ಓದಿದ ಶಾಲೆಯಲ್ಲಿ ಸನ್ಮಾನ ಸ್ವೀಕರಿಸುವುದು ಅತ್ಯಂತ ಸಂತಸ ತಂದಿದೆ : ಬಿವೈ ವಿಜಯೇಂದ್ರ

ಓದಿದ ಶಾಲೆಯಲ್ಲಿ ಸನ್ಮಾನ ಸ್ವೀಕರಿಸುವುದು ಅತ್ಯಂತ ಸಂತಸ ತಂದಿದೆ : ಬಿವೈ ವಿಜಯೇಂದ್ರ

ಶಿಕಾರಿಪುರ :ಲಯನ್ಸ್ ಕ್ಲಬ್ ನ‌ ಗೊಲ್ಡನ್ ಜುಬ್ಲಿ ಕಾರ್ಯಕ್ರಮವನ್ನು ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಶಾಸಕ‌ ಬಿವೈ ವಿಜಯೇಂದ್ರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ನಾನು ಓದಿರುವ ಶಾಲೆಯಲ್ಲಿ ಸನ್ಮಾನ ಸ್ವೀಕರಿಸುವುದು ಖುಷಿಯಾಗಿದೆ 1 -5 ನೇ ತರಗತಿಯ ವರೆಗೆ ನಾನು ಇದೆ ಓದಿದ್ದು ತುಂಬ ಸಂತಸದ ಬಾಲ್ಯದ ನೆನಪು ಈ ಶಾಲೆಯಲ್ಲಿ ಕಳೆದಿದ್ದೇವೆ ಎಂದರು.

ತಂದೆ ಅವರ ಆದರ್ಶ ಅವರು ನಡೆದು ಬಂದ ಹಾದಿಯಲ್ಲಿ ನಾವು ನಡೆಯುತ್ತಿವೆ ಲಯನ್ಸ್ ಕ್ಲಬ್ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದೆ‌ ಎಂದರು.

ಸಂಸದ ಬಿವೈ ರಾಘವೇಂದ್ರ ಮಾತನಾಡಿ ಅಭಿಮಾನ‌ ಸನ್ಮಾನ ಇಂದು ನಮಗೆ ಸಿಕ್ಕಿದೆ ಎಂದರೆ ತಾಲೂಕಿನ ಜನತೆಯ ಆರ್ಶಿವಾದ ನಾನು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದು ಜೀವನದಲ್ಲಿ ಉತ್ತಮ ಸಾಂಸ್ಕರ ನೀಡಿದೆ‌.

ಲಯನ್ಸ್ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲು ಎಲ್ಲಾ ಸದಸ್ಯರ ಹಿರಿಯರ ಶ್ರಮ ಹಾಕಿದ್ದಾರೆ ಇಂದು ಸರ್ಕಾರಿ ಆಸ್ಪತ್ರೆಗೆ ಲಯನ್ಸ್ ಕ್ಲಬ್ ವತಿಯಿಂದ ಡಯಾಲಿಸೀಸ್ ಯಂತ್ರವನ್ನು ಕೊಡುಗೆ ನೀಡಿದು ಉತ್ತಮ‌ವಾದ ಕಾರ್ಯ ಇದೆ ರೀತಿ ತಮ್ಮ ಸೇವೆ ಮುಂದುವರಿಯಲಿ ಎಂದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್’ನ ಮಮತಾ, ಅಧ್ಯಕ್ಷರಾದ ರಾಘವೇಂದ್ರ ಸಾನು, ಶಿವನಾಂದ ಶಾಸ್ತ್ರೀ , ಬಾಲಚಂದ್ರ, ಎಂಐಡಿಬಿ ಮಾಜಿ ಅಧ್ಯಕ್ಷರಾದ ಗುರುಮೂರ್ತಿ ಕೆ.ಎಸ್,ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!