ಶಿರಾಳಕೊಪ್ಪದಲ್ಲಿ ಕಿಡಿಕೇಡಿಗಳಿಂದ ನಿರ್ಬಂಧಿತ ಸಿ.ಎಫ್.ಐ ಸಂಘಟನೆ ಗೋಡೆ ಬರಹ ಪ್ರಕರಣ ದಾಖಲು..!!!

ಶಿರಾಳಕೊಪ್ಪದಲ್ಲಿ ಕಿಡಿಕೇಡಿಗಳಿಂದ ನಿರ್ಬಂಧಿತ ಸಿ.ಎಫ್.ಐ ಸಂಘಟನೆ ಗೋಡೆ ಬರಹ ಪ್ರಕರಣ ದಾಖಲು..!!!

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ  ನಿರ್ಭಂಧಿತ ಪಿ.ಎಫ್.ಐ-ಸಿಎಫ್.ಐ ಸಂಘಟನೆಗಳ ಗೋಡೆ ಬರಹ ಕಾಣಿಸಿಕೊಂಡಿದೆ

ಪಟ್ಟಣದ 9 ಕ್ಕೂ ಹೆಚ್ಚು ಕಡೆ ಈ ಗೋಡೆ ಬರಹವನ್ನ ನೀಲಿ ಮತ್ತು ಕೆಂಪು ಬಣ್ಣದ ಸ್ಪೇಯಿಂದ ಬರೆದು ಅದಕ್ಕೆ ಸ್ಟಾರ್  ಇಡಲಾಗಿದೆ.

ಭಾರತ ಸರ್ಕಾರ 5 ವರ್ಷಗಳ ಕಾಲ ಪಿಎಫ್ಐ ಮತ್ತು ಸಿಎಫ್ ಐ ಸಂಘಟನೆಗಳನ್ನ ನಿಷೇಧಿಸಿದ್ದು, ಸರ್ಕಾರದ ಆದೇಶವನ್ನ ಉಲ್ಲಂಘಿಸಿ ಕೆಲ ಕಿಡಿಗೇಡಿಗಳು 9 ಕ್ಕೂ ಹೆಚ್ಚು ಸ್ಥಳಗಳಲ್ಲಿ JOIN CFI ಎಂದು ಬರೆದು ಅಟ್ಟಹಾಸ ಮೆರೆದಿದ್ದಾರೆ.

ಶಿರಾಳಕೊಪ್ಪದ ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್ ನ‌ ಮೇಲೆ, ಭೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬದ ಮೇಲೆ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿಯ ಸಿಮೆಂಟ್ ಬೋರ್ಡ್ ಮತ್ತು ವಿದ್ಯುತ್ ಕಂಬದ ಮೇಲೆ,
ಚಂದ್ರಪ್ಪ ಎಂಬುವರ ಮನೆಯ ಕ್ರಾಸ್ ನ ವಿದ್ಯುತ್ ಕಂಬದ ಮೇಲೆ, ಬಿಲಾಲ್ ಎಂಬುವರ ಮನೆಯ ಬಳಿ ಇರುವ ಗ್ಯಾರೇಜ್ ನ‌ಗೋಡೆಯ ಮೇಲೆ ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆಗಳ ಮೇಲೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೇಡೆಗಳ ಮೇಲೆ JOIN CFI ಎಂದು ಗೋಡೆ ಬರಹ ಬರೆದಿದ್ದಾರೆ.

ಪೊಲೀಸರು ಗಸ್ತುತಿರುಗುವಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು. ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ Suo-Moto ಪ್ರಕರಣ ದಾಖಲಾಗಿದ್ದು. ಪೋಲಿಸರು ಬಲೆ ಬೀಸಿದ್ದಾರೆ.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!