ಇರುವ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಶಿಕ್ಷಕಿ ಮಕ್ಕಳೊಂದಿಗೆ ಧ್ವಜಾರೋಹಣ ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ‌.

ಆದರೆ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ನಾಯ್ಕ್ ಈ ಬಗ್ಗೆ ಮಾತನಾಡಿ ಧ್ವಜದ ಕಟ್ಟೆ ಗಟ್ಟಿಮುಟ್ಟಾಗಿ ಇದ್ದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ದ್ವಜದ ಕಟ್ಡೆ ಭದ್ರವಾಗಿದೆ ನಾನು‌ ಬೆಳಗ್ಗೆಯಿಂದ ಶಿಕ್ಷಕಿಗೆ ದೂರವಾಗಿ ಕರೆ ಮಾಡಿದರು‌ ಅವರು ಸ್ಪಂದಿಸಿಲ್ಲ ಶಿಕ್ಷಕಿ ಶಿವಮೊಗ್ಗದಲ್ಲಿ ವಾಸವಿದ್ದು ಸ್ವಾತಂತ್ರ್ಯ ದಿನಾಚರಣೆ ಬಾರದೆ ದೇಶಕ್ಕೆ ಅಪಮಾನ ಮಾಡಿದ್ದಾರೆ ಈ ಬಗ್ಗೆ ಬಿ.ಇಓ ಗೆ ದೂರು ನೀಡಲಾಗಿದೆ ಎಂದಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ‌ಶಿಕ್ಷಕರ‌ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕ್ರಮ ಕೈಗೊಳದೆ ಸುಮ್ಮನಿದ್ದಾರೆ ತಾಲೂಕಿನ ಅನೇಕ ಶಿಕ್ಷಕರು‌ ಪಾಠ ಮಾಡದೇ ಸಂಬಳ ತೆಗೆದುಕೊಳ್ಳುತ್ತಿದ್ದಾರೆ.

ಹಾಜರಾತಿ ಹಾಕಿ ಶಿಕಾರಿಪುರ ಪಟ್ಟಣದಲ್ಲಿ ಬಡ್ಡಿ ವ್ಯಾವಹಾರ‌, ಸಂಘ, ಸಂಸ್ಥೆ ರಾಜಕೀಯ ಮಾಡಿಕೊಂಡು ಓಡಾಡುತ್ತಾರೆ ಎನ್ನುವ ಆರೋಪಗಳು ಸಾಕಷ್ಟು ಇವೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲ ರಾಜಕೀಯ ಪೋಷಿತ ಶಿಕ್ಷಕರ‌ ಕೈಗೊಂಬೆ ಆಗಿದ್ದಾರೆ ಅದ್ದರಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿದೆ ಬಹುತೇಕ ಸ್ಥಳೀಯ ಶಿಕ್ಷಕರು ಪ್ರಭಲವಾಗಿ ಬೆಳೆದು ಇಲಾಖೆಯನ್ನೆ ನಿಯಂತ್ರಿಸುತ್ತಿದ್ದಾರೆ. ಶಿಕ್ಷಣ ಸಚಿವರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆ ನ್ಯೂನತೆಗಳನ್ನು ಸರಿ ಪಡಿಸಲು ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!