|Akkamahadevi Statue| ಬಿ.ಎಸ್ ಯಡಿಯೂರಪ್ಪನವರನ್ನು ಪಡೆದ ಶಿಕಾರಿಪುರದ ಜನತೆ ಪುಣ್ಯವಂತರು: ಸಿಎಂ ಬೊಮ್ಮಯಿ…..!!

|Akkamahadevi Statue| ಬಿ.ಎಸ್ ಯಡಿಯೂರಪ್ಪನವರನ್ನು ಪಡೆದ ಶಿಕಾರಿಪುರದ ಜನತೆ ಪುಣ್ಯವಂತರು: ಸಿಎಂ ಬೊಮ್ಮಯಿ…..!!

ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿ ( ಈಗ ಉಡುಗಣಿ ಗ್ರಾಮ) 65 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪರನ್ನ ಶತಕಗಳ ಕ್ರಾಂತಿಕಾರಿ ಎಂದು ಹೊಗಳಿದರು.

12 ನೇ ಶತಮಾನದ ಶ್ರೇಷ್ಠ ಶರಣೆ ಅಕ್ಕಮಹಾದೇವಿಯ ಪ್ರತಿಮೆ ಉದ್ಘಾಟನೆ ಮಾಡಿದ್ದೇನೆ.‌ ಇದರ ಜೊತೆ ಹಲವು ಯೋಜನೆ ಉದ್ಘಾಟನೆ ಮಾಡಿದ್ದೇವೆ. ನಮ್ಮೆಲ್ಲರ ನಾಯಕರ, ಕರ್ನಾಟಕ ಕಂಡ ಅಪರೂಪದ ಕಣ್ಮಣಿ, ಸರ್ವ ಸಮಾಜಕ್ಕೆ‌ ನ್ಯಾಯ ಕೊಟ್ಟ ಹರಿಕಾರ, ರೈತ ನಾಯಕ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿದವರು ಬಿಎಸ್ ಯಡಿಯೂರಪ್ಪ. ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತಂದ ಪರಿವರ್ತಕ ಶಿಕಾರಿಪುರದ ನಾಯಕ ಯಡಿಯೂರಪ್ಪ. ಉಡುಗಣಿ ಒಂದು ಪುಣ್ಯ ಭೂಮಿ. ಇಡೀ ಶರಣ ಕುಲಕ್ಕೆ ಶಕ್ತಿ ನೀಡುವ ಶಕ್ತಿ ಇಲ್ಲಿದೆ.ಬಇಲ್ಲಿಂದ ಹೊರಟ ಶರಣರು ರಾಜ್ಯದ ಎಲ್ಲ ಸಮುದಾಯಗಳಿಗೆ ಜಾಗೃತಿ ನೀಡಿದ್ದಾರೆ.

ಒಂಭತ್ತು ಶತಕಗಳ ನಂತರ 21ನೇ ಶತಮಾನದಲ್ಲಿ ಮತ್ತೊಮ್ಮೆ ಈ ಶಿವಶರಣ ನಾಡು ಯಡಿಯೂರಪ್ಪರಿಂದ ಸಾಕಾರವಾಗಿದೆ. ಬಸವಕಲ್ಯಾಣದಿಂದ ಉಡುತಡಿ ಅಭಿವೃದ್ಧಿವರೆಗೆ ಸಮಾಜ ಜೋಡಿಸಿದ್ದರೆ ಅದು ಯಡಿಯೂರಪ್ಪ ಎಂದರು.ಬಅಂದು 12 ನೇ ಶತಮಾನದಲ್ಲಿ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಶಿಕಾರಿಪುರವನ್ನು ಬಸವಕಲ್ಯಾಣದೊಂದಿಗೆ ಜೋಡಿಸಿದ್ದರು ಎಂದು ಸ್ಮರಿಸಿದರು.

ಯಡಿಯೂರಪ್ಪ ಅವರ ಹಾದಿ ಸುಲಭವಾಗಿರಲಿಲ್ಲ. ಇಂದಿನ ಪೀಳಿಗೆಗೆ ಇವು ಕಣ್ಣಿಗೆ ಕಾಣುವುದಿಲ್ಲ. ಅದಮ್ಯ ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವ ನಾಯಕರಿದ್ದರೆ ಅದು ಯಡಿಯೂರಪ್ಪ. ಸತ್ಯ ಹಾಗೂ ಧರ್ಮಕ್ಕಾಗಿ ಒಂದು ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ಹೋರಾಟ ಮಾಡಿದ್ದರು.

ಇಂದು ಇಡೀ ಕರ್ನಾಟಕವನ್ನು ಕಟ್ಟುವಂತ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ ಶರಣದ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಉಡುತಡಿ ಅಭಿವೃದ್ಧಿ ಮೂಲಕ ಯಡಿಯೂರಪ್ಪ ಮಾಡಿದ್ದಾರೆ.

ರಾಜ್ಯದಲ್ಲಿ ಹಲವಾರು ಸಿಎಂಗಳು ಬಂದಿದ್ದಾರೆ ಆದರೆ 12 ನೇ ಶತಮಾನದ ಕ್ರಾಂತಿಯನ್ನು ಮುಂದುವರಿಸುವ ಕೆಲಸ ಮಾಡಿದ್ದು ಯಡಿಯೂರಪ್ಪ. ಕನಕದಾಸರ ಹುಟ್ಟೂರು ಅಭಿವೃದ್ಧಿಗೂ ಯಡಿಯೂರಪ್ಪ ಶ್ರಮಿಸಿದ್ದಾರೆ.

ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಿದ್ದು ಕೇವಲ ಆರೇಳು ವರ್ಷ ಮಾತ್ರ. ಆದರೆ 35 ವರ್ಷ ಅಧಿಕಾರವಿಲ್ಲದೆ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಯಡಿಯೂರಪ್ಪ ಅವರು ರಿಟೈರ್ಡ್ ಅಗುವ ಪ್ರಶ್ನೆಯೇ ಇಲ್ಲ. ಜನ ಯಡಿಯೂರಪ್ಪ ಅವರನ್ನು ರಿಟೈರ್ಡ್ ಆಗಲು ಬಿಡುವುದಿಲ್ಲ‌
ಮಂತ್ರಿ, ಮುಖ್ಯಮಂತ್ರಿ ಆಗುವುದು ಬೇರೆ ಒಬ್ಬ ಜನನಾಯಕನಾಗುವುದು ಬೇರೆ ಯಡಿಯೂರಪ್ಪ ಅವರ ಸೇವೆ ರಾಜ್ಯಕ್ಕೆ ವಿವಿಧ ರೀತಿಯಲ್ಲಿ ಸಿಗುತ್ತದೆ.

ಯಡಿಯೂರಪ್ಪ ಅವರ ಸೇವೆ ನಿರಂತರವಾಗಿ ಇರಲಿದೆ. ಜನರ ಮತ್ತು ಯಡಿಯೂರಪ್ಪ ಅವರ ಮಧ್ಯೆ ಯಾರು ಬರಲು ಸಾಧ್ಯವಿಲ್ಲ.
ಅನುಭವಿ, ಜನಪರ ರಾಜಕಾರಣಿಗಳ ಅಗತ್ಯವಿದೆ.

ನಾಡುಕಟ್ಟುವ ರಾಜಕಾರಣಿಗಳ ಅಗತ್ಯವಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಗತ್ಯ ಇನ್ನಷ್ಟು ಹೆಚ್ಚಿದೆ. ನಾನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ಮುಂದುವರಿಯುತ್ತೇನೆ.

ನನಗೆ ಕ್ಲಿಷ್ಟ ಪರಿಸ್ಥಿತಿಗಳಿದ್ದಾಗ ನನಗೆ ಶಕ್ತಿ ತುಂಬಿದವರು ಯಡಿಯೂರಪ್ಪ. ತಂದೆ ಮಕ್ಕಳ ಸಂಬಂಧ ನಿರಂತರವಾಗಿರುತ್ತದೆ. ರಾಜಕೀಯ ಮೀರಿ ಇರುವ ಸಂಬಂಧಗಳು‌ ನಿರಂತರವಾಗಿರುತ್ತವೆ ಎಂದರು.

ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಬಿ.ವೈ.ವಿಜಯೇಂದ್ರ ಹೆಸರೇ ಫೈನಲ್..?

ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ವಿಜಯೇಂದ್ರ ಅವರೇ ಫೈನಲ್ ಎಂದು ಸಿಎಂ ಹೇಳಿದರು. ಶಿಕಾರಿಪುರದ ಜನತೆ ಯಡಿಯೂರಪ್ಪ, ರಾಘವೇಂದ್ರ ಅವರಿಗೆ ಪ್ರೀತಿ ತೋರಿದ್ದೀರಿ ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರಿಗೂ ಪ್ರೀತಿ ತೋರುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಶಿಕಾರಿಪುರದಿಂದ ವಿಜಯೇಂದ್ರಗೆ ಟಿಕೆಟ್ ಎಂದು ಪರೋಕ್ಷವಾಗಿ ಹೇಳಿದರು.

ಸಿಟಿ ರವಿ ಲಿಂಗಾಯತ ಕುರಿತು ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿ, ಇದೆಲ್ಲ ಊಹಾಪೋಹಗಳೆಂದ ಸಿಎಂ
ಸಿ ಟಿ ರವಿ ಪರ ಬ್ಯಾಟ್ ಬೀಸಿದರು.

Admin

Leave a Reply

Your email address will not be published. Required fields are marked *

error: Content is protected !!