ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ಸಿಬಿಐ ದಾಳಿ: ಕಾಂಗ್ರೇಸ್ ಪ್ರತಿಭಟನೆ….!!!

ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ಸಿಬಿಐ ದಾಳಿ: ಕಾಂಗ್ರೇಸ್ ಪ್ರತಿಭಟನೆ….!!!

ಶಿಕಾ‌‌ರಿಪುರ:ತಾಲೂಕ್ ಬ್ಲಾಕ್ ಕಾಂಗ್ರೆಸ್, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ C.BI, IT, E.D., ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ತಾಲೂಕ್‌ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ‌‌‌ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಾಂತವೀರಪ್ಪ‌ ಗೌಡ್ರು ನಮ್ಮ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರ ಶಿಕ್ಷಣ ಸಂಸ್ಥೆ ಮೇಲೆ ಸಿ.ಬಿ.ಐ. ತನಿಖಾ ಸಂಸ್ಥೆ ದಾಳಿ ಮಾಡಿ ಮಾನಸಿಕವಾಗಿ ಕಿರುಕುಳವನ್ನು ನೀಡುವುದನ್ನು ಹಾಗೂ ನಮ್ಮ ನಾಯಕರ ರಾಜಕೀಯ ಶಕ್ತಿಯನ್ನು ಕುಗ್ಗಿಸಲು ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಕುತಂತ್ರವನ್ನು ನಾವು ಖಂಡಿಸುತ್ತೇವೆ.

ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಬಿಜೆಪಿ ಸರ್ಕಾರ ಸಮಾನ್ಯ ಡಿ.ಕೆ.ಶಿವಕುಮಾರ್‌ರವರನ್ನು ಗುರಿಯಾಗಿಸಿ ನಿರಂತರವಾಗಿ CBI, IT, E.D. ದಾಳಿಯನ್ನು ನಡೆಸಿ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಾ ಬಂದಿದೆ.

ಇದಲ್ಲದೆ ಕೇವಲ ಇಂತಹ ದಾಳಿಗಳ ವಿರುದ್ಧ ಕಾಂಗ್ರೆಸ್ ಪಕ್ಷದವರನ್ನು ಮಾತ್ರ ಕೇಂದ್ರೀಕರಿಸಿ ನಡೆಯುತ್ತಿರುವುದು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬುದು ನಮ್ಮ ಸ್ಪಷ್ಟ ನಿಲುವು, ಬಿಜೆಪಿ ಪಕ್ಷದ ನಾಯಕರ ಮೇಲೆ ಸಾವಿರಾರು ಕೋಟಿ’ ಆರೋಪ ಕೇಳಿ ಬಂದಾಗಲೂ ಉದಾಹರಣೆ ತೆಲಂಗಾಣದಲ್ಲಿ ನಡೆದ ಶಾಸಕರ ಖರೀದಿಯಲ್ಲಿ ಬಿಜೆಪಿ ಹಾಗೂ ಆರ್.ಎಸ್.ಎಸ್‌.ನ ರಾಜ್ಯ ಸಂಚಾಲಕರಾದ ಬಿ.ಎಲ್.ಸಂತೋಷ್ ಜೀಯವರು 50 ಕೋಟಿಗೂ ಹೆಚ್ಚು ಹಣದೊಂದಿಗೆ ತೆಲಂಗಾಣ ರೆಸಾರ್ಟ್‌ನಲ್ಲಿ ಬಂಧಿತರಾದರೂ ಕೂಡಾ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ CBL IT, ED ದಾಳಿ ನಡೆಸಿರುದಿಲ್ಲ ಎಂದು ಬಿಜೆಪಿ ಮೇಲೆ ಆರೋಪಿಸಿ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿದ್ದಾರೆ.

P

ಈ ಸಂದರ್ಭದಲ್ಲಿ ತಾಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ‌ಮಹೇಶ್ ಹುಲ್ಮಾರ್,ಗೋಣಿ ಮಾಲತೇಶ್, ಮೋಹನ್ ಡಿಕೆಶಿ‌ ಅಭಿಮನಿ ಬಳಗ,‌ ಮಹಿಳಾ ಕಾಂಗ್ರೆಸ್ ‌ಅಧ್ಯಕ್ಷೆ ಪುಪ್ಪ ಶಿವಕುಮಾರ್,ಎಸ್ ಪಿ ನಾಗರಾಜ್ ಗೌಡ್ರು,ನಿರ್ಮಲ ಪಾಟೀಲ್,
ದರ್ಶನ್ ಉಳ್ಳಿ ಭಂಡಾರಿ, ಮಾಲತೇಶ್, ,ಮಲ್ಲಿಕ್ ನಾಯ್ಕ್, ಕಾರ್ಯಕರ್ತರು ಇದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!