ಏಕರೂಪ ನಾಗರಿಕ ಸಂಹಿತೆ ಎಂದರೇನು? ಕೇಂದ್ರ ಸರ್ಕಾರ ಜಾರಿ ಮಾಡುತ್ತಾ ಈ ಕಾಯ್ದೆಯನ್ನು ಇಲ್ಲಿದೆ ಮಾಹಿತಿ..!

ಏಕರೂಪ ನಾಗರಿಕ ಸಂಹಿತೆ ಎಂದರೇನು? ಕೇಂದ್ರ ಸರ್ಕಾರ ಜಾರಿ ಮಾಡುತ್ತಾ ಈ ಕಾಯ್ದೆಯನ್ನು ಇಲ್ಲಿದೆ ಮಾಹಿತಿ..!

ಏಕರೂಪ ನಾಗರಿಕ ಸಂಹಿತೆಯು ವಾಸ್ತವವಾಗಿ ಒಂದು ದೇಶ ಒಂದು ಕಾನೂನು ಎಂಬ ಕಲ್ಪನೆಯನ್ನು ಆಧರಿಸಿದೆ. ಯುಸಿಸಿ(uniform civil code) ಅಡಿಯಲ್ಲಿ, ದೇಶದ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಒಂದೇ ಕಾನೂನನ್ನು ಅನ್ವಯಿಸಬೇಕು. ಆಸ್ತಿ, ಮದುವೆ, ವಿಚ್ಛೇದನ ಮತ್ತು ದತ್ತು ಇತ್ಯಾದಿಗಳ ಸ್ವಾಧೀನ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎಲ್ಲರಿಗೂ ಏಕರೂಪದ ಕಾನೂನನ್ನು ಜಾರಿ ಮಾಡಬೇಕು ಸಂವಿಧಾನದ 44ನೇ ವಿಧಿಯಲ್ಲಿ ಅದರ ಬಗ್ಗೆ ಉಲ್ಲೇಖವಾಗಿದೆ. “ಭಾರತ ದೇಶಾದ್ಯಂತ ನಾಗರಿಕರಿಗೆ ಅನ್ವಯವಾಗುವಂತೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದು ಸರಕಾರದ ಕರ್ತವ್ಯವಾಗಿರುತ್ತದೆ’ ಎಂದು ಉಲ್ಲೇಖಿಸಲಾಗಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ಆರ್ಟಿಕಲ್-44 ಅನ್ನು ಸಂವಿಧಾನದ ರಾಜ್ಯ‌ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ‘ಕ್ರಿಮಿನಲ್ ಕೋಡ್’ ಇದೆ, ಆದರೆ ಏಕರೂಪದ ನಾಗರಿಕ ಕಾನೂನು ಇಲ್ಲ.
ಏಕರೂಪ ನಾಗರಿಕ ಸಂಹಿತೆ, UCC ಭಾರತದಲ್ಲಿ ಎಲ್ಲಾ ಕಡೆಯೂ ಅನ್ವಯಿಸುತ್ತದೆ.‌ ಈ‌ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಹಲವು ಬಾರಿ ಒತ್ತಾಯಿಸಿದೆ.

ಏಕರೂಪ ನಾಗರಿಕ ಸಂಹಿತೆ- ಇತಿಹಾಸ

1835 ರಲ್ಲಿ ಬ್ರಿಟಿಷ್ ಸರ್ಕಾರದ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಗಳು‌‌ ಇನ್ನೂ ವಿಷಯಗಳ ಬಗ್ಗೆ ಏಕರೂಪದ ಕಾನೂನು ಅನ್ವಯಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

ಈ ವರದಿಯಲ್ಲಿ ಹಿಂದೂ-ಮುಸ್ಲಿಮರ ಧಾರ್ಮಿಕ ಕಾನೂನುಗಳನ್ನು ತಿದ್ದುವ ಮಾತಿಲ್ಲ. ಆದರೂ, 1941 ರಲ್ಲಿ, ಹಿಂದೂ ಕಾನೂನನ್ನು ಕ್ರೋಡೀಕರಿಸಲು ಬಿ ಎನ್ ರಾವ್ ಸಮಿತಿಯನ್ನು ರಚಿಸಲಾಯಿತು. ಬಿಎನ್‌‌ ರಾವ್ ಸಮಿತಿಯ ಶಿಫಾರಸಿನ ಮೇರೆಗೆ, ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ಉತ್ತರಾಧಿಕಾರದ ವಿಷಯಗಳನ್ನು ಇತ್ಯರ್ಥಗೊಳಿಸಲು 1956 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಮಸೂದೆಯನ್ನು ಅಂಗೀಕರಿಸಲಾಯಿತು. ಆದರೂ, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳಿಗೆ ಪ್ರತ್ಯೇಕ ಕಾನೂನುಗಳನ್ನು ಇರಿಸಲಾಯಿತು.

ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆ ಏಕೆ?

ಭಾರತೀಯ ಸಂವಿಧಾನದ ಪ್ರಕಾರ, ಭಾರತವು ಜಾತ್ಯತೀತ ದೇಶವಾಗಿದೆ, ಇದರಲ್ಲಿ ಎಲ್ಲಾ ಧರ್ಮಗಳು ಮತ್ತು ಪಂಗಡಗಳ (ಹಿಂದೂ, ಮುಸ್ಲಿಂ, ಸಿಖ್, ಬೌದ್ಧ, ಇತ್ಯಾದಿ) ಅನುಯಾಯಿಗಳು ತಮ್ಮ ಧರ್ಮಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ. ಭಾರತದಲ್ಲಿ ಎರಡು ರೀತಿಯ ವೈಯಕ್ತಿಕ ಕಾನೂನುಗಳಿವೆ. ಮೊದಲನೆಯದು ಹಿಂದೂ ವಿವಾಹ ಕಾಯಿದೆ 1956; ಹಿಂದೂ, ಸಿಖ್, ಜೈನ ಮತ್ತು ಇತರ ಪಂಥಗಳಿಗೆ ಅನ್ವಯಿಸುತ್ತದೆ.

ಎರಡನೆಯದಾಗಿ ಮುಸ್ಲಿಂ ಧರ್ಮವನ್ನು ಅನುಸರಿಸುವವರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಅನ್ವಯಿಸುತ್ತದೆ ಆದರೆ ಭಾರತೀಯ ಸಂವಿಧಾನದ ಅಡಿಯಲ್ಲಿ ಮಾಡಲಾದ ಹಿಂದೂ ವಿವಾಹ ಕಾಯ್ದೆ 1956 ಮುಸ್ಲಿಮರನ್ನು ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ಮತ್ತು ಪಂಗಡಗಳಿಗೆ ಅನ್ವಯಿಸುತ್ತೆ. ಮುಸ್ಲಿಮರು ಈ ಕಾಯ್ದೆ ಅನ್ವಯಿಸುವುದಿಲ್ಲ ಎಲ್ಲಾರಿಗೂ ಒಂದೆ ರೀತಿಯ ಕಾನೂನು ಅವಶ್ಯಕವಾಗಿದೆ.

ಪೋರ್ಚುಗೀಸ್ ಕಾಲದಲ್ಲೇ ಗೋವಾದಲ್ಲಿ ಜಾರಿ..!

ಭಾರತದಲ್ಲಿ ಗೋವಾ ರಾಜ್ಯದಲ್ಲಿ ಈಗಾಗಲೇ ಸಮಾನ ನಾಗರಿಕ ಸಂಹಿತೆ ಜಾರಿ ಯಲ್ಲಿದೆ 1867ರ ಪೋರ್ಚುಗೀಸ್‌ ಸಮಾನ ಸಂಹಿತೆಯನ್ನು ಜಾರಿ‌ ಮಾಡಿದ್ದಾರೆ. ಪೋರ್ಚುಗೀಸ್‌ ಆಡಳಿತದಿಂದ ಗೋವಾ ಮುಕ್ತಗೊಂಡ ಬಳಿಕವೂ ಈ ಕಾನೂನು ಮುಂದುವರಿದಿದೆ.

ಅನೇಕ ದೇಶಗಳಲ್ಲಿ ಈಗಾಗಲೇ ಜಾರಿ..!

ಏಕರೂಪ ನಾಗರಿಕ ಸಂಹಿತೆಯನ್ನು ಅನೇಕ ದೇಶಗಳಲ್ಲಿ ಅನುಸರಿಸಲಾಗುತ್ತದೆ ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷಿಯಾ, ಟರ್ಕಿ, ಇಂಡೋನೇಷ್ಯಾ, ಸುಡಾನ್, ಈಜಿಪ್ಟ್, ಅಮೇರಿಕಾ, ಐರ್ಲೆಂಡ್, ಇತ್ಯಾದಿ. ಈ ಎಲ್ಲಾ ದೇಶಗಳು ಎಲ್ಲಾ ಧರ್ಮಗಳಿಗೆ ಏಕರೂಪದ ಕಾನೂನುಗಳನ್ನು ನೀಡಿದೆ ಮತ್ತು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಪ್ರತ್ಯೇಕ ಕಾನೂನುಗಳಿಲ್ಲ.

ಒಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ‌ ಘೋಷಣೆಯಂತೆ‌ ಈ ಕಾನೂನು ಜಾರಿ ಮಾಡಲು ಮುಂದಾಗಿದ್ದು ಈಗಾಗಲೇ ಜನಾಭಿಪ್ರಾಯವನ್ನು ಸಂಗ್ರಹ ಮಾಡಲಾಗುತ್ತಿದೆ ಚುನಾವಣಾ ಪೂರ್ವದಲ್ಲಿ ಈ ಕಾಯ್ದೆ ಜಾರಿಯಾಗುತ್ತಾ ಎಂದು ಕಾದು ನೊಡಬೇಕಾಗಿದೆ.

Special Story: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!