ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿ:ಜೋಗತ್ತಿ ಮಂಜಮ್ಮ..!

ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿ:ಜೋಗತ್ತಿ ಮಂಜಮ್ಮ..!

ಪ್ರತಿಯೊಬ್ಬ ಮಕ್ಕಳಿಗೂ ವಿದ್ಯಾಭ್ಯಾಸವನ್ನು ನೀಡಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿ ಎಂದು ಜಾನಪದ ಅಕಾಡೆಮಿಯ ಅಧ್ಯಕ್ಷ ಜೋಗತ್ತಿ ಮಂಜಮ್ಮ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತೃತೀಯ ಲಿಂಗಿಯರು ಎಂದು ಮಕ್ಕಳನ್ನು ಹೊರ ಹಾಕದಿರಿ ಅವರಿಗೂ ಕೂಡ ವಿದ್ಯಾಭ್ಯಾಸವನ್ನು ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುತ್ತಾರೆ.

ನಾನು ಪಡೆದ ವಿದ್ಯಾಭ್ಯಾಸ ಜಾನಪದ ಕಲೆಯಿಂದ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಸರ್ಕಾರ ನನ್ನನ್ನು ಗುರುತಿಸಿ ಗೌರವಿಸಿದೆ ತೃತೀಯಲಿಂಗರಿಗೆ ಮೀಸಲಾತಿಯನ್ನು ಸಹ ಸರ್ಕಾರ ನೀಡಿದ್ದು ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಅನೇಕ ತೃತೀಯಲಿಂಗರು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸರ್ಕಾರಕ್ಕೆ ನಾನು 5 ಎಕರೆ ಜಾಗವನ್ನು ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದು ತೃತೀಯ ಲಿಂಗಿಯ ಮಕ್ಕಳಿಗೆ ಒಂದು ಆಶ್ರಮವನ್ನು ಕಟ್ಟಿ ವಿದ್ಯಾಭ್ಯಾಸ ಸಾಹಿತ್ಯ ಕಲೆ ಜಾನಪದ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅವರಿಗೆ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.

ಕನ್ನಡ ಭಾಷೆ ಉಳಿಯಬೇಕು ಎಂದರೆ ಪ್ರತಿಯೊಬ್ಬ ಮಕ್ಕಳು ಕನ್ನಡ ಶಾಲೆಯಲ್ಲಿ ವ್ಯಾಸಂಗವನ್ನು ಮಾಡಬೇಕು ಆ ನಿಟ್ಟಿನಲ್ಲಿ ಪೋಷಕರು ಗಮನವನ್ನು ಹರಿಸಬೇಕು ಆಂಗ್ಲ ಭಾಷೆ ಜೀವನಕ್ಕೆ ಅಗತ್ಯವಾಗಿದ್ದು ಅನಿವಾರ್ಯವಲ್ಲ ಎಲ್ಲಾ ಭಾಷೆಯನ್ನು ಪ್ರೀತಿಸಿ, ಗೌರವಿಸಿ ಆದರೆ ಮಾತೃಭಾಷೆಯನ್ನು ಎಂದಿಗೂ ಮರೆಯದಿರಿ ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಹಾಸ್ಯ ಕಲಾವಿದೆ ಸುಧಾ ಬರಗೂರು ಅವರ ತಂಡದ ವತಿಯಿಂದ ಹಾಸ್ಯ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಚಲನಚಿತ್ರ ನಟಿ ಭಾವನ, ಸಂಸದ ಬಿ ವೈ ರಾಘವೇಂದ್ರ ಎಂಐಡಿಬಿ ಅಧ್ಯಕ್ಷರಾದ ಕೆಎಸ್ ಗುರುಮೂರ್ತಿ ಪುರಸಭಾ ಅಧ್ಯಕ್ಷ ರೇಖಾ ಬಾಯಿ ಮಂಜು ಸಿಂಗ್ ಕನ್ನಡ ಯುವಕ ಸಂಘದ ಅಧ್ಯಕ್ಷರಾದ ದರ್ಶನ್ ಉಳ್ಳಿ ಮತ್ತು ಕನ್ನಡ ಯುವಕ ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!