ಕೆಳದಿ ಶಿವಪ್ಪನಾಯಕ ವಿ ವಿ 8ನೇ ಘಟಿಕೋತ್ಸವದಲ್ಲಿಬಿ ಎಸ್ ವೈ ಗೆ ಗೌರವ ಡಾಕ್ಟರೇಟ್

ಕೆಳದಿ ಶಿವಪ್ಪನಾಯಕ ವಿ ವಿ 8ನೇ ಘಟಿಕೋತ್ಸವದಲ್ಲಿಬಿ ಎಸ್ ವೈ ಗೆ ಗೌರವ ಡಾಕ್ಟರೇಟ್

ಆನಂದಪುರ: ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಇಲ್ಲಿಗೆ ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 8ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ನೀಡಿದರು.

ಬಿ ಎಸ್ ಯಡಿಯೂರಪ್ಪನವರು ರಾಜ್ಯ ಕಂಡ ಧೀಮಂತ ನಾಯಕ, ಜನಪರ ಹೋರಾಟಗಾರ ಜನಹಿತ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ತುಂಬ ಸಂತಸದಾಯಕವಾದ ವಿಷಯ. ಜನಹಿತಕ್ಕಾಗಿ ಬಿ ಎಸ್ ವೈ ರವರ ಕಾರ್ಯ ಇನ್ನಷ್ಟು ಮುಂದುವರೆಯಲಿ ಅವರಿಗೆ ಆಯುರಾರೋಗ್ಯ ಇನ್ನಷ್ಟು ದೊರೆಯಲಿ ಎಂದು ಶುಭ ಹಾರೈಸಿದರು.

ಪದವಿ ಪಡೆದ ಬಿ ಎಸ್ ಯಡಿಯೂರಪ್ಪ ಮಾತನಾಡಿ ಈನಾಡಿನ ಅನ್ನದಾತರು ಕಷ್ಟಪಡುತ್ತಿರುವುದನ್ನು ಕಂಡು ಅವರ ಏಳಿಗೆಗಾಗಿ ನಾನಾ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ನನ್ನೆಲ್ಲಾ ಹೋರಾಟದ ಉದ್ದೇಶ ರೈತರ ಕಲ್ಯಾಣ, ರೈತರ ಸರ್ವತೋಮುಖ ಅಭಿವೃದ್ಧಿಗಾಗಿಯೇ ಪ್ರಮುಖವಾದುದಾಗಿತ್ತು.70ರ ದಶಕದಲ್ಲಿ ತಾವು ನಡೆಸಿದ ಬಗರ್ ಹುಕುಂಹೋರಾಟ, ಸೈಕಲ್ ಯಾತ್ರೆ, ಪಾದಯಾತ್ರೆಯನ್ನು ಮೆಲಕು ಹಾಕಿದರು. ವೇದಿಕೆಯಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ, ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್,ಸಂಸದ ಬಿವೈ ರಾಘವೇಂದ್ರ,ಇದ್ದರು.

Admin

Leave a Reply

Your email address will not be published. Required fields are marked *

error: Content is protected !!