ಬಿಜೆಪಿ‌ ಎಂಎಲ್‌ಸಿ ಸ್ಥಾನಕ್ಕೆ ಆಯನೂರು ಮಂಜುನಾಥ ರಾಜಿನಾಮೆ ಘೋಷಣೆ

ಬಿಜೆಪಿ‌ ಎಂಎಲ್‌ಸಿ ಸ್ಥಾನಕ್ಕೆ ಆಯನೂರು ಮಂಜುನಾಥ ರಾಜಿನಾಮೆ ಘೋಷಣೆ

ಶಿವಮೊಗ್ಗ: ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳೆದಿರುವ ಆಯನೂರು ಮಂಜುನಾಥ್ ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ್ದು, ಇಂದು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ತೊರೆಯಲು ನಾನು ನಿರ್ಧರಿಸಿದ್ದು, ಇದರ ಜೊತೆಯಲ್ಲಿ ಎಂಎಲ್’ಸಿ ಸ್ಥಾನಕ್ಕೂ ಸಹ ರಾಜೀನಾಮೆ ನೀಡಲಿದ್ದೇನೆ ಎಂದಿದ್ದಾರೆ.

ಇಂದು ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮಯ ನೀಡಿದ್ದು, ಹುಬ್ಬಳ್ಳಿಗೆ ತೆರಳಿ ರಾಜೀನಾಮೆ ನೀಡಲಿದ್ದೇನೆ ಎಂದರು.

ಶ್ರಮಿಕವರ್ಗ, ತುಳಿತಕ್ಕೆ ಒಳಗಾದವರ ಪರವಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ. ಈ ಸಮೂಹದ ಬಗ್ಗೆ ವಿಧಾನಪರಿಷತ್ತಿನಲ್ಲಿ ಪ್ರಸ್ತಾವ ಆಗಿದ್ದೇ ಕಡಿಮೆ. ಹೀಗಾಗಿ, ಎಲ್ಲರ ಅನುಮತಿ ಪಡೆದು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮೇಲೆ ಭರವಸೆ, ವಿಶ್ವಾಸವಿಟ್ಟು ನನ್ನನ್ನು ಬೆಂಬಲಿಸಲಿದೆ ಎಂದಿದ್ದಾರೆ.ಶಿವಮೊಗ್ಗ ತನ್ನ ಶಾಂತ ಪರಂಪರೆ ಕಳೆದುಕೊಳ್ಳುತ್ತಿರುವ ಆತಂಕವಿದೆ.

ಇಂಥ ಸ್ಥಿತಿ ನಿರ್ಮಿಸುವವರ ವಿರುದ್ಧ ನನ್ನ ಸ್ಪರ್ಧೆಯಾಗಿದ್ದು, ಶಾಂತಿಪ್ರಿಯರಾದ ಜನ ನನ್ನ ಜೊತೆ ಇದ್ದಾರೆ. ಸೌಹಾರ್ದದ ನಿಲುವಿಗೆ ಬೆಂಬಲಿಸಬೇಕೆAಬ ವಿನಂತಿ ಮಾಡುತ್ತೇನೆ. ಶಿವಮೊಗ್ಗದಲ್ಲಿ ಭಯಭೀತ ಸ್ಥಿತಿ. ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ನಗರಕ್ಕೆ ಅಪಖ್ಯಾತಿ ಬಂದಿದೆ. ಗಲಭೆ ನಿಯಂತ್ರಣ ಮುಖ್ಯವಾಗಿದೆ ಎಂದರು.

ಪದವೀಧರ ಕ್ಷೇತ್ರದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು, ಕುಬೇರರ ಮುಂದೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯಲಿದ್ದು, ಜಾತಿ ಆಧಾರ ಇಲ್ಲದೇ, ಹಣದ ಸಹಾಯ ಇಲ್ಲದೇ ಸ್ಪರ್ಧೆ ಮಾಡುತ್ತೇನೆ ಎಂದರು.

ನಾಳೆ ಬೆಳಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದರು.

ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ನನ್ನ ನಾಯಕರು. ಅವರ ವಿರುದ್ದ ಆಪಾದನೆ ಬಂದಾಗ ಅವರನ್ನು ಒಬ್ಬನೇ ನಾಯಕ ಸಮರ್ಥನೆ ಮಾಡಿಕೊಳ್ಳಲಿಲ್ಲ. ಆದರೆ ನಾನು ಸಮರ್ಥನೆ ಮಾಡಿಕೊಂಡೆ ಎಂದು ಪತ್ರಕರ್ತರ ಪ್ರಶ್ಣೆಗೆ ಆಯನೂರು ಮಂಜುನಾಥ್ ಉತ್ತರಿಸಿದರು.

ಶೋಕಾಸ್ ನೋಟೀಸ್ ಬಗ್ಗೆ ಮಾತನಾಡಿದ ಅವರು ಮಾಜಿ ಮಂತ್ರಿ.ಶಾಸಕರು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ನೋಟೀಸ್ ನೀಡಿದ್ದೀರಾ.? ನಗರಪಾಲಿಕೆ ಹಗರಣಗಳ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ.? ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದವರಿಗೆ ನೀವು ನೋಟೀಸ್ ನೀಡಿಲ್ಲ. ಇನ್ನು ನನ್ನ ಉತ್ತರಕ್ಕಾಗಿ ಆ ಪಕ್ಷ ಯಾವ ನೈತಿಕತೆ ಇಟ್ಟುಕೊಂಡಿದೆ ಎಂದು ಮಾರ್ಮಿಕವಾಗಿ ಹೇಳಿದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!